ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರಂತೆ ವ್ಯಯಕ್ತಿಕ ದಾಳಿ ನಡೆಸುವುದು, ನಿಂದಿಸುವುದು ನಮ್ಮ ಸಂಸ್ಕೃತಿಯಲ್ಲ. ಯಾರು ಯಾರನ್ನೇ ನಿಂದಿಸಿದರೂ ಸತ್ಯ ಏನು ಎಂಬುದು ಜನರಿಗೆ ತಿಳಿದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಗಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಜಮೀನನ್ನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಚ್ಡಿ ಕುಮಾರಸ್ವಾಮಿ ಅವರು ಡಿ ನೋಟಿಫಿಕೇಷನ್ ಮಾಡಲು ಮುಂದಾಗಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅದೇ ಜಮೀನನ್ನು ಸತ್ತವರ ಹೆಸರಿಗೆ ಡಿನೋಟಿಫೈ ಮಾಡಲಾಗಿತ್ತು. ಕೊನೆಗೆ ಈ ಜಮೀನು ಕುಮಾರಸ್ವಾಮಿ ಅವರ ಬಾಮೈದನ ಹೆಸರಿಗೆ ನೋಂದಣಿಯಾಗಿತ್ತು.
ಈ ಪ್ರಕರಣವನ್ನು ಉಲ್ಲೇಖಿಸಿ ಸಚಿವ ಕೃಷ್ಣ ಬೈರೇಗೌಡ ಅವರು ಸತ್ತವರ ಹೆಸರಿಗೆ ಡಿನೋಟಿಫೈ ಮಾಡುವುದು ಅಪರಾಧ ಅಲ್ಲವೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿಯವರು ಕೃಷ್ಣ ಬೈರೇಗೌಡ ಅವರನ್ನು ಹೆಬ್ಬೆಟ್ಟು ಎಂದು ಜರಿದಿದ್ದರು. ಕುಮಾರಸ್ವಾಮಿಯವರ ನಿಂದನೆಗೆ ಪ್ರತಿಕ್ರಿಯಿಸಿರುವ ಸಚಿವರು, “ರಾಜಕಾರಣದಲ್ಲಿ ವ್ಯಯಕ್ತಿಕ ದಾಳಿ ನಡೆಸುವುದು ನಿಂದಿಸುವುದು ಕುಮಾರಸ್ವಾಮಿಯವರಿಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ, ನಮ್ಮದು ಅಂತಹ ಸಂಸ್ಕೃತಿಯಲ್ಲ. ನಾವು ಅಂತಹ ಸಂಸ್ಕೃತಿಗೆ ಎಂದಿಗೂ ಜೋತು ಬೀಳುವುದಿಲ್ಲ. ಅಲ್ಲದೆ, ಇಂತಹ ನಿಂದನೆಗಳು ವ್ಯಯಕ್ತಿಕ ದಾಳಿಗಳಿಗೆ ನಾವು ಬಗ್ಗುವವರೂ ಅಲ್ಲ” ಎಂದು ಸ್ಪಷ್ಟ ಸಂದೇಶ ನೀಡಿದರು.
ಮುಂದುವರೆದು, “ಈಗಲೂ ನಾನು ಅದೇ ಪ್ರಶ್ನೆಯನ್ನು ಮುಂದಿಡುತ್ತೇನೆ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಈ ಜಮೀನಿನ ಡಿನೋಟಿಫೈ ಗೆ ಅತ್ಯುತ್ಸಾಹ ತೋರಿದ್ದು ಏಕೆ? ಇವರ ಅತ್ತೆ ಈ ಭೂಮಿಯನ್ನು ತಮ್ಮ ಹೆಸರಿಗೆ ಜಿಪಿಎ ಮಾಡಿಸಿಕೊಂಡದ್ದು ಸುಳ್ಳೇ? ಅಂತಿಮವಾಗಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಸಹೋದರನ ಹೆಸರಿಗೆ ಈ ಜಮೀನು ನೋಂದಣಿಯಾಗಿಲ್ಲವೇ? ಇದು ಅಧಿಕಾರದ ದುರ್ಬಳಕೆ ಅಲ್ಲವೇ? ಈ ಬಗ್ಗೆ ಕುಮಾರಸ್ವಾಮಿಯವರ ಸ್ಪಷ್ಟನೆ ನೀಡಲಿ ಸಾಕು” ಎಂದು ಸವಾಲು ಹಾಕಿದರು.
BIG NEWS: ರಾಜ್ಯದಲ್ಲಿ ಅಕ್ರಮ ನೋಂದಣಿ, ತೆರಿಗೆ ವಂಚನೆಗೆ ಮಹತ್ವದ ಕ್ರಮ: ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮ ಜಾರಿ
GOOD NEWS: ರಾಜ್ಯದ ಜನತೆಗೆ ಗುಡ್ ನ್ಯೂಸ್: ಅ.21ರಿಂದ ವಾರಾಂತ್ಯಗಳಲ್ಲೂ ‘ಉಪನೋಂದಣಿ ಕಚೇರಿ’ ಓಪನ್