ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಅಡುಗೆ ಎಣ್ಣೆದರವನ್ನು ಹೆಚ್ಚಳ ಮಾಡಲಾಗುತ್ತಿದೆ. ರೂ.14 ರಿಂದ 16ರವರೆಗೆ ಅಡುಗೆ ಎಣ್ಣೆದರ ಹೆಚ್ಚಳವಾಗುತ್ತಿದ್ದು, ಬಿಗ್ ಶಾಕ್ ನೀಡಲಾಗಿದೆ.
ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿ ಶಾಕ್ ನೀಡಲಾಗಿತ್ತು. ಮುಂದೆ ನಂದಿನಿ ಹಾಲಿನ ದರವನ್ನು ರೂ.5ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ. ಸ್ವತಹ ಸಿಎಂ ಸಿದ್ಧರಾಮಯ್ಯ ಅವರು ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡುತ್ತಿದ್ದೇವೆ. ದರ ಹೆಚ್ಚಳದ ಲಾಭಾಂಶವನ್ನು ರೈತರಿಗೆ ನೀಡಲಾಗುತ್ತದೆ ಎಂಬುದಾಗಿ ಘೋಷಿಸಿದ್ದರು.
ಇದೀಗ ಈ ಬೆನ್ನಲ್ಲೇ ಜನಸಾಮಾನ್ಯರಿಗೆ ಶಾಕ್ ಎನ್ನುವಂತೆ ಅಡುಗೆ ಎಣ್ಣೆ ದರಗಳು ಹೆಚ್ಚಾಗುತ್ತಿವೆ. ಹಾಲಿ ಇರುವಂತ ಅಡುಗೆ ಎಣ್ಣೆ ದರದಲ್ಲಿ ರೂ.14 ರಿಂದ 16ರವರೆಗೆ ಹೆಚ್ಚಳ ಸಾಧ್ಯತೆ ಇದೆ. ಹೀಗಾಗಿ ದಿನಕ್ಕೊಂದು ಅಗತ್ಯ ವಸ್ತುಗಳ ಬೆಲೆ ಹೆಚ್ಚಾದ್ರೆ ಜನಸಾಮಾನ್ಯರು ಬದುಕೋದು ಹೇಗೆ ಎನ್ನುವುದಾಗಿ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
BIG NEWS: ಬೆಂಗಳೂರಲ್ಲಿ ಬಿಎಂಟಿಯಿಂದ 1,027 ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ | BMTC Electric Bus
ಮುಂದುವರಿದ ಟೆಕ್ ಕಂಪನಿಗಳ ಉದ್ಯೋಗ ಕಡಿತ: ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ CISCO | Lay offs