ಬೆಳಗಾವಿ : ಬೆಳಗಾವಿಯಲ್ಲಿ ಚೀನಾಗೆ ಚಿಪ್ಪು ಹಂದಿ ಸಾಗಿಸಲು ಯತ್ನಿಸುತ್ತಿದ್ದ ಗ್ಯಾಂಗ್ ವೊಂದನ್ನು ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆ ಖಾನಾಪುರ ಅರಣ್ಯದಲ್ಲಿ ಚಿಪ್ಪು ಹಂದಿ ಬೇಟೆಯಾಡಿ ರೈಲಿನ ಮೂಲಕ ಕೊಲ್ಕತ್ತಾಗೆ ಸಾಗಿಸಲು ಯತ್ನ ನಡೆಸುತ್ತಿದ್ದ ನಾಲ್ವರ ಗ್ಯಾಂಗ್ ವೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಪುರುಷತ್ವ ಚಿಕಿತ್ಸೆಗೆ ಚಿಪ್ಪು ಹಂದಿ ಪ್ರಯೋಜನಕಾರಿಯಾಗಿದ್ದು, ಚೀನಾದಲ್ಲಿ ಇದಕ್ಕೆ ಭಾರಿ ಡಿಮ್ಯಾಂಡ್ ಇದೆ. ಹೀಗಾಗಿ ಅಕ್ರಮವಾಗಿ ಚೀನಾಗೆ ಸಾಗಾಟ ನಡೆಸಲು ಯತ್ನಿಸಿದ್ದಾರೆ.
ಕೊಲ್ಕತ್ತಾದಿಂದ ಚಿಪ್ಪು ಹಂದಿಯನ್ನು ಚೀನಾಗೆ ಸಾಗಿಸಲು ಗ್ಯಾಂಗ್ ಯತ್ನಿಸಿತ್ತು. ಆದರೆ ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರು ಬಂಧಿಸಿದೆ. 6 ವರ್ಷದ ಚಿಪ್ಪು ಹಂದಿಯನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.