ಮುಂಬೈ : ಕೆಲವು ನಗರಗಳಲ್ಲಿ ಬೀದಿ ಬದಿ ಮಾಡುವ ಆಹಾರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಆಹಾರ ಮಾರಾಟಗಾರರನ ಸ್ಟೋರಿ ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಹೌದು, ಈ ಬೀದಿ ಬದಿ ವ್ಯಾಪಾರಿಯ ತಿಂಗಳಿಗೆ ಗಳಿಸುವುದು ಎಷ್ಟು ಅಂತಾ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ. ಮುಂಬೈನ ವ್ಯಕ್ತಿಯೊಬ್ಬ ರಸ್ತೆಬದಿಯಲ್ಲಿ ವಡಾ ಪಾವ್ ಮಾರಾಟ ಮಾಡುವ ಮೂಲಕ ವರ್ಷಕ್ಕೆ 24 ಲಕ್ಷ ರೂಪಾಯಿ ಗಳಿಸುತ್ತಿದ್ದಾನೆ. ಸಧ್ಯ ಈತನ ಅದ್ಭುತ ಗಳಿಕೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೊ 1 ಮಿಲಿಯನ್ ವೀಕ್ಷಣೆ ಹೊಂದಿದೆ.!
ವೈರಲ್ ವಿಡಿಯೋ ಮೂಲಕ ಈ ಮಾಹಿತಿ ಬೆಳಕಿಗೆ ಬಂದಿದೆ. ಈ ವೀಡಿಯೊ ಸುಮಾರು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. Instagram ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊದಲ್ಲಿ, ಈ ವಡಾ ಪಾವ್ ಬೀದಿ ವ್ಯಾಪಾರಿ ವಾರ್ಷಿಕ ಆದಾಯ 24 ಲಕ್ಷಗಳು. ಇನ್ನು ಈ ಬೀದಿ ವ್ಯಾಪಾರಿಯ ಮಾಸಿಕ ಆದಾಯ ಸುಮಾರು 2.8 ಲಕ್ಷಗಳು ಅಂದ್ರೆ ನೀವು ನಂಬಲೇಬೇಕು. ಹೌದು, ಈ ವ್ಯಾಪಾರಿ ತಿಂಗಳಿಗೆ ಲಕ್ಷ ಲಕ್ಷ ಎಣಿಸುತ್ತಿದ್ದಾರೆ. ಇನ್ನು 2.8 ಲಕ್ಷದಲ್ಲಿ ಸುಮಾರು 80 ಸಾವಿರ ರೂಪಾಯಿ ಖರ್ಚು ಬಂದ್ರೂ, ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿ ಉಳಿತಾಯ ಮಾಡುತ್ತಿದ್ದಾರೆ. ಸಧ್ಯ ಇವರ ಗಳಿಕೆ ಕೇಳಿದ ನೆಟ್ಟಿಗರು ಅಕ್ಷರಶಃ ಶಾಕ್ ಆಗಿದ್ದಾರೆ.
ಅಂದ್ಹಾಗೆ, ಈ ವೀಡಿಯೊ ಬೀದಿ ವ್ಯಾಪಾರಿಗಳ ಗಳಿಕೆಯನ್ನ ಬಹಿರಂಗಪಡಿಸುತ್ತಿದ್ದು, ದೊಡ್ಡ ದೊಡ್ಡ ಕೆಲಸ ಮಾಡಿದರೂ ಇಷ್ಟು ಆದಾಯ ಬರುತ್ತಿಲ್ಲ, ಈ ವ್ಯಾಪಾರ ಚೆನ್ನಾಗಿದೆ ಎಂದು ಈ ವಿಡಿಯೋ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ವಿಡಿಯೋ ನೋಡಿ.!
https://www.instagram.com/reel/DAqxk6moqcY/?utm_source=ig_web_copy_link
ALERT : ಟೀ ಜೊತೆಗೆ `ಸಿಗರೇಟ್’ ಸೇದುವವರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್!
ಶೀಘ್ರವೇ ಯಲಹಂಕ ಬಳಿ 153 ಎಕರೆಯಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ಶಂಕುಸ್ಥಾಪನೆ: ಸಚಿವ ಈಶ್ವರ್ ಖಂಡ್ರೆ