ನವದೆಹಲಿ : ಮಾಜಿ ಪ್ರಧಾನಿ, ಕಾಂಗ್ರೆಸ್ ಹಿರಿಯ ನಾಯಕ ಡಾ.ಮನಮೋಹನ್ ಸಿಂಗ್ ಅವರಿಗೆ ಇಂದು 92ನೇ ಹುಟ್ಟುಹಬ್ಬದ ಸಂಭ್ರಮ. ಮಾಜಿ ಪ್ರಧಾನಿ ಸೆಪ್ಟೆಂಬರ್ 26, 1932 ರಂದು ಪಶ್ಚಿಮ ಪಂಜಾಬ್’ನ (ಇಂದಿನ ಪಾಕಿಸ್ತಾನ) ಗಾಹ್’ನಲ್ಲಿ ಜನಿಸಿದರು. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ರಾಜಕೀಯ ನಾಯಕರು ಸಿಂಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಶುಭ ಕೋರಿದ ಪ್ರಧಾನಿ ಮೋದಿ.!
ಪ್ರಧಾನಿ ಮೋದಿ ಅವರು ಡಾ.ಸಿಂಗ್ ಅವರಿಗೆ ಜನ್ಮದಿನದ ಶುಭಾಶಯಗಳನ್ನ ಕೋರಿದರು ಮತ್ತು ಅವರ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸಿದರು. “ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ದೀರ್ಘ ಮತ್ತು ಆರೋಗ್ಯಕರ ಜೀವನದಿಂದ ಆಶೀರ್ವದಿಸಲ್ಪಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಪಿಎಂ ಮೋದಿ ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
Birthday greetings to former PM Dr. Manmohan Singh Ji. I pray that he is blessed with a long and healthy life.
— Narendra Modi (@narendramodi) September 26, 2024
Watch Video : ಕೇರಳದಲ್ಲಿ ಸಿನಿಮೀಯ ಶೈಲಿಯಲ್ಲಿ ‘2.5 ಕೆಜಿ ಚಿನ್ನ’ ದರೋಡೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸಿಎಂ ಸಿದ್ದರಾಮಯ್ಯ ಸೂಕ್ಷ್ಮ ರಾಜಕಾರಣಿ, ‘ರಾಜೀನಾಮೆ’ ಕೊಡ್ತಾರೆ : ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆ
BIGG NEWS : ‘ಮ್ಯಾನ್ಮಾರ್’ನಿಂದ 900 ಕುಕಿ ಉಗ್ರರು ಒಳನುಸುಳಿದ್ದಾರೆ’ ವರದಿ ತಳ್ಳಿಹಾಕಿದ ‘ಮಣಿಪುರ ಸರ್ಕಾರ’