ಧಾರವಾಡ : ರಾಜ್ಯದಲ್ಲಿ ಮತ್ತೊಮ್ಮೆ ಧರ್ಮ ದಂಗಲ್ ಶುರುವಾಗಿದ್ದು, ಧಾರವಾಡದ ಸೂಪರ್ ಮಾರ್ಕೆಟ್ ನಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಬೋರ್ಟ್ ವಿಚಾರಕ್ಕೆ ಜಟಾಪಟಿ ನಡೆದಿದೆ.
ಧಾರವಾಡದ ಸೂಪರ್ ಮಾರ್ಕೆಟ್ ನಲ್ಲಿ ಹಲವು ವರ್ಷಗಳಿಂದ ಮರದ ಕೆಳಗೆ ಹನುಮಂತ, ಕರಿಯಮ್ಮ ಹಾಗೂ ನಾಗದೇವರ ಪೂಜೆ ಮಾಡಲಾಗುತ್ತಿತ್ತು. ಆದರೆ ಇದೀಗ ಪಕ್ಕದ ಮರದ ಕೆಳಗೆ ಮಹಬೂಬ್ ಸುಬಾನಿ ದರ್ಗಾದ ಕಲ್ಲು ಇಡಲಾಗಿದ್ದು, ಜಟಾಪಟಿಗೆ ಕಾರಣವಾಗಿದೆ.
ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಆಗಮಿಸಿದ್ದು, ಎರಡು ಸಮುದಾಯಗಳ ದೇವರುಗಳನ್ನು ತೆರವು ಮಾಡುವುದಾಗಿ ಹೇಳಿದ್ದಾರೆ. ಆದರೆ ಮಹಾನಗರ ಪಾಲಿಕೆಯ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.