ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿರುವಂತ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ಅಕ್ಟೋಬರ್.4ಕ್ಕೆ ಮುಂದೂಡಿಕೆ ಮಾಡಿದೆ.
ಇಂದು ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ವಿಚಾರಣೆ ನಡೆಸಿತು. ಈ ಅರ್ಜಿಯ ವಿಚಾರಣೆ ಬಳಿಕ ಮತ್ತೆ ವಾದ ಮಂಡಿಸಲು ವಕೀಲರು ಕಾಲಾವಕಾಶ ಕೋರಿದ ಕಾರಣ ಅಕ್ಟೋಬರ್.4ಕ್ಕೆ ಮುಂದೂಡಿಕೆ ಮಾಡಿದೆ.
ಅಂದಹಾಗೇ ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅಲ್ಲಿ ರಾಜಾತಿಥ್ಯದ ಪೋಟೋ ವೈರಲ್ ಆಗುತ್ತಿದ್ದಂತೆ ಅಲ್ಲಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿಂದಲೇ ನಟ ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೇ ಈ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಅಕ್ಟೋಬರ್.4ಕ್ಕೆ ಮುಂದೂಡಿದೆ.
BIG NEWS: ನವರಾತ್ರಿಯ ದಿನವಾದ ಅ.3ರಂದು ‘ಬಳ್ಳಾರಿ’ಗೆ ಭೇಟಿ: ಮಾಜಿ ಸಚಿವ ಜನಾರ್ಧನ ರೆಡ್ಡಿ
BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿ : ಬಸ್ ಚಕ್ರದ ಅಡಿ ಸಿಲುಕಿ ಬೈಕ್ ಸವಾರ ದುರ್ಮರಣ!