ಬೆಂಗಳೂರು: ಜನರ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡಿ ಎಂದು ಜನರು ಮತ ನೀಡಿ ಗೆಲ್ಲಿಸಿ ಕಳುಹಿಸಿದರೆ, ಲಜ್ಜೆಗೆಟ್ಟು ನಡೆದುಕೊಂಡಿರುವ ಶಾಸಕ ಮುನಿರತ್ನ ಅವರು ಜನಪ್ರತಿನಿಧಿಯಾಗಲು ಅನರ್ಹರು ಎಂಬುದಾಗಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್ ಕಿಡಿಕಾರಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಜನರ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡಿ ಎಂದು ಜನರು ಮತ ನೀಡಿ ಗೆಲ್ಲಿಸಿ ಕಳುಹಿಸಿದರೆ, ಲಜ್ಜೆಗೆಟ್ಟು ನಡೆದುಕೊಂಡಿರುವ ಶಾಸಕ ಮುನಿರತ್ನ ಅವರು ಜನಪ್ರತಿನಿಧಿಯಾಗಲು ಅನರ್ಹರು ಎಂಬುದಾಗಿ ಹೇಳಿದರು.
ಬಿಜೆಪಿಯ ಆಂತರ್ಯದ ಮಾತುಗಳನ್ನು ಮುನಿರತ್ನ ಹೊರಗೆ ಹಾಕಿದ್ದಾರೆ. ಪರಿಶಿಷ್ಟರು ಒಕ್ಕಲಿಗರು ಅದರಲ್ಲೂ ಮಹಿಳೆಯರ ಬಗ್ಗೆ ಅತ್ಯಂತ ಹೀನವಾಗಿ ಮಾತನಾಡಿರುವ ಅವರ ನಡೆ ಖಂಡನೀಯ. ಮುನಿರತ್ನ ಅವರ ಕೆಟ್ಟ ಮಾತುಗಳನ್ನು ಯಾರು ಕೂಡ ಸಹಿಸಲಾಗುವುದಿಲ್ಲ ಎಂದರು.
ಹೆಚ್ಐವಿ ಸೋಂಕಿತರ ರಕ್ತವನ್ನು ತೆಗೆದುಕೊಂಡು ರಾಜಕಾರಣಿಗಳಿಗೆ ನೀಡಿ ಸೋಂಕನ್ನು ಹರಡುವಂತಹ ಹೀನ ಕೃತ್ಯವನ್ನು ಆ ವ್ಯಕ್ತಿ ಮಾಡಲು ತೊಡಗುತ್ತಾನೆ ಎಂದರೆ ಪ್ರಪಂಚದಲ್ಲಿ ಯಾರೂ ಸಹ ಇಂತಹ ಕೀಳು ಮಟ್ಟಕ್ಕೆ ಇಳಿದಿರುವ ಉದಾಹರಣೆ ನಮ್ಮ ಮುಂದಿಲ್ಲ. ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವ ವ್ಯಕ್ತಿಯನ್ನು ಬಿಜೆಪಿ ಬೆಂಬಲಿಸುತ್ತಿದೆ. ಆರ್. ಅಶೋಕ್, ಪ್ರಹ್ಲಾದ್ ಜೋಷಿ ಅಂತವರು ಸಹ ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅವರೆಲ್ಲಾ ರಾಜಕೀಯ ಅಧಪತನಕ್ಕೆ ಇಳಿದಿದ್ದಾರೆ ಎಂದರು.
ಇಂತಹ ರಾಕ್ಷಸರು, ವಿಕೃತ ಕಾಮಿಗಳ ವಿರುದ್ಧ ಸೂಕ್ತವಾದ ತನಿಖೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಶಾ ಅವರು ಸಾರ್ವಜನಿಕವಾಗಿ ಮಾತನಾಡಬೇಕು. ಮುನಿರತ್ನ ಅವರ ಮೇಲೆ ಇರುವ ಪ್ರಕಾರಣವನ್ನು ಸುಮೋಟೋ ಪ್ರಕರಣವನ್ನಾಗಿ ಪರಿವರ್ತಿಸಬೇಕು. ಯಾವುದೇ ಕಾರಣಕ್ಕೂ ಇವರನ್ನು ಹೊರಗೆ ಬಿಡಬಾರದು. ಯಾರು ಊಟ ಹಾಕುತ್ತಾರೋ ಅವರಿಗೆ ಕಚ್ಚುವಂತಹ ಮನಸ್ಥಿತಿಯ ವ್ಯಕ್ತಿ ಮುನಿರತ್ನ. ಈತ ಒಬ್ಬ ಗೂಂಡಾ ರಾಜಕಾರಣಿ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಮುನಿರತ್ನ ಅವರ ಮೇಲೆ ಹನಿಟ್ರ್ಯಾಪ್ ಅಂತಹ ಅನೇಕ ಘೋರ ಕೃತ್ಯಗಳು ಮಾಡಿದ ಆರೋಪಗಳಿವೆ. ಈತನ ಮೇಲೆ ಭ್ರಷ್ಟಾಚಾರದ ಆರೋಪಗಳು ಸಹ ಇವೆ. ಈತನ ಮೇಲೆ ಅನೇಕ ಕಡೆ ಎಫ್ಐಆರ್ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಪ್ರಕರಣಗಳು ಹೊರಗೆ ಬರುತ್ತವೆ ಎಂದರು.
ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲೆಲ್ಲಿ ಅಕ್ರಮಗಳನ್ನು ಎಸಗಿದ್ದಾರೆ ಅವೆಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿ, ಸೂಕ್ತ ತನಿಖೆ ನಡೆಸಿ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.
BREAKING: ರಾಜ್ಯದ 1 ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆಗೆ ಮುಹೂರ್ತ ಫಿಕ್ಸ್: ಅ.21ರಂದು ಮತದಾನ
ಮುಂದುವರಿದ ಟೆಕ್ ಕಂಪನಿಗಳ ಉದ್ಯೋಗ ಕಡಿತ: ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ CISCO | Lay offs