ಮೈಸೂರು : ಜನರು, ಚಾಮುಂಡಿದೇವಿ ಆಶೀರ್ವಾದದಿಂದ ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನರು, ಚಾಮುಂಡಿದೇವಿ ಆಶೀರ್ವಾದದಿಂದ ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ನಾನು ರಾಜಕಾರಣದಲ್ಲಿ ಇಷ್ಟು ದಿನ ಇರುತ್ತೀರಲಿಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ನೀಡಲ್ಲ. ಜನರ ಾಶೀರ್ವಾದ ಇರುವವರಗೂ ನನ್ನನ್ನು ಏನೂ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ.
ದಸರಾ ಎಂದರೆ ಮೈಸೂರು ಜನರಿಗೆ ಹರ್ಷ, ಉಲ್ಲಾಸ. ಹಂಪನಾ ಮತ್ತು ಕಮಲ ಹಂಪನಾ ಜೋಡಿ ಮಾದರಿಯಾದ ಜೋಡಿ. ಕನ್ನಡ ಸಾರಸ್ವತ ಲೋಕಕ್ಕೆ ಹಂಪನಾ ಕೊಡುಗೆ ಅಪಾರ. ಕರ್ನಾಟಕ ಕಂಡಂತಹ ಅಪರೂಪದ ಸಾಹಿತಿ ಹಂಪನಾ. ಚುನಾಯಿತ ಸರ್ಕಾರಗಳನ್ನು ವಾಮಮಾರ್ಗದಿಂದ ಕಿತ್ತೊಗೆಯುವುದು ತಪ್ಪು ಎಂದು ಹಂಪನಾ ಹೇಳಿರುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಬಹಳ ಮಹತ್ವ ಪೂರ್ಣ ವಾದದ್ದು ಎಂದು ಹೇಳಿದ್ದಾರೆ.
ಐದು ವರ್ಷ ಕಾಲ ಅಭಿವೃದ್ಧಿ ಮಾಡೇ ಮಾಡ್ತೀವಿ. ದೇವರಾಜ ಅರಸು ಬಿಟ್ಟರೆ ಐದು ವರ್ಷ ಪೂರ್ಣ ಅಧಿಕಾರ ಮಾಡಿದ್ದು ಬಿಟ್ಟರೆ, ನಂತರ ಐದು ವರ್ಷ ಸರ್ಕಾರ ಮಾಡಿದ್ದು ಈ ಸಿದ್ದರಾಮಯ್ಯ ಮಾತ್ರ. ತಾಯಿ ಚಾಮುಂಡಿ ಆಶೀರ್ವಾದ ನನ್ನ ಮೇಲೆ ಇದೆ. ಜಿಟಿಡಿ ಬೇರೆ ಪಕ್ಷದಲ್ಲಿ ಇದ್ದರೂ ಸತ್ಯದ ಮಾತು ಹೇಳಿದ್ದಾರೆ. ಸತ್ಯ ಮೇವ ಜಯತೆ. ಸತ್ಯಕ್ಕೆ ಯಾವಾಗಲೂ ಜಯ.ಜನರ ಆಶೀರ್ವಾದ ಸರ್ಕಾರದ ಮೇಲೆ ನನ್ನ ಮೇಲೆ ಇರುವವರೆಗೂ ನನ್ನನ್ನು ಯಾರು ಏನು ಮಾಡಲು ಆಗೋದಿಲ್ಲ ಎಂದರು.
ಜಿಟಿಡಿಯೆ ನನ್ನ ಈ ಕ್ಷೇತ್ರದಲ್ಲಿ ಸೋಲಿಸಿದ್ದು. ಅದು ನನ್ನ ಕೈಯಾರೆ ಮಾಡಿಕೊಂಡ ಸೋಲು. ನಾನು ಒಂಬತ್ತು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಚಾಮುಂಡೇಶ್ವರಿ ಕೃಪೆಯಿಂದ ಇಲ್ಲಿಯವರೆಗೆ ಇದ್ದೇನೆ. ನಾನು ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಇಷ್ಟು ಸುಧೀರ್ಘ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ಜಿಟಿಡಿ ಮಾತಿನಿಂದ ನನಗೆ ಹೆಚ್ಚು ಬಲ ಬಂದಿದೆ. ಜಿಟಿಡಿಗೆ ನನ್ನ ಧನ್ಯವಾದ. ಚಾಮುಂಡಿ ದೇವಿ ಕೊಟ್ಟ ಶಕ್ತಿಯಿಂದ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದರು.