ಬೆಂಗಳೂರು: ನಮ್ಮ ಬೇಡಿಕೆ ಈಡೇರಿಸೋವರೆಗೂ ಅನಿರ್ಧಿಷ್ಟಾವಧಿಯ ಮುಷ್ಕರ ಮುಂದುವರೆಯಲಿದೆ. ನಮ್ಮ ಮುಷ್ಕರ ಅಂತ್ಯಗೊಂಡಿಲ್ಲ. ಹಿಂಪಡೆದೂ ಇಲ್ಲ ಎಂಬುದಾಗಿ ಕರ್ನಾಟಕ ರಾಜ್ಯ ಪಿಡಿಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಹಾಗೂ ಹೋರಾಟ ಸಮಿತಿಯ ಅಧ್ಯಕ್ಷರಾದಂತ ರಾಜು ವಾರದ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಕನ್ನಡ ನ್ಯೂಸ್ ಜೊತೆಗೆ ಮಾತನಾಡಿದಂತ ಅವರು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿಯ ಮುಷ್ಕರವನ್ನು ಕರ್ನಾಟಕ ರಾಜ್ಯ ಪಿಡಿಓ ಅಧಿಕಾರಿಗಳ ಸಂಘದಿಂದ ಗ್ರಾಮ ಪಂಚಾಯ್ತಿ ಅಧಿಕಾರಿ, ನೌಕರರು ನಡೆಸಲಾಗುತ್ತಿತ್ತು. ಮುಷ್ಕರಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಅನುಮತಿ ನಿರಾಕರಿಸಿದ ಕಾರಣ, ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ಮುಂದುವರೆಸಲಾಗುತ್ತಿದೆ ಎಂದರು.
ಅಕ್ಟೋಬರ್.7, 2024ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆಯಲಿದೆ. ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಕಚೇರಿಯ ಮುಂದೆ ಗ್ರಾಮ ಪಂಚಾಯ್ತಿ ಪಿಡಿಓ ಸೇರಿದಂತೆ ಎಲ್ಲಾ ನೌಕರರು ಬೇಡಿಕೆ ಈಡೇರಿಸುವಂತೆ ಅನಿರ್ಧಿಷ್ಟಾವಧಿಯ ಮುಷ್ಕರವನ್ನು ಮುಂದುವರೆಸಲಿದ್ದೇವೆ. ಅಕ್ಟೋಬರ್.10ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸಭೆ ನಿಗದಿಯಾಗಿದೆ. ಆ ಸಭೆಯಲ್ಲಿ ನಮ್ಮ ಬೇಡಿಕೆ ಈಡೇರಿಸೋ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ರೇ, ಮುಷ್ಕರ ಅಂತ್ಯಗೋಳಿಸೋದ ಅಥವಾ ಮುಂದುವರೆಸೋದಾ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ಗ್ರಾಮ ಪಂಚಾಯ್ತಿ ನೌಕರರ ಮುಷ್ಕರ ಮುಂದುವರೆಯಲಿದೆ ಎಂಬುದಾಗಿ ತಿಳಿಸಿದರು.
ನಾಳೆಯಿಂದ ಯಾವುದೇ ಗ್ರಾಮ ಪಂಚಾಯ್ತಿ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ. ಅಕ್ಟೋಬರ್.7ರಂದು ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ನೌಕರರು ಎಲ್ಲರೂ ತಪ್ಪದೇ ಭಾಗವಹಿಸುವಂತೆ ಮನವಿ ಮಾಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಬಿಗ್ ಬಾಸ್ ಕನ್ನಡಕ್ಕೆ ಸಂಕಷ್ಟ: ‘ಚೈತ್ರಾ ಕುಂದಾಪುರ’ ಹೊರಹಾಕುವಂತೆ ‘ಸಾಗರದ ವಕೀಲ ಭೋಜರಾಜ್’ ಲೀಗಲ್ ನೋಟಿಸ್
‘ಸಾವರ್ಕರ್ ಮಾನನಷ್ಟ ಮೊಕದ್ದಮೆ’: ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್