ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವಂತ ಬಿಬಿಎಂಪಿ ಗೇಟ್ ಬಿದ್ದು ಬಾಲಕ ಸಾವನ್ನಪ್ಪಿದ್ದನು. ಈ ಘಟನೆಯ ಸಂಬಂಧ ಕರ್ತವ್ಯ ನಿರ್ಲಕ್ಷ್ಯದ ಹಿನ್ನಲೆಯಲ್ಲಿ ಬಿಬಿಎಂಪಿಯ ಸಹಾಯಕ ಅಭಿಯಂತರ ಟಿ.ಶ್ರೀನಿವಾಸ ರಾಜು ಎಂಬುವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಈ ಸಂಬಂಧ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರಿಂದ ಆದೇಶ ಹೊರಡಿಸಿದ್ದು, ಕರ್ತು ನಿರ್ವತ್ ಆರೋಪಡಿದ ಎಇ ಟಿ.ಶ್ರೀನಿವಾಸ ರಾಜು ಎಂಬುವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿ ಅಮಾನತುಗೊಳಿಸಲಾಗಿದೆ. ಗೇಟ್ ನ ಕೀಲುಗಳನ್ನು ಸಾಮರ್ಥ್ಯಕ್ಕೆ ತಕ್ಕಂತೆ ಅಳವಡಿಸದೇ ನಿರ್ಲಕ್ಷ್ಯ ವಹಿಸಿರುವುದಾಗಿ ತಿಳಿಸಲಾಗಿದೆ.
ಸರಿಯಾದ ಸಮಯಕ್ಕೆ ಬಿಬಿಎಂಪಿಯ ಮಲ್ಲೇಶ್ವರಂನ ಆಟದ ಮೈದಾನದ ಗೇಟ್ ನಿರ್ವಹಣೆ ಮಾಡದ ಕಾರಣ, ಬಾಲಕ ಸಾವನ್ನಪ್ಪುವಂತೆ ಆಗಿದೆ. ಈ ಘಟನೆಯ ನಿರ್ಲಕ್ಷ್ಯದ ಆರೋಪದಡಿ ಟಿ.ಶ್ರೀನಿವಾಸ ರಾಜು ಅವರನ್ನು ಅಮಾನತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಅಂದಹಾಗೇ 2022ರಲ್ಲಿ ಟಿ.ಶ್ರೀನಿವಾಸ ರಾಜು ಅವರು ದತ್ತಾತ್ರೆಯ ವಾರ್ಡ್ ನ ಎಇ ಆಗಿ ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆಯಲ್ಲಿ ಗೇಟ್ ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ರಾಜಾಜಿನಗರ ವಾರ್ಡ್ ನ ಎಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನೂ ಈ ಘಟನೆ ಸಂಬಂಧ ಬಿಬಿಎಂಪಿಯ ಇಇ ವೆಂಕಟೇಶ್ ಅವರಿಗೆ ನೋಟಿಸ್ ನೀಡಲಾಗಿದೆ. ಮೂರು ದಿನಗಳಲ್ಲಿ ನೋಟಿಸ್ ಗೆ ಘಟನೆಯ ಸಂಬಂಧ ಉತ್ತರಿಸುವಂತೆಯೂ ಸೂಚಿಸಲಾಗಿದೆ.
‘ಫೈಯರ್ಸ್ ಫೌಂಡೇಷನ್’ನಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ‘ರೈನ್ ಕೋಟ್’ ವಿತರಣೆ
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಈ ಸವಾಲ್ ಹಾಕಿದ ಸಚಿವ ಕೃಷ್ಣಭೈರೇಗೌಡ