ಬೆಂಗಳೂರು: ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ಧರಾಯಮ್ಯ ವಿರುದ್ಧ ಈಗಾಗಲೇ ದೂರುದಾರ ಸ್ನೇಹಮಯಿ ಕೃಷ್ಣ ಅವರು ಇಡಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಕೇಸ್ ಕೂಡ ದಾಖಲಾಗಿದೆ. ಈಗ ಮುಡಾ ಕೇಸಲ್ಲಿ ಸಿಎಂ ಸಿದ್ಧರಾಮಯ್ಯಗೆ ಮತ್ತೊಂದು ಕಂಟಕ ಎನ್ನುವಂತೆ ಇಡಿಗೆ ಮತ್ತೊಂದು ದೂರು ನೀಡಲಾಗಿದೆ.
ಇಂದು ಜಾರಿ ನಿರ್ದೇಶನಾಲಯಕ್ಕೆ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ಮುಡಾ ಸೈಟ್ ವಾಪಾಸ್ ನೀಡಿದ್ದಾರೆ. ಇದಕ್ಕೆ ಅವಕಾಶ ನೀಡಕೂಡದು. ಸೈಟ್ ವಾಪಾಸ್ಸು ನೀಡುವ ಮೂಲಕ ಸಾಕ್ಷ್ಯ ನಾಶದ ಅವಕಾಶ ಇರುತ್ತದೆ. ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದಾಗಿ ದೂರು ನೀಡಿದ್ದಾರೆ.
ಇನ್ನೂ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಇಡಿಯಲ್ಲಿ ದೂರು ದಾಖಲಾಗಿ, ಆ ಬಳಿಕ ಇಸಿಐಆರ್ ದಾಖಲಾದ ನಂತ್ರ ಮುಡಾ 14 ನಿವೇಶನಗಳನ್ನು ವಾಪಾಸ್ಸು ನೀಡಿದ್ದಾರೆ. ಇದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಇಡಿಗೆ ಸಲ್ಲಿಸಿರುವಂತ ದೂರಿನಲ್ಲಿ ಪ್ರದೀಪ್ ಕುಮಾರ್ ಒತ್ತಾಟಿಸಿದ್ದಾರೆ.
BREAKING: ಲೈಂಗಿಕ ಕಿರುಕುಳ ಕೇಸಲ್ಲಿ ‘ಜಾನಿ ಮಾಸ್ಟರ್’ಗೆ ತಾತ್ಕಾಲಿಕ ರಿಲೀಫ್: ‘ಕೋರ್ಟ್’ನಿಂದ 5 ದಿನ ಜಾಮೀನು ಮಂಜೂರು