ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾದ ಶೂಟಿಂಗ್ಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ ಎನ್ನಲಾಗಿದೆ. ಖ್ಯಾತ ತಮಿಳು ನಟ ವಿಜಯ ಸೇತುಪತಿ (Vijay Sethupathi) ನಟನೆಯ ಲೀಡರ್ ರಾಮಯ್ಯ (Leader Ramaiah) ಸಿನಿಮಾವನ್ನು ಬೆಂಗಳೂರು ಮೂಲದ ನಿರ್ದೇಶಕ ಸತ್ಯರತ್ನಂ, ಗಂಗಾವತಿ ಮೂಲದ ಹಯ್ಯಾತ್ ಫಿರ್ ನಿರ್ಮಾಣ ಮಾಡುತ್ತಿದ್ದಾರೆ.
ಮೂಡಾ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಿನಿಮಾ ತಂಡ ಈಗ ಎರಡನೇ ಭಾಗದ ಚಿತ್ರಿಕರಣವನ್ನು ಸದ್ಯಕ್ಕೆ ನಿಲ್ಲಿಸುವುಕ್ಕೆ ಮುಂದಾಗಿದೆ ಎನ್ನಲಾಗಿದೆ. ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಪರಿಸ್ಥಿತಿ ತಿಳಿಯಾದ ನಂತರ ಚಿತ್ರೀಕರಣವನ್ನು ಮುಂದುವರಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಲಾಗಿ
ದೆ. ಇದಲ್ಲದೇ ಇನ್ನೂ ಕೆಲವು ಮೂಲಗಳ ಪ್ರಕಾರ, ನಾಯಕ ವಿಜಯ್ ಸೇತುಪತಿ ಡೇಟ್ಸ್ ಸಮಸ್ಯೆಯಾಗಿದ್ದರಿಂದ ಚಿತ್ರೀಕರಣ ಸ್ಥಗಿತವಾಗಿದೆ ಎನ್ನಲಾಗಿದೆ.