ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಮೊದಲ ಬಾರಿಗೆ ಇಂದು ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಇಂತಹ ಅರ್ಜಿಯನ್ನು ಸೋಮವಾರಕ್ಕೆ ಕೋರ್ಟ್ ಮುಂದೂಡಿದೆ.
ಇಂದು ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ನ್ಯಾಯಮೂರ್ತಿ ಜೈ.ಶಂಕರ್ ಅವರು ವಿಚಾರಣ ನೆಡಸಿದರು. ಎಸ್ ಪಿಪಿಗೆ ನೋಟಿಸ್ ಜಾರಿಗೆ ಕೋರ್ಟ್ ಆದೇಶಿಸಿ, ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಅಂದಹಾಗೇ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರ ಬೆಳಕಿಗೆ ಬಂದ ನಂತ್ರ ಬಳ್ಳಾರಿ ಜೈಲಿನಲ್ಲಿದ್ದಾರೆ. ಅವರು ಅಲ್ಲಿಂದಲೇ ತಮ್ಮ ಪರ ವಕೀಲ ಸುನೀಲ್ ಮೂಲಕ ಜಾಮೀನಿಗಾಗಿ ಮೊದಲ ಬಾರಿಗೆ ಅರ್ಜಿಯನ್ನು ಸಲ್ಲಿಸಿದ್ದರು.
BREAKING: ಬೆಂಗಳೂರಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ: ಯುವತಿ ಬರ್ಬರವಾಗಿ ಕೊಲೆ
ಬೆಂಗಳೂರಲ್ಲಿ ಹೆಚ್ಚಿದ ‘ನಿಫಾ’ ಭೀತಿ : ಓರ್ವ ವ್ಯಕ್ತಿಗೆ ಸೊಂಕಿನ ಗುಣಲಕ್ಷಣ ಪತ್ತೆ, 41 ಜನರಿಗೆ ‘ಹೋಮ್ ಕ್ವಾರಂಟೈನ್’!