ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಗ್ರಾಮೀಣ ಪ್ರದೇಶದ 20 ರಿಂದ 45 ವಯೋಮಿತಿಯೊಳಗಿನ ನಿರುದ್ಯೋಗಿ ಯುವತಿಯರಿಗಾಗಿ ಕೃತಕ ಆಭರಣ (ಕಸ್ಟಮ್ ಜುವ್ಯೆಲರಿ) ಉಚಿತ ತರಬೇತಿಯನ್ನು ಈ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ನೋಂದಾಯಿಸಿಕೊಳ್ಳಬಹುದು.
ತರಬೇತಿಯ ಅವಧಿ 13 ದಿನಗಳು. ಅ.14 ರಿಂದ ನೀಡಲಾಗುತ್ತದೆ. ಊಟ ವಸತಿಯೊಂದಿಗೆ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಕೌಶಲ್ಯದ ಜೊತೆಗೆ ಉದ್ಯಮಶೀಲತೆ, ವ್ಯಕ್ತಿತ್ವ ವಿಕಾಸನಕ್ಕೆ ಸಂಬAಧಿಸಿದ ಮಾಹಿತಿ ನೀಡಲಾಗುತ್ತದೆ. ಈ ಕ್ಷೇತ್ರದಲ್ಲಿ ಪ್ರಾಥಮಿಕ ಜ್ಞಾನÀ ಹೊಂದಿರುವ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಮತ್ತು ಕನ್ನಡ ಭಾಷೆಯನ್ನು ಓದಲು, ಬರೆಯಲು ಬರುವಂತಹ ನಿರುದ್ಯೋಗಿ ಸ್ವ-ಉದ್ಯೋಗ ಆಕಾಂಕ್ಷಿಗಳು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ವಿದ್ಯಾರ್ಹತೆ ಕನಿಷ್ಟ 10ನೇ ತರಗತಿ ಪಾಸಾಗಿರಬೇಕು. ತರಬೇತಿಯ ಬಗ್ಗೆ ಪ್ರಾಥಮಿಕ ಅನುಭವ ಹೊಂದಿದವರಿಗೆ ಆದ್ಯತೆ ಕೊಡಲಾಗುವುದು. 35 ಜನರಿಗೆ ಮಾತ್ರ ಅವಕಾಶವಿದ್ದು, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಂಸ್ಥೆಯಲ್ಲಿ ಈ ಮೊದಲು ತರಬೇತಿ ಪಡೆದವರು ಪುನಃ ತರಬೇತಿ ಪಡೆಯಲು ಅರ್ಹರಲ್ಲ.
ಆಸಕ್ತ ಅರ್ಹ ಅಭ್ಯರ್ಥಿಗಳು ತ್ವರಿತವಾಗಿ ತಮ್ಮ ಹೆಸರು, ವಿಳಾಸ, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿ, ಸಂಬAಧಿತ ವಿಷÀಯದಲ್ಲಿ ಇರುವ ಪ್ರಾಥಮಿಕ ಜ್ಞಾನ, ಅನುಭವ
ಹೊಂದಿದವರು ಖುದ್ದಾಗಿ ಅಥವಾ ಕರೆ ಮೂಲಕ ಅಗತ್ಯ ಮಾಹಿತಿ ನೀಡಿ ಅ.10 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು.
ತರಬೇತಿಗೆ ಆಯ್ಕೆಯಾದ ಕುರಿತು ನಮೂದಿಸಿದ ಮೊಬೈಲ್ ನಂಬರ್‌ಗೆ ಕರೆ ಮಾಡಿ ತಿಳಿಸಲಾಗುವುದು. ತರಬೇತಿಯಲ್ಲಿ ಪಾಲ್ಗೊಳ್ಳಲು ತಗುಲುವ ಪ್ರಯಾಣ ಭತ್ಯೆಯನ್ನು ತಾವೇ ಭರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಅಥವಾ ದೂ.08392-299117, ಮೊ.9449860659, 9008464120 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.