ಬೆಂಗಳೂರು : ದೇಶದಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳ ನಡುವೆಯೇ ಇನ್ಮುಂದೆ ಕರ್ನಾಟಕದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ 7 ವರ್ಷ ಜೈಲು ನೀಡುವ ನಿಯಮಕ್ಕೆ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ.
ಕರ್ನಾಟಕ ವೈದ್ಯಕೀಯ ನೋಂದಣಿ ಅಧಿನಿಯಮ, 1961ನ್ನು ಮತ್ತು ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ ಮೇಲೆ ಹಿಂಸಾಚಾರವನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಅಧಿನಿಯಮ, 2009ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಒಂದು ಅಧಿನಿಯಮ.
ಕರ್ನಾಟಕ ವೈದ್ಯಕೀಯ ನೋಂದಣಿ ಅಧಿನಿಯಮ, 1961(ಕರ್ನಾಟಕ ಅಧಿನಿಯಮ 1961ರ 34) ನ್ನು ಮತ್ತು ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ ಮೇಲೆ ಹಿಂಸಾಚಾರವನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಅಧಿನಿಯಮ, 2009 (2009ರ ಕರ್ನಾಟಕ ಅಧಿನಿಯಮ 1)ನ್ನು, ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ; ಇದು, ಭಾರತ ಗಣರಾಜ್ಯದ ಎಪ್ಪತ್ತೈದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-
(1)ಸಂಕ್ಷಿಪ್ತ ಹೆಸರು, ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಅಧಿನಿಯಮ, 2024 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
(3)ಕರ್ನಾಟಕ ಅಧಿನಿಯಮ 1961ರ 34 ರ ತಿದ್ದುಪಡಿ. ಕರ್ನಾಟಕ ವೈದ್ಯಕೀಯ ನೋಂದಣಿ ಅಧಿನಿಯಮ, 1961(ಕರ್ನಾಟಕ ಅಧಿನಿಯಮ 1961ರ 34) ರಲ್ಲಿ,-
(4) 3ನೇ ಪ್ರಕರಣದ (3)ನೇ ಉಪ-ಪ್ರಕರಣಕ್ಕೆ ಬದಲಾಗಿ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“(5) ಉಪ ಪ್ರಕರಣ (2)ರ (ಡಿ) ಖಂಡದ ಅಡಿಯಲ್ಲಿ ನಾಮನಿರ್ದೇಶನ ಮಾಡುವಾಗ ರಾಜ್ಯ ಸರ್ಕಾರವು ಮಹಿಳೆಯರ ಮತ್ತು ವೃತ್ತಿಗರ ಇತರ ಸಾಮಾಜಿಕ ಗುಂಪುಗಳ, (ಎ), (ಬಿ) ಮತ್ತು (ಸಿ) ಖಂಡಗಳ ಅಡಿಯಲ್ಲಿ ಯಾರನ್ನು ಆಯ್ಕೆ ಮಾಡಿಲ್ಲವೋ ಅಂತ ಪ್ರತಿನಿಧಿಗಳ ಕ್ಷೇಮುಗಳನ್ನು ಯುಕ್ತವಾಗಿ ಗಮನದಲ್ಲಿಟ್ಟುಕೊಂಡಿರತಕ್ಕದ್ದು. ನಾಮನಿರ್ದೇಶನ ಪ್ರಕ್ರಿಯೆಯನ್ನು ಚುನಾವಣೆಗಳು ಮುಕ್ತಾಯಗೊಂಡ ಹದಿನೈದು ದಿನಗಳೊಳಗೆ ಪೂರ್ಣಗೊಳಿಸತಕ್ಕದ್ದು.”
