ಮಂಡ್ಯ: ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯನು ಕೇಳ್ತಿವಿ ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಂಡ್ಯದ ಮದ್ದೂರಿನ ತರಮ್ಮನಕಟ್ಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಗೃಹ ಸಚಿವ ಪರಮೇಶ್ವರ್ -ಸತೀಶ್ ಜಾರಕಿಹೋಳಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು, ಸೀನಿಯರ್ ಲೀಡರ್ ಅನ್ನು ಭೇಟಿ ಮಾಡಬಾರದ.? ಯಾರು ಯಾರನ್ನು ಭೇಟಿ ಮಾಡಬಾರದು ಅಂತ ನಿಗಧಿ ಮಾಡಕ್ಕಾಗುತ್ತಾ? ಎಂದು ಪ್ರಶ್ನಿಸಿದರು.
ಅವಧಿಗೂ ಮುನ್ನ ಚುನಾವಣೆ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯನು ಕೇಳ್ತಿವಿ. ಅವರು ಯಾವತ್ತಾದ್ರು ಪೂರ್ಣ ಪ್ರಮಾಣದ ಸರ್ಕಾರ ಮಾಡಿದ್ರಾ? ಅನುಭವ ಇಲ್ಲ ಅದಕ್ಕೆ ಆತರ ಅಂತಾರೆ ಅಷ್ಟೆ. ಯಾವ ಸರ್ಕಾರ ಬಂದ್ರು ಅವರಿಗೆ ಅಧಿಕಾರ ಸಿಕ್ಕುದ್ರುನು ಪೂರ್ಣ ಅವಧಿಯನ್ನ ಮುಗಿಸೋಕೆ ಯಾವತ್ತು ರೆಡಿ ಇಲ್ಲ. ಅವರು ಜ್ಯೋತಿಷ್ಯ ಹೇಳೋದಾದ್ರೆ ಹೇಳಿ ನಮ್ಮವರು ಇದ್ದಾರೆ ಒಳ್ಳೆಯ ಜ್ಯೋತಿಷ್ಯ ಹೇಳುವವರಿದ್ದಾರೆ ಹೋಗಿ ಅಂತ ಹೇಳ್ತಿನಿ ಎಂದು ವ್ಯಂಗ್ಯವಾಡಿದರು.
ಚನ್ನಪಟ್ಟಣ ಚುನಾವಣೆ ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಸ್ತಾಪ ವಿಚಾರವಾಗಿ ಮಾತನಾಡಿದ ಅವರು, ಅವರ ಪಕ್ಷದ ತೀರ್ಮಾನ ಏನಾದ್ರು ಮಾಡ್ಕೋಳ್ಳಲ್ಲಿ. ಕುಮಾರಸ್ವಾಮಿ ಎಂಪಿ ಆಗೋವರೆಗೆ ಯೋಗೇಶ್ವರ್ ಬೇಕಿತ್ತು. ಅವರ ಸೆಟಲ್ ಅವರು ಮಾಡ್ಕೋಳ್ತಾರೆ ಅಷ್ಟೆ. ಡಿಕೆ ಶಿವಕುಮಾರ್, ಅವರ ತಮ್ಮ, ಅಥವಾ ಆಶ್ಚರ್ಯ ವ್ಯಕ್ತಿ ಯಾರಾದ್ರು ಹಾಗ್ತಾರೋ. ಯಾರೋ ಒಬ್ಬರನ್ನ ಅಭ್ಯರ್ಥಿ ಮಾಡ್ತೇವೆ. ತೀರ್ಮಾನ ಮಾಡಿದ್ದೇವೆ ಸೂಕ್ತ ಸಂದರ್ಭದಲ್ಲಿ ಘೋಷಣೆ ನಾವೇ ಅಭ್ಯರ್ಥಿ ಘೋಷಣೆ ಮಾಡ್ತೇನೆ. ಚುನಾವಣೆ ಸೋಲು ಗೆಲುವು ಸಹಜ. ಆಗಾದ್ರೆ ಕುಮಾರಸ್ವಾಮಿ ಗೆದ್ದಿದ್ರಾ ಅವರ ಮಗನ ನಿಲ್ಲಿಸಿದಾಗ.? ದೇವೇಗೌಡ್ರು ತುಮಕೂರಿನಲ್ಲಿ ಸೋತಿಲ್ವಾ? ಸೋಲು,ಗೆಲುವು ಯಾರ ಕೈನಲ್ಲಿ ಇಲ್ಲ ಜನರು ತೀರ್ಮಾನ ಮಾಡ್ತಾರೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಅಭ್ಯರ್ಥಿ ಘೋಷಣೆಯಾಗಲಿದೆ ಎಂದರು.
ವರದಿ: ಗಿರೀಶ್ ರಾಜ್, ಮಂಡ್ಯ
ರಾಜ್ಯದ ಆಸ್ತಿ ಮಾಲೀಕರ ಗಮನಕ್ಕೆ: ಮನೆಯಿಂದಲೇ ‘ಇ-ಖಾತಾ’ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