ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರದ ಮೇಲೆ ಹದ್ದಿನ ಕಣ್ಣು ನೆಡಲಾಗಿದೆ. ವಿವಿಧ ಇಲಾಖೆಯಲ್ಲಿನ ಅನಗತ್ಯ ಸಿಬ್ಬಂದಿಗೆ ಗೇಟ್ ಪಾಸ್ ಕೊಡೋದಕ್ಕೆ ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ. ಅದರಲ್ಲೂ ಸರ್ಕಾರದ ಮಾಹಿತಿ ಸೋರಿಕೆ, ಕಡತ ಸೋರಿಕೆ ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕೂ ಮುಂದಾಗಿದೆ ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ, ಸಚಿವರ ಕಚೇರಿಯಲ್ಲಿ ಬೇಕಾಬಿಟ್ಟಿ ಸಿಬ್ಬಂದಿ ಇದ್ದರೇ ಅವರನ್ನ ಮನೆಗೆ ಕಳುಹಿಸಲು ನಿರ್ಧಾರ ಕೈಗೊಳ್ಳಲು ಪ್ಲಾನ್ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳ ವರದಿ ನೀಡಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಇನ್ನೂ ರಾಜ್ಯ ಸರ್ಕಾರದ ಕಡತಗಳ ಸೋರಿಕೆಗಳಿಗೂ ಬ್ರೇಕ್ ಹಾಕುವ ತಂತ್ರಗಾರಿಕೆಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿ ಎಂದು ಹೇಳಲಾಗುತ್ತಿದೆ.
ಆಡಳಿತ ಯಂತ್ರವನ್ನು ಬಿಗಿಗೊಳಿಸಲು ಅನಗತ್ಯವಾಗಿರೋರಿಗೆ ಗೇಟ್ ಪಾಸ್ ಕೊಡಬೇಕು ಎಂಬಂತ ಕಟ್ಟು ನಿಟ್ಟಿನ ತೀರ್ಮಾನಕ್ಕೂ ಸರ್ಕಾರ ಬಂದಿದೆ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಸಿಎಂ, ಸಚಿವರ ಕಚೇರಿಯಲ್ಲಿ ಅನಗತ್ಯವಾಗಿ ಇರುವಂತ ಅಧಿಕಾರಿ, ಸಿಬ್ಬಂದಿ ವರ್ಗದವರ ಮಾಹಿತಿ ಒದಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಟಾಸ್ಕ್ ನೀಡಿರುವುದಾಗಿ ಹೇಳಲಾಗುತ್ತಿದೆ.
ಇದಷ್ಟೇ ಅಲ್ಲದೇ ಸರ್ಕಾರದ ಮಾಹಿತಿ ಸೋರಿಕೆ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಪ್ರತ್ಯೇಕ ವರದಿ ನೀಡಲು ಸರ್ಕಾರ ಕೇಳಿರುವುದಾಗಿ ಹೇಳಲಾಗುತ್ತಿದೆ. ಆ ಬಗ್ಗೆ ಮತ್ತಷ್ಟು ಖಚಿತ ಮಾಹಿತಿ ಲಭ್ಯವಾಗಬೇಕಿದೆ.
ಇರಾನ್ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 30 ಕಾರ್ಮಿಕರು ಸಾವು, ಹಲವರಿಗೆ ಗಾಯ | Iran coal mine blast