Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಕೆಂಪು ಮಾಂಸ’ ತಿನ್ನುವುದ್ರಿಂದ ಮಧುಮೇಹದ ಅಪಾಯ ಶೇ.50ರಷ್ಟು ಹೆಚ್ಚಾಗ್ಬೋದು : ಹೊಸ ಅಧ್ಯಯನ

06/03/2026 10:05 PM

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ, ನಮಗೆ ನಿರಾಶೆಯಾಗಿದೆ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

06/03/2026 10:01 PM

ಸುಖಿ ದಾಂಪತ್ಯಕ್ಕೆ ಲೈಂಗಿಕ ತೃಪ್ತಿ ಅಗತ್ಯ: ಸಂಗಾತಿಯ ಮನ ಗೆಲ್ಲಲು ಇಲ್ಲಿವೆ ಸರಳ ಸೂತ್ರಗಳು

06/03/2026 9:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಶುಭ ವೃಶ್ಚಿಕ ಲಗ್ನದಲ್ಲಿ `ವಿಶ್ವವಿಖ್ಯಾತ ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಹಂ.ಪ.ನಾಗಾರಾಜಯ್ಯ | Mysuru Dasara
KARNATAKA

BREAKING : ಶುಭ ವೃಶ್ಚಿಕ ಲಗ್ನದಲ್ಲಿ `ವಿಶ್ವವಿಖ್ಯಾತ ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಹಂ.ಪ.ನಾಗಾರಾಜಯ್ಯ | Mysuru Dasara

By kannadanewsnow5703/10/2024 9:38 AM

ಮೈಸೂರು : ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಟಾರ್ಚನೆ ಮಾಡುವ ಮೂಲಕ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ಕೊಟ್ಟಿದ್ದಾರೆ.

ಸಾಹಿತಿ ಹಂಪ ನಾಗಾರಾಜಯ್ಯ ಅವರು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾ ಉದ್ಘಾಟಿಸಿದ್ದಾರೆ. ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರು ಈ ಬಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.

ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ. ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ರಾಝ್ಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್, ಶಿವರಾಜ್ ತಂಗಡಗಿ, ಹೆಚ್.ಕೆ.ಪಾಟೀಲ್, ರಾಮಲಿಂಗ ರೆಡ್ಡಿ, ಈಶ್ವರ್ ಖಂಡ್ರೆ, ಭೈರತಿ ಸುರೇಶ್ ಭಾಗವಹಿಸಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

ಮೊದಲ ದಿನ ದಸರಾದ ಕಾರ್ಯಕ್ರಮಗಳ ವಿವರ

ದಸರಾ ಚಲನಚಿತ್ರೋತ್ಸವ ಉದ್ಘಾಟನೆ

ದಸರಾ ನಿಮಿತ್ತ ಇಂದು ಬೆಳಗ್ಗೆ 11:30 ಗಂಟೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿನ ಘಟಿಕೋತ್ಸವ ಭವನದಲ್ಲಿ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

ದಸರಾ ಆಹಾರ ಮೇಳ ಉದ್ಘಾಟನೆ

ಮಧ್ಯಾಹ್ನ 11:30 ಗಂಟೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಾಹರಗಳ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಲಿದ್ದಾರೆ

ಫಲಪುಷ್ಪ ಪ್ರದರ್ಶನ ಉದ್ಘಾಟನೆ

ಮಧ್ಯಾಹ್ನ 12:30 ಗಂಟೆಗೆ ನಗರದ ಕುಪ್ಪಣ್ಣ ಪಾರ್ಕ್ (ನಿಶಾದ್ ಬಾಗ್) ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಕೂಡ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

ದಸರಾ ಕುಸ್ತಿ ಉದ್ಘಾಟನೆ

ಸಂಜೆ 04 ಗಂಟೆಗೆನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅವರಣದಲ್ಲಿನ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ “ದಸರಾ ಕುಸ್ತಿ ಪಂದ್ಯಾವಳಿ” ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ.

ದಸರಾ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರ ಉದ್ಘಾಟನೆ

ಸಂಜೆ 4 ಗಂಟೆಗೆ ಸಿದ್ಧಾರ್ಥ ನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ “ರಾಜ್ಯಮಟ್ಟದ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರ”ದಲ್ಲಿ ರಚಿಸಲಾದ ಕಲಾ ಕೃತಿಗಳ ಪ್ರದರ್ಶನ, ಲಲಿತ ಕಲೆ, ಕರಕುಶಲ ಕಲೆಗಳ ಕಲಾಕೃತಿ ಪ್ರದರ್ಶನ ಮತ್ತು ರಾಷ್ಟ್ರಮಟ್ಟದ ಕರಕುಶಲ ಕಲೆಗಳ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್​ ತಂಗಡಗಿ ಅವರು ಉದ್ಘಾಟಿಸಲಿದ್ದಾರೆ.

ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ ಚಾಲನೆ

ಸಂಜೆ 4:30 ಗಂಟೆಗೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಲಿದ್ದಾರೆ.

ದಸರಾ ಪುಸ್ತಕ ಮೇಳ ಉದ್ಘಾಟನೆ

ಸಂಜೆ 5 ಗಂಟೆಗೆ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಉದ್ಘಾಟಿಸಲಿದ್ದಾರೆ.

