ನವದೆಹಲಿ : ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ಖಾತೆಯನ್ನ ಭಾರತದಲ್ಲಿ ತಡೆಹಿಡಿಯಲಾಗಿದೆ.
ಒಂದು ತಿಂಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ವಿವಾದಾತ್ಮಕ ಬೋಧಕನನ್ನ ಪಾಕಿಸ್ತಾನ ಸನ್ಮಾನಿಸಿದ ರೀತಿಯನ್ನ ವಿದೇಶಾಂಗ ಸಚಿವಾಲಯ (MEA) ಖಂಡಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
“ಝಾಕಿರ್ ನಾಯ್ಕ್ ಅವರನ್ನು ಪಾಕಿಸ್ತಾನದಲ್ಲಿ ಸ್ವಾಗತಿಸಲಾಗುತ್ತಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ. ಅವರನ್ನ ಅಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಗಿದೆ” ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ತಮ್ಮ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
“ಪಲಾಯನ ಮಾಡಿದ ಭಾರತೀಯ ವ್ಯಕ್ತಿಗೆ ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಸ್ವಾಗತ ದೊರೆತಿರುವುದು ನಮಗೆ ಆಶ್ಚರ್ಯವೇನಲ್ಲ. ಇದು ನಿರಾಶಾದಾಯಕ ಮತ್ತು ಖಂಡನೀಯವಾದ್ರು ಇದು ಆಶ್ಚರ್ಯಕರವಲ್ಲ” ಎಂದು ಅವರು ಹೇಳಿದರು.
ನಾಯಕ್ ಅವರ ಪಾಸ್ಪೋರ್ಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, ನಾಯಕ್ ಪಾಕಿಸ್ತಾನಕ್ಕೆ ಯಾವ ಪಾಸ್ಪೋರ್ಟ್ನಲ್ಲಿ ಪ್ರಯಾಣಿಸಿದ್ದಾರೆ ಎಂಬುದು ಭಾರತಕ್ಕೆ ಸ್ಪಷ್ಟವಾಗಿಲ್ಲ ಎಂದು ಹೇಳಿದರು.
#WATCH | MEA Spokesperson Randhir Jaiswal says, "We have seen reports that he (Zakir Naik) has been feted into Pakistan and warmly welcomed there. It is not surprising for us that an Indian fugitive has received a high-level welcome in Pakistan. It is disappointing and… pic.twitter.com/ZqWjr2ayln
— ANI (@ANI) October 4, 2024
ಸಂಪುಟದಲ್ಲಿ ಚರ್ಚಿಸಿ ಒಳ ಮೀಸಲಾತಿ ಜಾರಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
‘ತಂದೆ’ ಸಾವಿಗೆ ಪ್ರತೀಕಾರ ; 22 ವರ್ಷ ಕಾದು ಅದೇ ಮಾದರಿಯಲ್ಲಿ ಕೊಲೆಗಾರನ ಕೊಂದ ಮಗ
BREAKING : ಛತ್ತೀಸ್ ಗಢದಲ್ಲಿ ‘ಸೈನಿಕರು- ಮಾವೋವಾದಿ’ಗಳ ನಡುವೆ ಎನ್ಕೌಂಟರ್ ; 30 ‘ನಕ್ಸಲರ’ ಹತ್ಯೆ