ಬೆಂಗಳೂರು : ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಪ್ರಜೆ ಸೇರಿ ನಾಲ್ವರು ವಿದೇಶಿಗರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿಗಣಿ ಪೊಲೀಸರು ಪ್ರಮುಖ ಆರೋಪಿ ಫರ್ವೇಜ್ ನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮೆಹದಿ ಪೌಂಡೇಷನ್ ಸಂಸ್ಥೆಯ ಪ್ರಮುಖ ನಾಯಕನಾಗಿದ್ದ ಆರೋಪಿ ಫರ್ವೇಜ್, ಪಾಕಿಸ್ತಾನದ ಪ್ರಜೆಗಳು ಭಾರತಕ್ಕೆ ಬರಲು ನೆರವು ನೀಡಿದ್ದ. ಬಂಧಿತರ ಪಾಕ್ ಪ್ರಜೆಗಳಿಗೆ ಭಾರತೀಯ ದಾಖಲೆಗಳನ್ನು ಮಾಡಿಸಿಕೊಟ್ಟಿದ್ದ. ಯೂನಸ್ ಆಲ್ಗೋರ್ ಧರ್ಮಗುರುವಿನ ಪ್ರಚಾರಕನಾಗಿದ್ದ ಫರ್ವೇಜ್, ಯೂನಸ್ ಆಲ್ಗೋರ್ ಸೂಚನೆಯಂತೆ ಪಾಕ್ ಪ್ರಜೆಗಳನ್ನು ಭಾರತಕ್ಕೆ ಕರೆಸಿದ್ದ ಎನ್ನಲಾಗಿದೆ.
ಸದ್ಯ ಫರ್ವೇಜ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿ ಫರ್ವೆಜ್ ನ ಸಂಪರ್ಕದಲ್ಲಿರುವ ಮತ್ತಷ್ಟು ಮಂದಿಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.