ಮೈಸೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಕೂಡ ಅಂತರ ಕಾಯ್ದುಕೊಂಡಿಲ್ಲ ಎಂಬುದಾಗಿ ಶಾಸಕ ಜಿ ಟಿ ದೇವೇಗೌಡ ಅವರು ಸ್ಪಷ್ಟ ಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ಜೆಡಿಎಸ್ ಬಿಟ್ಟುಬಿಡುವ ವಿಚಾರವಾಗಿ ಮಾತನಾಡಿ, ಈಗ ಬಿಟ್ಟು ಹೋದರೆ ಯಾರು ತಾನೆ ಸೇರಿಸಿಕೊಳ್ಳುತ್ತಾರೆ. ಈಗ ಅದಕ್ಕೆ ಸೂಕ್ತವಾದ ಸಮಯವಲ್ಲ. ಚುನಾವಣೆ ಬಂದಾಗ ನೋಡಿಕೊಳ್ಳೋಣ ಎಂದರು.
ನಾನು ಕುಮಾರಸ್ವಾಮಿ ರಾಜೀನಾಮೆ ಬಗ್ಗೆ ಮಾತ್ರ ಮಾತನಾಡಿಲ್ಲ. ಎಫ್ಐಆರ್ ಆಗಿರುವ ಎಲ್ಲರೂ ರಾಜೀನಾಮೆ ಕೊಡ್ತೀರಾ ಎಂದು ಮಾತನಾಡಿರೋದು. ಪಕ್ಷದಲ್ಲಿ ನನ್ನನ್ನು ಕೋರ್ ಕಮಿಟಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಇದಕ್ಕಿಂತ ಬೇರೆ ಇನ್ನೇನು ಬೇಕು. ಹಿಂದೆಯೂ ಕಾಂಗ್ರೆಸ್ ನವರು ಬಂದು ಪಕ್ಷಕ್ಕೆ ಕರೆದಿದ್ದರು. ಆಗ ದೇವೇಗೌಡರು ಮನೆಗೆ ಬಂದು ಸಮಾಧಾನ ಮಾಡಿದರು. ಹಿರಿಯರ ಮಾತಿಗೆ ಬೆಲೆ ಕೊಟ್ಟು ಜೆಡಿಎಸ್ ಪಕ್ಷದಲ್ಲೇ ಉಳಿದುಕೊಂಡಿದ್ದೇನೆ. ಪಕ್ಷ ಅಧಿಕಾರದಲ್ಲಿದ್ದಾಗ ನನಗೇನು ಕೊಟ್ಟಿದ್ದರು. ಆಗಲೇ ನಾನು ಪಕ್ಷ ಬಿಟ್ಟು ಹೋಗಲಿಲ್ಲ. ಇವಾಗ ಏನಾದ್ರು ಕೊಡಲಿಕ್ಕೆ ಅವರ ಬಳಿ ಏನು ಅಧಿಕಾರ ಇದೆ ಎಂಬುದಾಗಿ ಮೈಸೂರಿನಲ್ಲಿ ಪರೋಕ್ಷವಾಗಿ ಅಸಮಾಧಾನವನ್ನು ಶಾಸಕ ಜಿ ಟಿ ದೇವೇಗೌಡ ಹೊರ ಹಾಕಿದರು.
BREAKING: ಮುಡಾ ಕೇಸ್: ಸಿಎಂ ಸಿದ್ಧರಾಮಯ್ಯ ವಿರುದ್ಧ EDಗೆ ಮತ್ತೊಂದು ದೂರು | CM Siddaramaiah
BREAKING: ಲೈಂಗಿಕ ಕಿರುಕುಳ ಕೇಸಲ್ಲಿ ‘ಜಾನಿ ಮಾಸ್ಟರ್’ಗೆ ತಾತ್ಕಾಲಿಕ ರಿಲೀಫ್: ‘ಕೋರ್ಟ್’ನಿಂದ 5 ದಿನ ಜಾಮೀನು ಮಂಜೂರು