ಬೆಂಗಳೂರು: ಅತ್ಯಾಚಾರ ಪ್ರಕರಣ ಆರೋಪ ಎದುರಿಸುತ್ತಿರುವಂತ ಬಿಜೆಪಿ ಶಾಸಕ ಮುನಿರತ್ನಗೆ ಸೇರಿದಂತೆ 11 ಕಡೆಗಳಲ್ಲಿ ಎಸ್ಐಟಿ ದಾಳಿ ನಡೆಸಿದೆ. ಈ ದಾಳಿಯ ವೇಳೆಯಲ್ಲಿ ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಶನಿವಾರದಂದು ವಿಶೇಷ ತನಿಖಾ ತಂಡದಿಂದ ಶಾಸಕ ಮುನಿರತ್ನಗೆ ಸೇರಿದಂತೆ 11 ಕಡೆಯಲ್ಲಿ ಅತ್ಯಾಚಾರ ಪ್ರಕರಣ ಸಂಬಂಧ ದಾಳಿಯನ್ನು ನಡೆಸಲಾಗಿದೆ. ಈ ದಾಳಿಯ ವೇಳೆಯಲ್ಲಿ ಶಾಸಕರ ನಿವಾಸದಲ್ಲಿದ್ದಂತ ಹಾರ್ಡ್ ಡಿಸ್ಕ್, ಪೆನ್ ಡ್ರೈವ್, 2 ಲ್ಯಾಪ್ ಟಾಪ್, ಸಿಸಿಟಿವಿ ಡಿವಿಆರ್ ಮತ್ತು ಶಾಸಕರ ಆಪ್ತರ ಮನೆಗಳಲ್ಲಿ ಪೆನ್ ಡ್ರೈವ್ ಸೇರಿದಂತೆ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಇನ್ನೂ ಪೆನ್ ಡ್ರೈವ್ ನಲ್ಲಿ ಇರುವಂತ ಮಾಹಿತಿ ಬಗ್ಗೆ ಕುತೂಹಲ ಮೂಡಿದ್ದು, ಅವುಗಳನ್ನು ಸೈಬರ್ ತಜ್ಞರ ಪರಿಶೀಲನೆಗೆ ಎಸ್ಐಟಿ ಕಳುಹಿಸಿದೆ. ಅದರಲ್ಲಿ ಯಾವೆಲ್ಲಾ ದಾಖಲೆಗಳು, ವೀಡಿಯೋಗಳಿದ್ದಾವೆ ಎಂಬುದು ಪರಿಶೀಲನೆಯ ನಂತ್ರ ತಿಳಿಯಲಿದೆ.