ಶಿವಮೊಗ್ಗ: ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಈ ವೈದ್ಯನ ಎಡವಟ್ಟು ಒಂದಾ ಎರಡಾ? ಸರಿಯಾಗಿ ಹೆರಿಗೆ ಮಾಡದೇ ಇರೋದು, ಹೆರಿಗೆ ಮಾಡಿದ ಮೇಲೆ ಹೊಲಿಗೆ ಸರಿಯಾಗಿ ಹಾಕದೇ ನಿರ್ಲಕ್ಷ್ಯ ತೋರಿಸೋದು ಸೇರಿದಂತೆ ಹಲವಾರು. ಡಾಕ್ಟರ್ ಮಾಡೋ ಎಡವಟ್ಟಿನಿಂದಾಗಿ ಶಿಕ್ಷೆ ಅನುಭವಿಸಿದವರು ನೂರಾರು ಗರ್ಭಿಣಿಯರು, ಬಾಣಂತಿಯರು, ಮಹಿಳೆಯರು. ಈಗ ಮುಂದುವರೆದು ಈ ಸರ್ಕಾರಿ ವೈದ್ಯ ಬಾಣಂತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ.
ಕಳೆದ ಕೆಲ ತಿಂಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಿದ್ದಂತ ಗರ್ಭಿಣಿಯೊಬ್ಬರಿಗೆ ಪ್ರಸೂತಿ ಮತ್ತು ಸ್ರೀರೋಗ ತಜ್ಞ ಡಾ.ನಾಗೇಂದ್ರಪ್ಪ ಸಿಜೇರಿಯನ್ ಹೆರಿಗೆ ಮಾಡಿಸಿದ್ದರು. ಹೆರಿಗೆಯ ನಂತ್ರ ರಕ್ತ ಸ್ತ್ರಾವ ನಿಯಂತ್ರಣಕ್ಕೆ ಕ್ರಮವಹಿಸಿ ಹೊಲಿಗೆ ಹಾಕಬೇಕಿದ್ದಂತ ಡಾ.ನಾಗೇಂದ್ರಪ್ಪ, ಅದ್ಯಾವುದನ್ನು ಮಾಡದೇ ಹಾಗೆಯೇ ಹೊಲಿಗೆ ಹಾಕಿದ್ದರು.
ಡಾ.ನಾಗೇಂದ್ರಪ್ಪ ಎಡವಟ್ಟಿನ ಕಾರಣ ಬಾಣಂತಿಯೊಬ್ಬರು ಹೆರಿಗೆಯ ನಂತ್ರ ಹೊಟ್ಟೆ ಊತ ಬಂದು, ಹೊಟ್ಟೆಯೊಳಗಡೆ ರಕ್ತ್ರಸ್ತ್ರಾವ ಉಂಟಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಾವು ಬದುಕಿನ ನಡುವೆ ಚಿಕಿತ್ಸೆಯ ನಂತ್ರ ಗುಣಮುಖರಾಗಿದ್ದರು. ಈ ಬಗ್ಗೆ ಕನ್ನಡ ನ್ಯೂಸ್ ನೌ ರಾಜ್ಯದಲ್ಲೊಂದು ‘ಹೆರಿಗೆ ಆಸ್ಪತ್ರೆ ವೈದ್ಯ’ರ ಮಹಾ ಎಡವಟ್ಟು: ‘ಬಾಣಂತಿ ಮಹಿಳೆ’ ನರಕಯಾತನೆ ಎಂಬುದಾಗಿ ಸುದ್ದಿ ಮಾಡಿತ್ತು. ಹೀಗೆ ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತ ಡಾ.ನಾಗೇಂದ್ರಪ್ಪ ಸಾಗರದಲ್ಲಿ ಬೇಡವೇ ಬೇಡವೆಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಇಲ್ಲಿಂದ ಎತ್ತಂಗಡಿ ಮಾಡಿದ್ದರು.
ಆದರೇ ಮತ್ತೆ ರಾಜಕೀಯ ಒತ್ತಡದ ಮೂಲಕ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮರಳಿ ಬಂದಿದ್ದಾರೆ. ಬಂದ ನಂತ್ರವಾದರೂ ಎಚ್ಚೆತ್ತುಕೊಂಡು ವೈದ್ಯೋ ನಾರಾಯಣೋ ಹರಿಯ ರೀತಿಯಲ್ಲಿ ಕೆಲಸ ಮಾಡಬೇಕಿದ್ದಂತ ಡಾ.ನಾಗೇಂದ್ರಪ್ಪ ಮಾತ್ರ, ಈಗ ಗೂಂಡಾ ವರ್ತನೆ ತೋರಿದ್ದಾರೆ.
