ಆದಿಲಾಬಾದ್: ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ಗುಡಿಹತ್ನೂರು ಮಂಡಲದ ಮೇಕಲಗಂಡಿ ಬಳಿ ಮ್ಯಾಕ್ಸ್ ಪಿಕಪ್ ಪಕ್ಕದ ಪಿಲ್ಲರ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಿಂದ ಆತಂಕಗೊಂಡ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ರಿಮ್ಸ್ ಗೆ ರವಾನಿಸಿದ್ದಾರೆ. ಮೃತರನ್ನು ಮೊಜುದ್ದೀನ್ (60), ಮೊಯಿನುದ್ದೀನ್ (40), ಅಲಿ (8), ಉಸ್ಮಾನುದ್ದೀನ್ (10), ಮತ್ತು ಉಸ್ಮಾನ್ (12) ಎಂದು ಪೊಲೀಸರು ಗುರುತಿಸಿದ್ದಾರೆ.
ಮೃತರೆಲ್ಲರೂ ಆದಿಲಾಬಾದ್ ಪಟ್ಟಣದ ಶಿಕ್ಷಕರ ಕಾಲೋನಿಗೆ ಸೇರಿದವರು ಎಂದು ತೋರುತ್ತದೆ. ಭೈಂಸಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.