ಬೆಂಗಳೂರು : ಇ.ಇ.ಡಿಎಸ್. ತಂತ್ರಾಂಶದಲ್ಲಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಬೋಧಕ /ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ(1) ಸುತ್ತೋಲೆಯಲ್ಲಿ ರಾಜ್ಯದ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಶಿಕ್ಷಕರ ಸೇವಾ ವಿವರಗಳನ್ನು ಆಯಾ ಶಾಲಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಲಾಗಿನ್ ಮೂಲಕವೇ ಗಣಕೀಕರಿಸುವ ಸಂಬಂದ ಆಡಳಿತ ಮಂಡಳಿಗಳಿಂದ ಸೇವಾ ವಹಿಗಳನ್ನು ಪಡೆದು ಪರಿಶೀಲಿಸಿ ಕರಾರುವಾಕ್ಕಾದ ಸೇವಾ ವಿವರಗಳನ್ನು ತಮ್ಮ ಲಾಗಿನ್ ಮೂಲಕ ಗಣಕೀಕರಿಸಲು ತಿಳಿಸಲಾಗಿರುತ್ತದೆ.
ಪ್ರಸ್ತುತ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಅನುದಾನಿತ ಶಿಕ್ಷಕರ ಮಾಹಿತಿಯನ್ನು ಪರಿಶೀಲಿಸಲಾಗಿ ಬೋಧಕ/ಬೋಧಕೇತರ ನೌಕರರ ಸೇವಾ ವಿವರಗಳು ಸಮರ್ಪಕವಾಗಿ ಗಣಕೀಕರಣಗೊಂಡಿಲ್ಲದಿರುವುದನ್ನು ಗಮನಿಸಲಾಗಿದೆ. ಖಜಾನೆಯಿಂದ ವೇತನ ಸೆಳೆಯುತ್ತಿರುವ ಅನುದಾನಿತ ಶಾಲಾ ಸಿಬ್ಬಂದಿಯು ಯಾವುದೇ ಕಾರಣಕ್ಕೂ ಇ.ಇ.ಡಿ.ಎಸ್ ತಂತ್ರಾಂಶದಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣಕ್ಕಾಗಿ ಅವಕಾಶ ಕಲ್ಪಿಸಲಾಗಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಸದರಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ. ಇದರಿಂದ ಹೆಚ್. ಆರ್.ಎಮ್ ಎಸ್ ನಲ್ಲಿನ ಕಾರ್ಯನಿರತ ಶಿಕ್ಷಕರಿಗೂ ಇ.ಇ.ಡಿ.ಎಸ್ ನಲ್ಲಿನ ಮಾಹಿತಿಗೂ ಹೆಚ್ಚು ವ್ಯತ್ಯಾಸವಿರುತ್ತದೆ.
ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ಹಾಗೂ ಪ್ರಸ್ತುತ ಉಲ್ಲೇಖ (2)ರಂತೆ ಅನುದಾನಿತ ಶಾಲಾಶಿಕ್ಷಕರ ನೇಮಕಾತಿ ಸಂಬಂಧ ಹೊರಡಿಸಲಾಗಿರುವ ಆದೇಶದನ್ವಯ ನೇಮಕಾತಿ ಪ್ರಕ್ರಿಯೆಯನ್ನು ತಂತ್ರಾಂಶದ ಮೂಲಕ ನಿರ್ವಹಿಸಬೇಕಿರುತ್ತದೆ. ಅದರಂತೆ ಪ್ರಥಮ ಹಂತದಲ್ಲಿ ರಾಜ್ಯದ ಎಲ್ಲಾ ಅನುದಾನಿತ ಶಾಲೆಗಳ ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಬೋಧಕ/ಬೋಧಕೇತರ ನೌಕರರ ಮಾಹಿತಿಗಳನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಇಂದೀಕರಿಸಿ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕೆಳಕಂಡಂತೆ ಕ್ರಮ ವಹಿಸಲು ಸೂಚಿಸಿದೆ.
1. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಅನುದಾನಿತ ಶಾಲೆಗಳ ಮಾಹಿತಿಯನ್ನು ಸಂಗ್ರಹಿಸಿ, ಶಾಲೆಗಳು ಸಹಾಯಾನುದಾನಕ್ಕೆ ಒಳಪಟ್ಟ, ಆದೇಶ, ನೌಕರರು ಅನುದಾನ ಸಹಿತ ಆದೇಶಗಳನ್ನು ಅನುದಾನಕ್ಕೊಳಪಟ್ಟ ಪರಿಶೀಲಿಸಿ ದೃಢೀಕರಿಸಿಕೊಳ್ಳುವುದು. 2. ಎಸ್. ಎ.ಟಿ.ಎಸ್ ತಂತ್ರಾಂಶದಲ್ಲಿ ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಅನುದಾನಿತ ಶಾಲೆಗಳ ಮಾಹಿತಿಗಳು ನಿಖರವಾಗಿ ನಮೂದಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.
3. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ರಾಜ್ಯದ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಶಿಕ್ಷಕರ ಸೇವಾ ವಹಿಗಳನ್ನು ಸಂಬಂದಿಸಿದ ಆಡಳಿತ ಮಂಡಳಿಗಳಿಂದ ಪಡೆದು ಪರಿಶೀಲಿಸಿ ಕರಾರುವಕ್ಕಾದ ಸೇವಾ ವಿವರಗಳನ್ನು ತಮ್ಮ ಲಾಗಿನ್ ಮೂಲಕ ಗಣಕೀಕರಿಸುವುದು.
4. ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಬೋಧಕ/ಬೋಧಕೇತರ ನೌಕರರ ಪ್ರಥಮ ಎಲ್.ಐ.ಸಿ ಪಾಲಿಸಿ ಸಂಖ್ಯೆಯನ್ನು (ಹೆಚ್,ಆರ್.ಎಂ.ಎಸ್‌ನಲ್ಲಿರುವಂತೆ) ತಪ್ಪಿಲ್ಲದ ಕ್ರಮವಾಗಿ ನಮೂದಿಸುವುದು.
5. ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಬೋಧಕ/ಬೋಧಕೇತರ ನೌಕರರ ಹೆಸರನ್ನು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಕ್ರಮ ಬದ್ಧವಾಗಿರುವ ಬಗ್ಗೆ ಪರಿಶೀಲಿಸಿ ದೃಢೀಕರಿಸಿಕೊಳ್ಳುವುದು
6. ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಬೋಧಕ/ಬೋಧಕೇತರ ನೌಕರರ ಎಲ್ಲಾ ಮಾಹಿತಿಗಳನ್ನು ಸೇವಾವಹಿಯಂತೆ ಯಾವುದೇ ತಪ್ಪಿಲ್ಲದಂತೆ ದಾಖಲಿಸುವುದು.
7. ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಬೋಧಕ/ಬೋಧಕೇತರ ನೌಕರರ ಸೇವಾ ವಿವರದ ಯಾವುದೇ ಅಂಕಣ ಖಾಲಿ ಉಳಿಯದಂತೆ ಎಚ್ಚರ ವಹಿಸುವುದು
8. ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಬೋಧಕ/ಬೋಧಕೇತರ ನೌಕರರ Service Details ನೇಮಕಾತಿಯಾದ ಅಂಕಣದಲ್ಲಿ ಶಾಲೆಯಿಂದ ವರ್ಗಾವಣೆಯಾಗಿದ್ದಲ್ಲಿ ಇಲ್ಲಿಯವರೆಗೆ ವರ್ಗಾವಣೆಯಿಂದ ಬದಲಾದ ಎಲ್ಲಾ ಆಡಳಿತ ಮಂಡಳಿಗಳ ಹಾಗೂ ಶಾಲೆಗಳ ಮಾಹಿತಿಗಳನ್ನು ಕ್ರಮಬದ್ಧವಾಗಿ ನಮೂದಿಸುವುದು
9. ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಬೋಧಕ/ಬೋಧಕೇತರ ನೌಕರರ ಕಾರ್ಯ ನಿರ್ವಹಿಸುತ್ತಿದ್ದ ಶಾಲೆ ಶೂನ್ಯ ಶಾಲೆಯಾದ ಕಾರಣ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾದ ಸಂದರ್ಭದಲ್ಲಿ ಮಾಡಲಾದ Working arrangement ಮಾಹಿತಿಯನ್ನು ಕ್ರಮಬದ್ಧವಾಗಿ Service Details ಅಂಕಣದಲ್ಲಿ ನಮೂದಿಸುವುದು
10. ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಶಿಕ್ಷಕರ ಬೋಧನಾ ವಿಷಯ, ಖಾಯಂ ಪೂರ್ವ ಸೇವಾ ಅವಧಿ ಘೋಷಣೆ ಮಾಹಿತಿ, ಮುಂಬಡ್ತಿ ಮಾಹಿತಿಯನ್ನು ತಪ್ಪದೇ ನಮೂದಿಸುವುದು ಅದೇ ರೀತಿ ಬೋಧಕೇತರ ಸಿಬ್ಬಂದಿ ಮಾಹಿತಿಯನ್ನು ಭರ್ತಿಮಾಡುವುದು.
11. ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾಗಿ ನಿವೃತ್ತಿ ಹೊಂದಿದ ನೌಕರರ ಮಾಹಿತಿಯನ್ನು ತಂತ್ರಾಂಶದಲ್ಲಿ ಇಂದೀಕರಿಸುವ ಅವಶ್ಯಕತೆ ಇರುವುದಿಲ್ಲ
12. ಅಮಾನತ್ತು/ ಶಿಸ್ತು ಕ್ರಮ/ ದಂಡನೆ ಆಗಿರುವ ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಶಿಕ್ಷಕರ/ನೌಕರರ ಮಾಹಿತಿಯನ್ನು ಅವರ ಸೇವಾ ವಿವರದಲ್ಲಿ ನಮೂದಿಸುವುದು ಹಾಗೂ ಇನ್ನಿತರ ಎಲ್ಲಾ ಪ್ರಮುಖ ಸೇವಾ ವಿವರಗಳನ್ನು ಪರಿಶೀಲಿಸಿ ಅಪ್‌ಡೇಟ್ ಮಾಡುವುದು
13. ಕೆಲವು ಶಿಕ್ಷಕರ/ನೌಕರರ ಸೇವಾ ವಿವರಗಳು ಒಂದಕ್ಕಿಂತ ಹೆಚ್ಚು ಬಾರಿ ನಮೂದಿಸಲಾಗಿದ್ದು
ಒಂದನ್ನು ಮಾತ್ರ ಉಳಿಸಿ ಕೊಂಡು ಮತ್ತೊಂದನ್ನು ಡಿಲೀಟ್ ಮಾಡುವುದು, ಯಾವುದೇ
ಕಾರಣಕ್ಕೂ ಡಬಲ್ ಎಂಟ್ರಿಗೆ ಅವಕಾಶ ನೀಡಬಾರದು 14. ಸಹಶಿಕ್ಷಕರು ಮುಖ್ಯ ಶಿಕ್ಷಕರ ಹುದ್ದೆಯಲ್ಲಿ ತಾತ್ಕಾಲಿಕ ಪ್ರಭಾರದಲ್ಲಿದ್ದಂತಹ ಸಂದರ್ಭದಲ್ಲಿ ಸಹ ಶಿಕ್ಷಕರಾಗಿಯೇ ಅವರ ಸೇವಾ ವಿವರಗಳನ್ನು ಗಣಕೀಕರಿಸುವುದು.
ಈ ಮೇಲಿನ ಸೂಚನೆಗಳಂತೆ ಬಟವಾಡೆ ಅಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುದಾನಿತ ಬೋಧಕ/ಬೋಧಕೇತರ ನೌಕರರ ವರ್ಗದವರ ಸೇವಾ ವಹಿಗಳನ್ನು ಪರಿಶೀಲಿಸಿ ನಿಖರ ಮಾಹಿತಿಗಳನ್ನು ಇಇಡಿಎಸ್ ತಂತ್ರಾಂಶದಲ್ಲಿ ದಿನಾಂಕ:10/10/2024 ರೊಳಗೆ ಇಂದೀಕರಿಸಿ ಅಂತಿಮಗೊಳಿಸಿರುವ ಬಗ್ಗೆ ತಮ್ಮ ಲಾಗಿನ್ ನಲ್ಲಿ ಅಧಿಕಾರಿಗಳೇ ಖುದ್ದು ಪರಿಶೀಲಿಸಿ ಖಚಿತ ಪಡಿಸಲು ಸೂಚಿಸಿದೆ.
ಮುಂದುವರೆದು ಈ ಸಂದರ್ಭದಲ್ಲಿ ಕರ್ತವ್ಯ ನಿರ್ಲಕ್ಷ್ಯತೆ ತೋರಿ ನಿಖರ ಮತ್ತು ಪ್ರಮಾಣೀಕೃತ ಅಗತ್ಯ ಸೇವಾ ವಿವರಗಳನ್ನು ಇಂದೀಕರಿಸದೇ ತಪ್ಪಾಗಿ ಮಾಹಿತಿ ನಮೂದಿಸಿರುವುದು ಗಮನಕ್ಕೆ ಬಂದಲ್ಲಿ ಸಂಬಂಧಿಸಿದ ಬಟವಾಡೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಮಾಡಲಾಗುವುದು. ಶಿಫಾರಸ್ಸು
ಮುಂದುವರೆದು ಈ ಹಂತದಲ್ಲಿ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಯಾವುದೇ ತಾಂತ್ರಿಕ ۵n karonlineserviceshelp@gmail.com 2- ಮೂಲಕ ಮನವಿ ಸಲ್ಲಿಸಲು ತಿಳಿಸಿದೆ. ಮೇಲ್ಕಂಡ ಸೂಚನೆಗಳಂತೆ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ತಮ್ಮ ವ್ಯಾಪ್ತಿಯ ಎಲ್ಲಾ ನಿಯಮಾನುಸಾರ ಅನುದಾನ ಸಹಿತ ಅನುಮೋದನೆಯಾದ ಬೋಧಕ /ಬೋಧಕೇತರ ಸೇವಾ ವಿವರಗಳನ್ನು ಕ್ರಮಬದ್ದವಾಗಿ ಉಪನಿರ್ದೇಶಕರು(ಆಡಳಿತ) ಇಂದೀಕರಿಸಿರುವುದನ್ನು ಇವರು ಖಚಿತಪಡಿಸಿಕೊಂಡು ದೃಢೀಕರಣದೊಂದಿಗೆ ವರದಿಯನ್ನು online ಮುಖಾಂತರ ಇ.ಇ.ಡಿ.ಎಸ್ ಶಾಖೆಗೆ ನೀಡುವುದು.