ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ಇಂದು 1-10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ 7 ದಿನ ಪೌಷ್ಠಿಕಾಂಶ ಯುಕ್ತ ಆಹಾರ ಎನ್ನುವಂತೆ ಮೊಟ್ಟೆ ವಿತರಣೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಸರ್ಕಾರದ ಅಕ್ಷರ ದಾಸೋಹ- ಮಧ್ಯಾಹ್ನದ ಉಪಹಾರ ಯೋಜನೆಯಡಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನಗಳ ಕಾಲ ಪೂರಕ ಪೌಷ್ಟಿಕ ಆಹಾರವನ್ನು ಉಚಿತವಾಗಿ ವಿತರಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಸಾಗರದ ಗಾಂಧೀ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿದಂತೆ ಒಂದರಿಂದ 10ನೇ ತರಗತಿಯವರೆಗಿನ ಒಟ್ಟು 76,000 ಶಾಲೆಗಳ 57 ಲಕ್ಷ ಮಕ್ಕಳು ವಾರದ ಏಳು ದಿನಗಳ ಕಾಲ ಮಧ್ಯಾನದ ಬಿಸಿ ಊಟದೊಂದಿಗೆ ಪೌಷ್ಟಿಕ ಆಹಾರ ಮೊಟ್ಟೆಯನ್ನು ಕೂಡ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ವಾರದಲ್ಲಿ ಒಂದು ದಿನ ನೀಡಲಾಗುತ್ತಿದ್ದ ಮೊಟ್ಟೆಯನ್ನು 2ದಿನಗಳಿಗೆ ಹೆಚ್ಚಿಸಲಾಗಿತ್ತು. ಇದೀಗ ಖ್ಯಾತ ಉದ್ಯಮಿ ಹಾಗೂ ವಿಪ್ಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಮ್ ಪ್ರೇಮ್ ಜಿ ಅವರ 1591ಕೋಟಿ ರೂ. ಗಳ ಆರ್ಥಿಕ ನೆರವಿನಿಂದ ಮುಂದಿನ ಮೂರು ವರ್ಷಗಳ ಅವಧೀಗೆ ಮೊಟ್ಟೆ ವಿತರಿಸಲು ಒಡಂಬಡಿಕೆ ಮಾಡಿಕೊಂಡಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಕಳೆದ ವಾರ ರಾಜ್ಯದ ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಎಂದ ಅವರು ಈಗಾಗಲೇ ಪೌಸ್ತಿಕ ಆಹಾರ ಹಾಲು, ರಾಗಿಮಾಲ್ಟ್ ನ್ನು ನೀಡಲಾಗುತ್ತಿದೆ ಎಂದರು.
ಮಲೆನಾಡು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಳೆದ ಸಾಲಿನ ಮಳೆಯಿಂದಾಗಿ ಹಲವು ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದು, ಕಟ್ಟಡಗಳ ದುರಸ್ತಿ ಹಾಗೂ ನೂತನ ಕಟ್ಟಡಗಳb ನಿರ್ಮಾಣಕ್ಕೆ ಸಾಕಾಲೀಕವಾಗಿ ತಕ್ಷಣದ ತುರ್ತು ಕ್ರಮಗಳನ್ನು ಮುಂದಿನ ಒಂದು ವರ್ಷದೊಳಗಾಗಿ ಕೈಗೊಂಡು ಪೂರ್ಣಗೊಳಿಸಲಾಗುವುದು. ಸರ್ಕಾರದ ಆರ್ಥಿಕವಾಗಿ ನೆರವಿನೊಂದಿಗೆ ದಾನಿಗಳ ಸಹಕಾರ ಪಡೆದಿಕೊಳ್ಳಲಾಗುವುದು ಎಂದರು.
ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳು ಶೈಕ್ಷಣಿಕವಾಗಿ ಹಿಂದುಳಿದಿವೆ ಮಾತ್ರವಲ್ಲ ಅಲ್ಲಿನ ಮಕ್ಕಳ ಪೌಷ್ಟಿಕತೆ, ಶೈಕ್ಷಣಿಕ ಪ್ರಗತಿಯು ನಿರೀಕ್ಷೆ ಮಟ್ಟದಲ್ಲಿ ಆಗಿರುವುದಿಲ್ಲ ಎಂಬುದನ್ನು ಗಮನಿಸಲಾಗಿದೆ. ಅದಕ್ಕಾಗಿ ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ 5000 ಕೋಟಿಗಳನ್ನು ವಿವಿಧ ಯೋಜನೆಗಳಿಗಾಗಿ ಮೀಸಲಿರಿಸಲಾಗಿದೆ. ಈ ಅನುದಾನದಲ್ಲಿ 1250 ಕೋಟಿಗಳನ್ನು ಅಕ್ಷರ ಅವಿಷ್ಕಾರ ಯೋಜನೆಗಾಗಿ ಕಾಯ್ದಿಸಲಾಗಿದೆ ಎಂದರು.