ಮಕ್ಕಳ ಶಸ್ತ್ರ ಚಿಕಿತ್ಸೆಗಾಗಿ ಆಗಮಿಸಿದ್ದಂತ 4 ತಿಂಗಳ ಸಾಗರ ತಾಲ್ಲೂಕಿನ ಚಿಪ್ಪಳಿಯ ಚೈತ್ರ ಎಂಬುವರಿಗೆ ಆಪರೇಷನ್ ನಂತ್ರ ಡಾ.ನಾಗೇಂದ್ರಪ್ಪ ಅವರು ಕಪಾಳ ಮೋಕ್ಷ ಮಾಡಿರುವುದಾಗಿ ಆರೋಪಿಸಿದ್ದಾರೆ. ಡಾ.ನಾಗೇಂದ್ರಪ್ಪ ಆಪರೇಷನ್ ಮಾಡಿದ ನಂತ್ರ, ಹೊಲಿಗೆ ಹಾಕುವ ಸಂದರ್ಭದಲ್ಲಿ ನನಗೆ ಕಪಾಳಕ್ಕೆ ಭಾರಿಸಿದರು. ನಾನು ಪ್ರಜ್ಞೆ ತಪ್ಪಿದ್ದೇನೆ ಎಂದು ಹಾಗೆ ಮಾಡಿದ್ರೋ ಏನೋ ಆದರೇ, ನಾನು ಪ್ರಜ್ಞೆ ತಪ್ಪಿರಲಿಲ್ಲ. ಅವರು ಕಪಾಳಕ್ಕೆ ಹೊಡೆದಿದ್ದು ತುಂಬಾನೇ ನೋವಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ಅವರ ಪತಿ ಮಾತನಾಡಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಂತ ಚೈತ್ರ ಅವರನ್ನು ಮಕ್ಕಳ ಆಪರೇಶನ್ ಗೆ ಕರೆತರಲಾಗಿತ್ತು. ಪ್ರಜ್ಞೆ ತಪ್ಪಿದ್ದಾರೆ ಅಂತ ಡಾ.ನಾಗೇಂದ್ರಪ್ಪ ಹೀಗಾ ಕಪಾಳಕ್ಕೆ ಹೊಡೆಯೋದು.? ಇವರದ್ದು ಇದೇನು ಮೊದಲೇನಲ್ಲ. ಈ ಮೊದಲು ಅನೇಕ ಎಡವಟ್ಟುಗಳನ್ನು ಮಾಡಿದ್ದಾರೆ. ಡಾ.ನಾಗೇಂದ್ರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸೇವೆಯಿಂದ ಅಮಾನತುಗೊಳಿಸಬೇಕು ಎಂಬುದಾಗಿ ಆಗ್ರಹಿಸಿದರು.
ಡಾ.ನಾಗೇಂದ್ರಪ್ಪ ಅವರು ಬಾಣಂತಿ ಮಹಿಳೆಗೆ ಕಪಾಳಮೋಕ್ಷ ಮಾಡಿದಂತ ವಿಷಯ ತಿಳಿದಂತ ಮೊಗವೀರ ಸಮುದಾಯ ಹಾಗೂ ಭಜರಂಗ ದಳದ ಮುಖಂಡರು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಡಾ.ನಾಗೇಂದ್ರಪ್ಪ ಅವರ ಎಡವಟ್ಟು, ಗುಂಡಾಗಿರಿ ಹೆಚ್ಚಾಗಿದೆ. ಅವರನ್ನು ಕೂಡಲೇ ಅಮಾತನಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಅದೇನೇ ಆಗಲಿ ರೋಗಿ ಪ್ರಜ್ಞೆ ತಪ್ಪಿರಲೀ, ಪ್ರಜ್ಞೆಯಲ್ಲಿ ಇರಲಿ. ಅವರನ್ನು ಎಚ್ಚರಗೊಳಿಸೋದಕ್ಕೆ ಹೀಗಾ ಕಪಾಳ ಮೋಕ್ಷ ಮಾಡೋದು.? ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಉತ್ತಮ ನಡೆಯನ್ನು ತೋರಬೇಕಿದ್ದಂತ ಡಾ.ನಾಗೇಂದ್ರಪ್ಪ ಅವರೇ ಏನಿದು ನಿಮ್ಮ ಗೂಂಡಾಗಿರಿ.? ಈ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.
2050ರ ವೇಳೆಗೆ ಮೂರು ಜಾಗತಿಕ ‘ಸೂಪರ್ ಪವರ್’ ದೇಶಗಳಲ್ಲಿ ಭಾರತವೂ ಒಂದು: ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್
BREAKING : ಸಿದ್ದರಾಮಯ್ಯ ಶರ್ಟ್ ಗೆ ತಗುಲಿದ ಬೆಂಕಿಯ ಶಾಖ : ಗನ್ ಮ್ಯಾನ್ ಸಮಯ ಪ್ರಜ್ಞೆಯಿಂದ `CM’ ಪಾರು!