ದಸರಾ ನವರಾತ್ರಿ ಜಾನಪದ ರಂಗ ಉತ್ಸವ ಉದ್ಘಾಟನೆ

ಸಂಜೆ 5:30 ಗಂಟೆಗೆ ನಗರದ ಕಲಾಮಂದಿರದಲ್ಲಿನ ರಂಗಾಯಣದ ಭೂಮಿಗೀತದ ರಂಗ ಮಂದಿರದಲ್ಲಿ “ನವರಾತ್ರಿ ಜಾನಪದ ರಂಗ ಉತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಸಹ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ.

ಸಾಂಸ್ಕೃತಿಕಾ ಕಾರ್ಯಕ್ರಮ ಉದ್ಘಾಟನೆ

ಸಂಜೆ 6 ಗಂಟೆಗೆ ಅರಮನೆಯ ಆವರಣದಲ್ಲಿ ನಾಡಹಬ್ಬ ಪ್ರಯುಕ್ತ ದಸರಾ ಸಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್​​ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ.

ದಸರಾ ದೀಪಾಲಂಕಾರಕ್ಕೆ ಚಾಲನೆ

ಸಂಜೆ 6.30ಕ್ಕೆ ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಮಂಟಪದ ಬಳಿ ವಿದ್ಯುತ್ ದೀಪಾಲಂಕಾರ ಹಾಗೂ ದೀಪಾಲಂಕಾರಗೊಂಡಿರುವ ವಿದ್ಯುತ್ ರಥದ ಚಾಲನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಲಿದ್ದಾರೆ.

ವಸ್ತು ಪ್ರದರ್ಶನ ಉದ್ಘಾಟನೆ

ರಾತ್ರಿ 7.30ಕ್ಕೆ ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಲಾಗಿರುವ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

BREAKING : ಶುಭ ವೃಶ್ಚಿಕ ಲಗ್ನದಲ್ಲಿ `ವಿಶ್ವವಿಖ್ಯಾತ ಮೈಸೂರು ದಸರಾ ಮಹತೋತ್ಸವ' ಉದ್ಘಾಟಿಸಿದ ಸಾಹಿತಿ ಹಂ.ಪ.ನಾಗಾರಾಜಯ್ಯ | Mysuru Dasara BREAKING: Writer Nagarajaiah inaugurates 'World famous Mysuru Dasara Mahotsava' in auspicious Scorpio ascendant | Mysuru Dasara
Share. Facebook Twitter LinkedIn WhatsApp Email

Related Posts

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ, ನಮಗೆ ನಿರಾಶೆಯಾಗಿದೆ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

06/03/2026 10:01 PM3 Mins Read

ಚಿತ್ರದುರ್ಗ: KSRTC ಬಸ್- ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು

06/03/2026 8:46 PM1 Min Read

BREAKING: ಬೆದರಿಕೆ, ನಿಂದನೆ ಆರೋಪದಡಿ ಬಿಗ್ ಬಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR ದಾಖಲು

06/03/2026 8:43 PM1 Min Read
Recent News

‘ಕೆಂಪು ಮಾಂಸ’ ತಿನ್ನುವುದ್ರಿಂದ ಮಧುಮೇಹದ ಅಪಾಯ ಶೇ.50ರಷ್ಟು ಹೆಚ್ಚಾಗ್ಬೋದು : ಹೊಸ ಅಧ್ಯಯನ

06/03/2026 10:05 PM

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ, ನಮಗೆ ನಿರಾಶೆಯಾಗಿದೆ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

06/03/2026 10:01 PM

ಸುಖಿ ದಾಂಪತ್ಯಕ್ಕೆ ಲೈಂಗಿಕ ತೃಪ್ತಿ ಅಗತ್ಯ: ಸಂಗಾತಿಯ ಮನ ಗೆಲ್ಲಲು ಇಲ್ಲಿವೆ ಸರಳ ಸೂತ್ರಗಳು

06/03/2026 9:57 PM

BREAKING : 183 ಸಿಬ್ಬಂದಿಯೊಂದಿಗೆ ಇರಾನಿನ ಯುದ್ಧನೌಕೆ ಕೊಚ್ಚಿಯಲ್ಲಿ ಸುರಕ್ಷಿತ ಡಾಕಿಂಗ್!

06/03/2026 9:45 PM
State News
KARNATAKA

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ, ನಮಗೆ ನಿರಾಶೆಯಾಗಿದೆ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

By kannadanewsnow0906/03/2026 10:01 PM KARNATAKA 3 Mins Read

ದುಬೈ: ಶುಕ್ರವಾರ ಮಂಡನೆಯಾಗಿರುವ ಕರ್ನಾಟಕ ಬಜೆಟ್-2026ರಲ್ಲಿ ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ‘ಪ್ರತ್ಯೇಕ ಸಚಿವಾಲಯ’ ಘೋಷಣೆಯಾಗದಿರುವುದು ಅತೀವ…

ಚಿತ್ರದುರ್ಗ: KSRTC ಬಸ್- ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು

06/03/2026 8:46 PM

BREAKING: ಬೆದರಿಕೆ, ನಿಂದನೆ ಆರೋಪದಡಿ ಬಿಗ್ ಬಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR ದಾಖಲು

06/03/2026 8:43 PM

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: RV ರಸ್ತೆ- ಜಯನಗರ ನಿಲ್ದಾಣಗಳ ನಡುವಿನ ತಾತ್ಕಾಲಿಕ ವೇಗ ನಿಯಂತ್ರಣ

06/03/2026 7:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.