ಬೆಂಗಳೂರು: ಈಗಾಗಲೇ ಬೆಂಗಳೂರಿನ ಕೆಲ ಬೇಕರಿಗಳಲ್ಲಿ ಕೇಕ್ ನಲ್ಲಿ ವಿಷಕಾರಿ ಬಣ್ಣ ಬಳಕೆ ಮಾಡಲಾಗುತ್ತಿದೆ. ಇದು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬುದಾಗಿ ತಿಳಿದು ಬಂದಿತ್ತು. ಈಗ ಬೆಂಗಳೂರಲ್ಲಿ ಕೇಕ್ ತಿಂದಂತ ಐದು ವರ್ಷದ ಮಗುವೊಂದು ಸಾವನ್ನಪ್ಪಿ, ತಂದಿ-ತಾಯಿಗಳು ಅಸ್ವಸ್ಥಗೊಂಡು ಗಂಭೀರ ಸ್ಥಿತಿಯನ್ನು ತಲುಪಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಮನೆಗೆ ಕೇಕ್ ಖರೀದಿಸಿ ಸ್ವಿಗ್ಗಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಂತ ಬಾಲರಾಜ್ ಕೊಂಡೊಯ್ದಿದ್ದಾರೆ. ಇಂತಹ ಕೇಕ್ ತಿಂದಂತ ಅವರ ಮಗ ಧೀರಜ್ (5) ವರ್ಷ ಸಾವನ್ನಪ್ಪಿದ್ದಾನೆ. ಆ ಬಳಿಕ ಅದೇ ಕೇಕ್ ತಿಂದಂತ ಬಾಲರಾಜ್ ಹಾಗೂ ಅವರ ಪತ್ನಿ ಕೂಡ ಅಸ್ವಸ್ಥಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ.
ಈ ಬಗ್ಗೆ ಕಿಮ್ಸ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದು ಧೀರಜ್ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆಗೆ ಸಾವನ್ನಪ್ಪಿದ್ದರು ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಇನ್ನೂ ಬಾಲರಾಜ್ ಮತ್ತೆ ಅವರ ಪತ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
BREAKING : ಮಾಜಿ ಸಚಿವ ಬಿ. ಶ್ರೀರಾಮುಲು ಫೇಸ್ ಬುಕ್, ಇನ್ ಸ್ಟಾಗ್ರಾಂ’ ಖಾತೆ ಹ್ಯಾಕ್
ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ: HDK ಸವಾಲು