ನಮ್ಮ ಶಾಲೆ ನಮ್ಮ ಹಳ್ಳಿ ಯೋಜನೆ ಯಡಿ ರಾಜ್ಯದ ನಾನಾ ಭಾಗಗಳಿಂದ ₹ 500 ರಿಂದ 6.50ಕೋಟಿ ಗಳವರೆಗೆ ಸಾರ್ವಜನಿಕರಿಂದ ನೆರವು ಹರಿದು ಬರುತ್ತಿದೆ. ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಗೆ ನಮ್ಮ ಕುಟುಂಬದ ವತಿಯಿಂದ ಸ್ವತಃ ಹತ್ತು ಲಕ್ಷ ರೂಪಾಯಿಗಳ ವಸ್ತುಗಳನ್ನು ನೀಡಿದ್ದೇನೆ. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಓದಿದ್ದು ಇಂದು ಉನ್ನತ ಸ್ಥಾನಮಾನ ಹೊಂದಿದ್ದು ಉತ್ತಮ ಜೀವನ ನಡೆಸುತ್ತಿರುವವರು, ಜನಪ್ರತಿನಿದಿಗಳು, ಸ್ಥಿತಿವಂತರು, ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿದ ತಾವು ಓದಿದ ಸರ್ಕಾರಿ ಶಾಲೆಗಳಿಗೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು.
ಜನಸಾಮಾನ್ಯರಲ್ಲಿ ಈ ಯೋಜನೆಯ ಬಗ್ಗೆ ಅರಿವು ಮೂಡಿಸಲು ಈಗಾಗಲೇ ರಾಜ್ಯದಾದ್ಯoತ 38000ಹಳೆ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸಿದ್ದು, 34880 whatsapp ಗುಂಪುಗಳನ್ನು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಸಂಗ್ರಹವಾಗುವ ಸಿಎಸ್ಆರ್ ಹಣದಿಂದ ಉತ್ತಮ ಸೌಲಭ್ಯದೊಂದಿಗೆ ಕೀರ್ತಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಈಗಾಗಲೇ ಉತ್ತರ ಕರ್ನಾಟಕದ 1200 ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿಗಲು ಆರಂಭಿಸಲಾಗಿದೆ 41 ದಿನಗಳಲ್ಲಿ 42,000 ವಿದ್ಯಾರ್ಥಿಗಳು ಎಲ್ ಕೆ ಜಿ ಯು ಕೆ ಜಿ ತರಗತಿಗಳಿಗೆ ದಾಖಲಾಗಿರುವುದು ವಿಶೇಷ ಎಂದು ಅವರು ಮುಂದಿನ ದಿನಗಳಲ್ಲಿ ಎಲ್ಕೆಜಿ ಯುಕೆಜಿ ತರಗತಿಗಳನ್ನು ರಾಜ್ಯದಾದ್ಯಂತ ಆರಂಭಿಸಲಾಗುವುದು ಎಂದರು.
ಪೌಷ್ಟಿಕ ಆಹಾರ ಉಚಿತ ಮೊಟ್ಟೆ ವಿತರಣೆಯ ಯೋಜನೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಕುಕ್ಕುಟ ಉದ್ಯಮಕ್ಕೆ ಅವಕಾಶ ದೊರೆಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾತನಾಡಿ, ಹೆಚ್ಚಿನ ಪ್ರತಿಭಾವಂತ ಶಿಕ್ಷಕರೇ ಹೆಚ್ಚಾಗಿರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಳಿಸುವಂತೆ ಹಾಗೂ ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸುವಂತೆ ಅವರು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಬಲ್ಕಿಶ್ ಬಾನು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಹೇಮಂತ್ ಸಾಗರ ಉಪವಿಭಾಗಾಧಿಕಾರಿ ಯತೀಶ್ ಆರ್ ಡಯಟ್ ಉಪನಿರ್ದೇಶಕಿ ಕೆ ಆರ್ ಬಿಂಬ, ಪೊಲೀಸ್ ಉಪಾಧ್ಯಕ್ಷಕ ಗೋಪಾಲಕೃಷ್ಣ ನಾಯಕ್, ತಹಶೀಲ್ದಾರ್ ಚಂದ್ರಶೇಖರ್ ನಾಯಕ್, ಕಾರ್ಯನಿರ್ವಾಹಕ ಅಧಿಕಾರಿ ಗುರುಕೃಷ್ಣ ಶೆಣೈ, ಪೌರಾಯುಕ್ತ ನಾಗಪ್ಪ ಹೆಚ್ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಮತ್ತಿತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯದ ‘ಗ್ರಾಮ ಆಡಳಿತಾಧಿಕಾರಿ’ಗಳಿಗೆ ಭರ್ಜರಿ ಗುಡ್ ನ್ಯೂಸ್: ಎಲ್ಲಾ ‘VA’ಗಳಿಗೆ ‘ಟ್ಯಾಬ್ ವಿತರಣೆ’