ಮೈಸೂರು : ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹತೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಅವರು ನಾಡಹಬ್ಬ ದಸರಾಗೆ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ಕ್ರೀಡೆ ಮೊದಲಾದ ಎಲ್ಲ ಕ್ಷೇತ್ರಗಳನ್ನು ಮೇಳೈಸಿಕೊಂಡು ಆಚರಿಸಲಾಗುವ ಮೈಸೂರು ದಸರಾ ನಮ್ಮ ನಿಜವಾದ ನಾಡಹಬ್ಬ. ಈ ಹಬ್ಬ ಅಸತ್ಯ, ಅನ್ಯಾಯ, ದ್ವೇಷ, ಮೋಸಗಳ ಕೆಡುಕತನದ ವಿರುದ್ಧ ಸಾಧಿಸಿದ್ದ ವಿಜಯದ ಸಂಕೇತವೂ ಹೌದು. ಈ ಬಾರಿ ಪ್ರಕೃತಿ ದೇವತೆ ಒಲಿದು ಹರಸಿದ್ದರ ಫಲವಾಗಿ ಇಳೆ ತುಂಬಾ ಸಮೃದ್ಧ ಮಳೆಯಾಗಿ, ಬೆಳೆಯಾಗಿ ನಾಡಿನಾದ್ಯಂತ ಹರ್ಷದ ಹೊನಲು ಹರಿದಿದೆ.ಈ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ಈ ಬಾರಿ ಸಕಲ ಸಂಪ್ರದಾಯಗಳನ್ನು ಮೇಳೈಸಿಕೊಂಡು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ಕ್ರೀಡೆ ಮೊದಲಾದ ಎಲ್ಲ ಕ್ಷೇತ್ರಗಳನ್ನು ಮೇಳೈಸಿಕೊಂಡು ಆಚರಿಸಲಾಗುವ ಮೈಸೂರು ದಸರಾ ನಮ್ಮ ನಿಜವಾದ ನಾಡಹಬ್ಬ.
ಈ ಹಬ್ಬ ಅಸತ್ಯ, ಅನ್ಯಾಯ, ದ್ವೇಷ, ಮೋಸಗಳ ಕೆಡುಕತನದ ವಿರುದ್ಧ ಸಾಧಿಸಿದ್ದ ವಿಜಯದ ಸಂಕೇತವೂ ಹೌದು.
ಈ ಬಾರಿ ಪ್ರಕೃತಿ ದೇವತೆ ಒಲಿದು ಹರಸಿದ್ದರ ಫಲವಾಗಿ ಇಳೆ ತುಂಬಾ ಸಮೃದ್ಧ ಮಳೆಯಾಗಿ,… pic.twitter.com/pHagtkJZ5X
— Siddaramaiah (@siddaramaiah) October 3, 2024
ನಾಡಹಬ್ಬದ ಸಂಭ್ರಮಾಚರಣೆಯಲ್ಲಿ ತಾವೆಲ್ಲರೂ ಪಾಲ್ಗೊಂಡು ಹಬ್ಬದ ವೈಭವವನ್ನು ಕಣ್ಣುಂಬಿಕೊಳ್ಳಲು ನಿಮ್ಮೆಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು ಎಂದು ಶುಭ ಹಾರೈಸಿದ್ದಾರೆ.