ಮೈಸೂರು: ನಗರದ ಹೊರ ವಲಯದ ಕೆ ಆರ್ ಎಸ್ ಬ್ಯಾಕ್ ವಾಟರ್ ನಲ್ಲಿ ನೂರಕ್ಕೆ ಅಧಿಕ ಯುವಕ-ಯುವತಿಯರಿಂದ ನಡೆಸುತ್ತಿದ್ದಂತ ಪಾರ್ಟಿ ಮೇಲೆ ದಾಳಿ ಮಾಡಿದ್ದಂತ ಪಿಎಸ್ಐ ಅವರನ್ನು ಕರ್ತವ್ಯ ಲೋಪದ ಮೇಲೆ ಅಮಾನತುಗೊಳಿಸಲಾಗಿದೆ.
ಮೈಸೂರು ಹೊರ ವಲಯದ ಕೆ ಆರ್ ಎಸ್ ಬ್ಯಾಕ್ ವಾಟರ್ ನಲ್ಲಿ ಸೆಪ್ಟೆಂಬರ್.28ರಂದು ಯುವತಿ-ಯುವಕರು ಸೇರಿ ರೇವ್ ಪಾರ್ಟಿ ನಡೆಸುತ್ತಿದ್ದಾಗೆ ತಿಳಿದು ಬಂದಿತ್ತು. ಈ ಪಾರ್ಟಿಯ ಮೇಲೆ ಇಲವಾಲ ಠಾಣೆಯ ಪಿಎಸ್ಐ ಮಂಜುನಾಥ್ ನಾಯಕ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿತ್ತು. ಆದರೇ ಈ ವೇಳೆ ಕೆಲವರು ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಹಲ್ಲೆಯಲ್ಲಿ ಪಿಎಸ್ಐ ಮಂಜುನಾಥ್ ನಾಯಕ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಈ ಪ್ರಕರಣದ ನಂತ್ರ ಎಎಸ್ಐ ನಾಗೇಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಪಿಎಸ್ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಂತವರನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ 64 ಮಂದಿ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿತ್ತು. ಪಾರ್ಟಿ ಆಯೋಜಿಸಿದ್ದ ಐವರಿಗೆ ನ್ಯಾಯಾಂಗ ಬಂಧನ ಕೂಡ ವಿಧಿಸಲಾಗಿದೆ. ಈ ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದ ಮೇಲೆ ಮೈಸೂರಿನ ಇಲವಾಲ ಠಾಣೆಯ ಪಿಎಸ್ಐ ಮಂಜುನಾಥ್ ನಾಯಕ್ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಆದೇಶಿಸಿದ್ದಾರೆ.
BREAKING : ತಿರುಪತಿ ಲಡ್ಡು ವಿವಾದ : ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್! | Tirupati Laddu Row