ತುಮಕೂರು: ಜಾತಿ ಜನ ಗಣತಿ ಸರ್ಕಾರ ಮರು ಪರಿಶೀಲನೆ ಮಾಡುವ ಅಗತ್ಯವಿದೆ ಎಂಬುದಾಗಿ ಶ್ರೀ ನಂಜಾವಧೂತ ಸ್ವಾಮೀಜಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಶರನ್ನವರಾತ್ರಿ ಅಂಗವಾಗಿ ಸೋಮವಾರ ನಡೆದ ಧರ್ಮ ಧ್ವಜ ಪ್ರತಿಷ್ಠಾಪನ ಮಹೋತ್ಸವದಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಜಾತಿ ಜನ ಗಣತಿ ವರದಿ ಮರು ಪರಿಶೀಲಿಸಬೇಕೆಂದು ಅಗ್ರಹಿಸಿದರು.
ರಾಜ್ಯದಲ್ಲಿರುವ ಒಕ್ಕಲಿಗ ಮತ್ತು ಲಿಂಗಾಯಿತ ಸೇರಿದಂತೆ ಹಲವಾರು ಸಮುದಾಯಗಳ ಜಾತಿ ಜನಗಣತಿ ಸರಿಯಾದ ಕ್ರಮದಲ್ಲಿ ನಡೆದಿಲ್ಲ, ಇದು ಹಲವಾರು ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಉದ್ಯೋಗ ಗಳ ಮೇಲೆ ಪರಿಣಾಮ ಬೀರಲಿದೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆತುರ ಪಡದೆ ಜಾತಿ ಜನಗಣತಿ ಅನುಷ್ಠಾನಕ್ಕಿಂತ ಮುಂಚೆ ಮರು ಪರಿಶೀಲಿಸುವ ಅಗತ್ಯವಿದೆ ಎಂದರು.
ಮತ್ತೊಮ್ಮೆ ಜಾತಿ ಗಣತಿ ರಾಜ್ಯದಲ್ಲಿ ನಡೆದರೆ ಎಲ್ಲಾ ಸಮಾಜಗಳಿಗೂ ಸಾಮಾಜಿಕ ನ್ಯಾಯ ಸಿಗಲಿದೆ ಈ ಬಗ್ಗೆ ಆತುರದ ನಿರ್ಧಾರ ಬೇಡ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮಿಜಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
BIG UPDATE: ಅಕ್ಟೋಬರ್.18ರ ಸಚಿವ ಸಂಪುಟ ಸಭೆಗೆ ಜಾತಿ ಗಣತಿ ವರದಿ ಮಂಡನೆ: ಸಿಎಂ ಸಿದ್ದರಾಮಯ್ಯ ಘೋಷಣೆ
BREAKING : ಮಾಜಿ ಸಚಿವ ಬಿ. ಶ್ರೀರಾಮುಲು ಫೇಸ್ ಬುಕ್, ಇನ್ ಸ್ಟಾಗ್ರಾಂ’ ಖಾತೆ ಹ್ಯಾಕ್
BREAKING: ಜಾತಿಗಣತಿ ವರದಿ ಜಾರಿ ವಿಚಾರ: ಅ.18ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ- ಸಿಎಂ ಸಿದ್ಧರಾಮಯ್ಯ