(ii) ಪ್ರಕರಣ 3ರ ನಂತರ, ಈ ಕೆಳಕಂಡ ಹೊಸ ಪ್ರಕರಣವನ್ನು ಸೇರಿಸತಕ್ಕದ್ದು, ಎಂದರೆ:-
‘3ಎ.ಚುನಾವಣಾ ಕಾರ್ಯವಿಧಾನ.. ಪ್ರಕರಣ 3ರ (2)ನೇ ಉಪ ಪ್ರಕರಣದ (ಎ), (ಬಿ) ಮತ್ತು (ಸಿ) ಖಂಡಗಳ ಅಡಿಯಲ್ಲಿ ಸಂಬಂಧಪಟ್ಟ ಪ್ರವರ್ಗಗಳಿಂದ ಪರಿಷತ್ತಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ಪ್ರಕ್ರಿಯೆಯನ್ನು ಪ್ರಸ್ತುತ ಇರುವ ಸದಸ್ಯರ ಅವಧಿಯು ಪೂರ್ಣಗೊಳ್ಳುವ ಮೂರು ತಿಂಗಳುಗಳಿಗಿಂತ ಮುಂಚೆ ಮುಕ್ತಾಯಗೊಳಿಸತಕ್ಕದ್ದು.”
(iii) ಪ್ರಕರಣ 5ಕ್ಕೆ ಬದಲಾಗಿ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:- 5. ಪದಾವಧಿ. (1) ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಡಿ) ಖಂಡದಲ್ಲಿ ಉಲ್ಲೇಖಿಸಲಾದ ಸದಸ್ಯರನ್ನು ಹೊರತುಪಡಿಸಿ ಪರಿಷತ್ತಿನ ಇತರ ಸದಸ್ಯರು, ಈ ಅಧಿನಿಯಮದ ಉಪಬಂಧಗಳಿಗೆ ಒಳಪಟ್ಟು, ಅವರ ನಾಮನಿರ್ದೇಶನ ಅಥವಾ ಚುನಾವಣೆಯ ದಿನಾಂಕದಿಂದ ಐದು ವರ್ಷಗಳ ಪದಾವಧಿಯನ್ನು ಹೊಂದಿರತಕ್ಕದ್ದು.
(2) ಎರಡು ಅವಧಿಗಳ ಕಾಲ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಪದವನ್ನು ಧಾರಣ ಮಾಡಿದ ವ್ಯಕ್ತಿಯು ಅದೇ ಪದಕ್ಕೆ ಚುನಾಯಿತನಾಗಲು ಅರ್ಹನಾಗಿರತಕ್ಕದ್ದಲ್ಲ.
(iv) ಪ್ರಕರಣ 9ಕ್ಕೆ ಬದಲಾಗಿ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ
“9. ಪರಿಷತ್ತಿನ ಸಭೆಯ ಸಮಯ ಮತ್ತು ಸ್ಥಳ ಹಾಗೂ ಸಭೆಯ ಕಾರ್ಯವಿಧಾನ. (1) ವೈದ್ಯಕೀಯ ಪರಿಷತ್ತು, ವೈದ್ಯಕೀಯ ಪರಿಷತ್ತಿನ ಸಭೆಯ ಸಮಯ ಮತ್ತು ಸ್ಥಳ ಹಾಗೂ ಸಭೆಯನ್ನು ಕರೆಯುವ ವಿಧಾನಕ್ಕೆ ಸಂಬಂಧಿಸಿದಂತೆ ಅಗತ್ಯವಿರಬಹುದಾದಂಥ ವಿನಿಯಮಗಳನ್ನು ರಚಿಸತಕ್ಕದ್ದು, ವೈದ್ಯಕೀಯ ಪರಿಷತ್ತಿನ ಸಭೆಯನ್ನು ಕರೆಯುವ ಸಂಬಂಧವಾಗಿ ಯಾವುದೇ ವಿನಿಯಮ ಇಲ್ಲದಿದ್ದ ಸಂದರ್ಭದಲ್ಲಿ ಅಧ್ಯಕ್ಷನು ಪ್ರತಿಯೊಬ್ಬ ಸದಸ್ಯನಿಗೆ ಪತ್ರ ಬರೆಯುವ ಮೂಲಕ ತನಗೆ ಸೂಕ್ತವೆಂದು ಕಂಡುಬರಬಹುದಾಂಥ ಸಮಯ ಮತ್ತು ಸ್ಥಳದಲ್ಲಿ ಸಭೆಯನ್ನು ಕರೆಯುವುದು ಕಾನೂನು ಬದ್ಧವಾಗಿರತಕ್ಕದ್ದು; ಹಾಗೂ ಪ್ರತಿಯೊಂದು ಸಭೆಯಲ್ಲಿ, ಅಧ್ಯಕ್ಷನು ಹಾಜರಿಲ್ಲದಿರುವಾಗ ಉಪಾಧ್ಯಕ್ಷನು ಅಧ್ಯಕ್ಷನಾಗಿ ಕಾರ್ಯನಿರ್ವಹಿಸತಕ್ಕದ್ದು; ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇಬ್ಬರೂ ಹಾಜರಿಲ್ಲದಿರುವಾಗ, ಹಾಜರಿರುವ ಸದಸ್ಯರ ಪೈಕಿ ಆಯ್ಕೆ ಮಾಡಿದ ಸದಸ್ಯನು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು ಮತ್ತು ವೈದ್ಯಕೀಯ ಪರಿಷತ್ತಿನ ಎಲ್ಲಾ ಕಾರ್ಯಗಳನ್ನು ಹಾಜರಿರುವ ಸದಸ್ಯರ ಬಹುಮತಗಳ ಮೂಲಕ ನಿರ್ಧರಿಸತಕ್ಕದ್ದು; ಮತ್ತು ಯಾವುದೇ ಸಭೆಯಲ್ಲಿ ಹಾಜರಿರುವ ಒಟ್ಟು ಸದಸ್ಯರ ಸಂಖ್ಯೆಯು ಎಂಟಕ್ಕಿಂತ ಕಡಿಮೆ ಇರತಕ್ಕದ್ದಲ್ಲ, ಮತ್ತು ಅಂಥ ಎಲ್ಲಾ ಸಭೆಗಳಲ್ಲೂ ಮತಗಳು ಸಮಾನವಾದ ಸಂದರ್ಭದಲ್ಲಿ ಅಧ್ಯಕ್ಷನು ತತ್ಕಾಲದಲ್ಲಿ ಹೆಚ್ಚುವರಿಯಾಗಿ ವೈದ್ಯಕೀಯ ಪರಿಷತ್ತಿನ ಸದಸ್ಯನಾಗಿ ತನ್ನ ನಿರ್ಣಾಯಕ ಮತವನ್ನು ಚಲಾಯಿಸತಕ್ಕದ್ದು.
ಪರಂತು, 3ನೇ ಪ್ರಕರಣದ (2)ನೇ ಉಪಪ್ರಕರಣದ (ಡಿ) ಖಂಡದ ಅಡಿಯಲ್ಲಿ ನಾಮನಿರ್ದೇಶಿತನಾದ ಸದಸ್ಯನು ವೈದ್ಯಕೀಯ ಪರಿಷತ್ತಿನ ಸಭೆಯಲ್ಲಿ ಭಾಗವಹಿಸತಕ್ಕದು ಆದರೆ ಅಂಥ ಸಭೆಯಲ್ಲಿ ಮತ
ಚಲಾಯಿಸುವ ಹಕ್ಕನ್ನು ಹೊಂದಿರತಕ್ಕದ್ದಲ್ಲ. (2) ಸಭೆಯಲ್ಲಿ ಕೋರಂ ಇಲ್ಲದಿದ್ದ ಸಂದರ್ಭದಲ್ಲಿ ಸಭೆಯನ್ನು ಮುಂದೂಡತಕ್ಕದ್ದು ಮತ್ತು ಮುಂದೂಡಿದ ಸಭೆಯ ಕೋರಂ ಸಂಖ್ಯೆಯು ನಾಲ್ಕು ಸದಸ್ಯರಾಗಿರತಕ್ಕದ್ದು.”
(v) ಪ್ರಕರಣ 11ಕ್ಕೆ ಬದಲಾಗಿ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“11. ರಿಜಿಸ್ಟ್ರಾರ್ ಮತ್ತು ಅಧಿಕಾರಿಗಳು.- (1) ವೈದ್ಯಕೀಯ ಪರಿಷತ್ತು ಮೂರು ವರ್ಷಗಳ ಅವಧಿಗೆ ಒಬ್ಬ ರಿಜಿಸ್ಟ್ರಾರ್ ಮತ್ತು ಉಪ ರಿಜಿಸ್ಟ್ರಾರ್‌ನ್ನು ನೇಮಕ ಮಾಡತಕ್ಕದ್ದು, ರಿಜಿಸ್ಟ್ರಾರ್ ಗೈರು ಹಾಜರಿಯಲ್ಲಿ ಉಪ ರಿಜಿಸ್ಟ್ರಾರ್ ಆತನ ಸ್ನಾನದಲ್ಲಿ ಕಾರ್ಯನಿರ್ವಹಿಸತಕ್ಕದ್ದು.
(2) ರಿಜಿಸ್ಟ್ರಾರರನ್ನು ಅಥವಾ ಉಪ ರಿಜಿಸ್ಟ್ರಾರರನ್ನು ನೇಮಕ ಮಾಡುವ ಅಥವಾ ವಜಾಗೊಳಿಸುವ ಅಥವಾ ರಿಜಿಸ್ಟ್ರಾರನಾಗಿ ಅಥವಾ ಉಪ ರಿಜಿಸ್ಟ್ರಾರವಾಗಿ ಕಾರ್ಯನಿರ್ವಹಿಸಲು ನೇಮಕ ಮಾಡುವ ವೈದ್ಯಕೀಯ ಪರಿಷತ್ತಿನ ಯಾವುದೇ ಆದೇಶವು ರಾಜ್ಯ ಸರ್ಕಾರದ ಪೂರ್ವ ಅನುಮೋದನೆಗೆ ಒಳಪಟ್ಟಿರತಕ್ಕದ್ದು.
(3) ರಿಜಿಸ್ಟ್ರಾರ್ ಮತ್ತು ಉಪ ರಿಜಿಸ್ಟ್ರಾರನಿಗೆ ವೈದ್ಯಕೀಯ ಪರಿಷತ್ತು ತಾನು ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ವೇತನ ಮತ್ತು ಭತ್ಯೆಗಳನ್ನು ಸಂದಾಯ ಮಾಡತಕ್ಕದ್ದು.
(4) ವೈದ್ಯಕೀಯ ಪರಿಷತ್ತು ಈ ಅಧಿನಿಯಮದ ಉದ್ದೇಶಗಳಿಗಾಗಿ ಅವಶ್ಯವಿರಬಹುದಾದಂಥ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಹ ನೇಮಕ ಮಾಡಬಹುದು.
(5) ಈ ಪ್ರಕರಣದ ಅಡಿಯಲ್ಲಿ ನೇಮಕಗೊಂಡ ರಿಜಿಸ್ಟ್ರಾರ್ ಅಥವಾ ಯಾರೇ ಇತರ ಅಧಿಕಾರಿ ಅಥವಾ ಸಿಬ್ಬಂದಿಯು ಭಾರತ ನ್ಯಾಯ ಸಂಹಿತೆ, 2023ರ 2(28)ನೇ ಪ್ರಕರಣದ ಅರ್ಥವ್ಯಾಪ್ತಿಯೊಳಗೆ ಸಾರ್ವಜನಿಕ ನೌಕರನೆಂದು ಭಾವಿಸತಕ್ಕದ್ದು.
(vi) 13ನೇ ಪ್ರಕರಣದ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“13ಎ. ವೃತ್ತಿ ನಿಷೇಧ.- (1) ಯಾರೇ ವ್ಯಕ್ತಿಯು 13ನೇ ಪ್ರಕರಣದ ಅನುಸಾರ ಪರಿಷತ್ತಿನಲ್ಲಿ ನೋಂದಣಿಯಾದ ಹೊರತು ತಾನು ವೈದ್ಯಕೀಯ ವೃತ್ತಿಗನಾಗಿ ಕಾರ್ಯನಿರ್ವಹಿಸತಕ್ಕದ್ದಲ್ಲ/ ಪ್ರತಿನಿಧಿಸತಕ್ಕದ್ದಲ್ಲ.
The Kannada Language Comprehensive Development Act, 2022 (Karnataka Act No. 13 of 2023)ರ ಪ್ರಕರಣ 6 ರಡಿಯಲ್ಲಿ ರಾಜ್ಯಪಾಲರಿಂದ ಅಧಿಕೃತಗೊಳಿಸಿದ the Karnataka Medical Registration and certain other law (Amendment) Act, 2024 (Karnataka Act No 41 of 2024) ಕರ್ನಾಟಕ ರಾಜ್ಯಪತ್ರದಲ್ಲಿ (ಭಾಗ IV-A) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.