ಬೆಂಗಳೂರು : ಇದೀಗ ಕರ್ನಾಟಕದ ದೂರ ದೂರದ ಪ್ರದೇಶಗಳಲ್ಲಿಯೂ ರಿಲಯನ್ಸ್ ಜಿಯೋದ ನೆಟ್ ವರ್ಕ್ ದೊರೆಯುತ್ತದೆ ಎಂಬುದನ್ನು ಘೋಷಿಸಲಾಗಿದೆ. ಡಿಜಿಟಲ್ ವಿಭಜನೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಇದು ಕಾರ್ಯತಂತ್ರ ಕ್ರಮವಾಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹುಗ್ಯಂನಲ್ಲಿ ಸಂಪರ್ಕ ದೊರೆಯುವಂತೆ ಮಾಡುವಲ್ಲಿ ಜಿಯೋ ಯಶಸ್ಸು ಕಂಡಿದೆ. ಇದಕ್ಕೂ ಮುನ್ನ ಈ ಪ್ರದೇಶಗಳಲ್ಲಿ ಸಂವಹನ ಮೂಲಸೌಕರ್ಯಕ್ಕೆ ಕೊರತೆ ಇತ್ತು.
ಪರಿಸರ ಮತ್ತು ಭೌಗೋಳಿಕ ಸವಾಲುಗಳನ್ನು ದಾಟುವ ಮೂಲಕವಾಗಿ ಜಿಯೋ ತನ್ನ ದೃಢವಾದ 4ಜಿ ಮತ್ತು 5ಜಿ ನೆಟ್‌ವರ್ಕ್ ಅನ್ನು ರಾಜ್ಯದಾದ್ಯಂತ 322ಕ್ಕೂ ಹೆಚ್ಚು ತಾಲ್ಲೂಕುಗಳಿಗೆ ವಿಸ್ತರಿಸಿದೆ. ಈ ತಾಲ್ಲೂಕುಗಳಲ್ಲಿ ಇರುವ ಅನೇಕ ಹಳ್ಳಿಗಳು ಈಗ ಜಿಯೋ ನೆಟ್‌ವರ್ಕ್‌ನಿಂದಾಗಿ ಮಾತ್ರ ಪ್ರಯೋಜನ ಪಡೆಯುತ್ತವೆ. ಇದರೊಂದಿಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಪರಿವರ್ತನೆ ಬದಲಾವಣೆಯನ್ನು ಗುರುತಿಸಬಹುದಾಗಿದೆ.
ಈ ಪ್ರದೇಶಗಳಲ್ಲಿ ವಾಸವಿರುವವರು ಈಗಾಗಲೇ ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಅವು ಯಾವುವು ಅಂತ ನೋಡುವುದಾದರೆ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೆಚ್ಚೆಚ್ಚು ಸಂಪರ್ಕ ವ್ಯವಸ್ಥೆಗಳಾಗಿವೆ. ಮಕ್ಕಳು ಈಗ ನೆಟ್ ವರ್ಕ್ ಸಂಪರ್ಕಕ್ಕಾಗಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡಬೇಕು ಎಂಬ ಪರಿಸ್ಥಿತಿ ಇಲ್ಲ. ಅದಕ್ಕಾಗಿ ಪೋಷಕರು ಜಿಯೋ ನೆಟ್ ವರ್ಕ್ ಗೆ ಕೃತಜ್ಞತೆಗಳನ್ನು ಹೇಳುತ್ತಾರೆ. ಇನ್ನು ಯುವಜನರಿಗೆ ವರ್ಕ್ ಫ್ರಮ್ ಹೋಮ್ ಮಾಡುವುದಕ್ಕೆ ಅನುಕೂಲವಾಗಿದ್ದು, ಇದರಿಂದ ಅವಕಾಶಗಳು ತೆರೆದುಕೊಂಡಿವೆ. ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಆನ್ ಲೈನ್ ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ದೊಡ್ಡ ಮಟ್ಟದ ಸುಧಾರಣೆಯಾಗಿದ್ದು, ದೇಶ- ವಿದೇಶಗಳಲ್ಲಿ ಇರುವಂಥ ಸಂಬಂಧಿಕರ ಜೊತೆಗಿನ ಸಂವಹನ ನಡೆಸುವುದಕ್ಕೂ ಈಗ ಯಾವುದೇ ತೊಂದರೆಗಳಿಲ್ಲ.
