ಶಿವಮೊಗ್ಗ: ಶಿವಮೊಗ್ಗ ಹಾಲು ಉತ್ಪಾದಕರ ಸಂಘದಿಂದ, ಶಿಮುಲ್ ಹಾಲು ಉತ್ಪಾದಕ ರೈತರಿಗೆ ಬಿಗ್ ಶಾಕ್ ನೀಡಲಾಗಿದೆ. ಅದೇ ಪ್ರತಿ ಲೀಟರ್ ಹಾಲು ಖರೀದಿ ದರದಲ್ಲಿ 90 ಪೈಸೆ ಇಳಿಕೆ ಮಾಡಲಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿರುವಂತ ಹಾಲು ಉತ್ಪಾದಕರಿಗೆ ಶಿಮುಲ್ ಮತ್ತೊಂದು ಶಾಕ್ ನೀಡಿದೆ. ಅದೇ ಹಾಲು ಉತ್ಪಾದಕ ರೈತರಿಂದ ಖರೀದಿ ಮಾಡುವಂತ ಪ್ರತಿ ಲೀಟರ್ ಹಾಲಿನ ಖರೀದಿ ಬೆಲೆಯಲ್ಲಿ 90 ಪೈಸೆ ಇಳಿಕೆ ಮಾಡಿದೆ.
ಈ ಸಂಬಂಧ ಶಿಮುಲ್ ಆಡಳಿತ ಮಂಡಳಿಯಿಂದ ಮಹತ್ವದ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ರೈತರಿಂದ ಹಾಲು ಖರೀದಿ ಮಾಡುವಂತ ಬೆಲೆಯನ್ನು ಇಳಿಕೆ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅದರಂತೆ ಪ್ರತಿ ಲೀಟರ್ ಹಾಲು ಖರೀದಿ ಮೇಲಿನ ದರವನ್ನು 90 ಪೈಸೆ ಇಳಿಕೆ ಮಾಡಲಾಗಿದೆ. ಹೀಗಾಗಿ ಹಾಲು ಉತ್ಪಾದಕರಿಂದ ಇನ್ಮುಂದೆ ಪ್ರತಿ ಲೀಟರ್ ಗೆ ರೂ.33.03 ದರದಲ್ಲಿ ಹಾಲನ್ನು ಖರೀದಿ ಮಾಡಲಾಗುತ್ತದೆ.
‘HMT ಭೂಮಿ’ ಕೇಂದ್ರದ್ದಲ್ಲ, 7 ಕೋಟಿ ಕನ್ನಡಿಗರ ಆಸ್ತಿ: ಬಿಜೆಪಿಗೆ ‘ಸಚಿವ ಈಶ್ವರ ಖಂಡ್ರೆ’ ತಿರುಗೇಟು
ಗಮನಿಸಿ : ಆಧಾರ್ ಕಾರ್ಡ್‌ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