ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿದ್ದಂತ ಜಾನಿ ಮಾಸ್ಟರ್ ಅವರಿಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಐದು ದಿನಗಳ ಕಾಲ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ತಮಿಳಿನ ತಿರುಚಿತ್ರಬಲಂ ಸಿನಿಮಾದ ಕೋರಿಯೋಗ್ರಫಿಗಾಗಿ ಜಾನಿ ಮಾಸ್ಟರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಈ ರಾಷ್ಟ್ರಪ್ರಶಸ್ತಿ ಸಮಾರಂಭ ಅಕ್ಟೋಬರ್.6ರಿಂದ 10ರವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಸಮಾರಂಭದಲ್ಲಿ ಭಾಗಿಯಾಗಲು ಜಾನಿ ಮಾಸ್ಟರ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಲಾಗಿದೆ.
ಅಂದಹಾಗೇ ಮಹಿಳೆಯೊಬ್ಬರು ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಕೇಸ್ ದಾಖಲಿಸಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 376, 506, 323ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತೆಲುಗಿನ ಖ್ತಾಯ ನೃತ್ಯ ಸಂಯೋಜಕರಾಗಿರುವಂತ ಜಾನಿ ಮಾಸ್ಟರ್, ಕನ್ನಡ ಸಿನಿಮಾಗಳಲ್ಲಿಯೂ ಕೋರಿಯೋಗ್ರಾಫಿ ಮಾಡುತ್ತಿದ್ದಾರೆ.
BIG UPDATE : ನನಗೆ ‘ED’ಯಿಂದ ಯಾವುದೇ ನೋಟಿಸ್ ಬಂದಿಲ್ಲ : ಸಚಿವ ಭೈರತಿ ಸುರೇಶ್ ಸ್ಪಷ್ಟನೆ