ಕರ್ನಾಟಕದಲ್ಲಿ ಹೀಗೆ ಜಿಯೋ ತನ್ನ ನೆಟ್ ವರ್ಕ್ ವಿಸ್ತರಣೆ ಮಾಡುತ್ತಿರುವಂತೆಲ್ಲ ರಾಜ್ಯದಾದ್ಯಂತ ತಡೆರಹಿತ ಸಂಪರ್ಕ ಸಾಧ್ಯವಾಗುತ್ತಿದೆ. ದೂರದ ಪ್ರದೇಶಗಳಲ್ಲಿಯೂ ಜಿಯೋದ ವ್ಯಾಪಕ ಮತ್ತು ವಿಶ್ವಾಸಾರ್ಹ 4ಜಿ/5ಜಿ ನೆಟ್‌ವರ್ಕ್ ಅನ್ನು ಆನಂದಿಸಬಹುದಾಗಿದೆ. ಇನ್ನು ಅನಿಯಮಿತ ವಾಯ್ಸ್ ಮತ್ತು ಡೇಟಾ ಪ್ರಯೋಜನಗಳು ದೊರೆಯುತ್ತಿದ್ದು, ಜಿಯೋದ ಪ್ರೀಮಿಯಂ ಅಪ್ಲಿಕೇಷನ್‌ಗಳಾದ ಜಿಯೋಟಿವಿ ಮತ್ತು ಜಿಯೋಸಿನಿಮಾದಂಥದ್ದರ ಮನರಂಜನೆಯನ್ನು ಪಡೆಯಬಹುದಾಗಿದೆ. ಜಿಯೋದ ಸಿಮ್ ಕಾರ್ಡ್‌ಗಳು ರಾಜ್ಯದಾದ್ಯಂತ ಸುಲಭವಾಗಿ ದೊರೆಯುತ್ತಿವೆ. ಇನ್ನು ಸರಳ ಮತ್ತು ಅನುಕೂಲಕರ ಸೇರ್ಪಡೆಯೂ ಸಾಧ್ಯವಿದೆ. ತುಂಬ ಸರಳವಾದ ಪ್ರಕ್ರಿಯೆಯನ್ನು ಅನುಸರಿಸಿ, ಜಿಯೋ ಚಂದಾದಾರರಾಗಬಹುದು.
ಗ್ರಾಹಕರ ಸಂತೃಪ್ತಿಯು ಜಿಯೋ ಅನುಭವದ ಮೂಲಾಧಾರವಾಗಿದೆ. ಎಲ್ಲ ಸ್ಥಳಗಳಲ್ಲಿ ಮತ್ತು ತಡೆರಹಿತವಾಗಿ ಸಂಪರ್ಕವನ್ನು ಒದಗಿಸುವ ಅದರ ಬದ್ಧತೆಯಿಂದಾಗಿ ಗ್ರಾಮೀಣ ಭಾಗದ ಜನರು ಸಹ ಈಗ ಡಿಜಿಟಲ್ ಕ್ರಾಂತಿಯ ಭಾಗವಾಗಿರುವುದನ್ನು ಖಚಿತಪಡಿಸುತ್ತದೆ.
ರಿಲಯನ್ಸ್ ಜಿಯೊದ ಉಪಕ್ರಮ ಏನಿದೆಯೋ ಅದು ತಂತ್ರಜ್ಞಾನದ ಮೂಲಕ ಜೀವನವನ್ನು ಪರಿವರ್ತಿಸುವ ಅದರ ಬದ್ಧತೆಯನ್ನು ಒತ್ತಿಹೇಳುತ್ತದೆ, ಕರ್ನಾಟಕದ ಮೂಲೆ ಮೂಲೆಯಿಂದಲೂ ಡಿಜಿಟಲ್ ಜಗತ್ತಿಗೆ ಸಂಪರ್ಕ ಇದೆ ಎಂಬುದನ್ನು ಖಚಿತಪಡಿಸುತ್ತದೆ.
ನಾಳೆ, ನಾಡಿದ್ದು ಸಚಿವರು, ಶಾಸಕರು, ಅಧಿಕಾರಿಗಳ ನಿಯೋಗ ಹರಿದ್ವಾರ, ವಾರಣಾಸಿಗೆ ಭೇಟಿ: ಗಂಗಾ ಆರತಿ ವೀಕ್ಷಣೆ
ರಾಜ್ಯದ ಆರೋಗ್ಯ ಇಲಾಖೆಯ ‘NHM ನೌಕರ’ರಿಗೆ ಮಹತ್ವದ ಮಾಹಿತಿ: ಹೀಗಿವೆ ನಿಮಗೆ ಸಿಗುವ ‘ರಜಾ ಸೌಲಭ್ಯ’ಗಳು
ಬೆಂಗಳೂರು ಜನತೆ ಗಮನಕ್ಕೆ: ಸೆ.21ರಂದು ಈ ಮತ್ತಷ್ಟು ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut