ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದಂತ ಆರೋಪ ಸಂಬಂಧ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ 7 ಮಂದಿ ವಿರುದ್ಧ ದೂರು ದಾಖಲಾಗಿದೆ. ಈ ಮೂಲಕ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.
ಈ ಕುರಿತಂತೆ ಮಹಿಳೆಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಗೆ ತೆರಳಿ ಶಾಸಕ ಮುನಿರತ್ನ ಸೇರಿದಂತೆ 7 ಮಂದಿ ವಿರುದ್ಧ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಸ್ಥಳ ಮಹಜರು ಕೂಡ ನಡೆಸುತ್ತಿದ್ದಾರೆ.
ದೂರಿನಲ್ಲಿ ಏನಿದೆ?
ಶಾಸಕ ಮುನಿರತ್ನ ಅವರ ಕಚೇರಿ ನಾನು ಹೋದಾಗ ಅವರು ಪರಿಚಯ ಆಗಿದ್ದರು. ಆ ಬಳಿಕ ನನ್ನ ನಂಬರ್ ಪಡೆದಿದ್ದಂತ ಅವರು ನಾನು ಪರಸ್ಪರ ವಾಟ್ಸ್ ಆಪ್ ಮಾಡುತ್ತಿದ್ದವು. ಗುಡ್ ಮಾರ್ನಿಂಗ್, ಗುಡ್ ನೈಟ್ ಸೇರಿದಂತೆ ಎಲ್ಲಾ ವಿಷಯಗಳನ್ನು ಮಾತನಾಡುತ್ತಿದ್ದವೆ.
ಒಮ್ಮೆ ನಾನು ಸ್ನಾನಕ್ಕೆ ಹೋಗಿದ್ದಂತ ಸಂದರ್ಭದಲ್ಲಿ ಹಲವು ಬಾರಿ ವೀಡಿಯೋ ಕಾಲ್ ಮಾಡಿದ್ದರು. ನಾನು ಬಂದು ನೋಡಿ, ಪುನಹ ಮಾಡಿದಾಗ ನಾನು ಸ್ನಾನಕ್ಕೆ ಹೋಗಿದ್ದಂತ ವಿಷಯ ತಿಳಿಸಿದೆ. ನೀನು ಬೆತ್ತಲೆಗೊಂಡು ವೀಡಿಯೋ ಕಾಲ್ ಮಾಡಲು ತಿಳಿಸಿದರು. ಇದಕ್ಕೆ ನಾನು ಒಪ್ಪದಿದ್ದಾಗ, ನನ್ನನ್ನು ಕಾಣು ಅಂತ ಹೇಳಿದರು.
ಅವರು ಹೇಳಿದಂತ ಸ್ಥಳಕ್ಕೆ ಹೋದಾಗ ಅವರ ಕಟ್ಟಡದ ಎರಡನೇ ಮಹಡಿಗೆ ಕರೆದೊಯ್ದು ನನ್ನ ತಬ್ಬಿಕೊಳ್ಳಬೇಕು ಎಂದರು. ಅದಕ್ಕೆ ಆಕ್ಷೇಪಿಸಿದೆ. ಕಿರುಚಿಕೊಳ್ಳುವುದಾಗಿ ಹೇಳಿದೆ. ಆದರೇ ನಾನು ಶಾಸಕ ನನಗೆ ಜನಬೆಂಬಲವಿದೆ. ನಿನ್ನ ವಿರುದ್ಧವೇ ಕೇಸ್ ದಾಖಲಿಸುವೆ. ರಾಜಕೀಯಕ್ಕೆ ಬರಬೇಕು ಅಂದ್ರೆ ಇದೆಲ್ಲ ಕಾಮನ್ ಎಂಬುದಾಗಿ ಹೇಳಿ ಬೆದರಿಸಿದರು.
ಈ ಬಳಿಕ ಶಾಸಕ ಮುನಿರತ್ನ ನನ್ನನ್ನು ತಬ್ಬಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂಬುದಾಗಿ ದೂರು ನೀಡಲಾಗಿದೆ. ಈ ದೂರು ಆದರಿಸಿ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುನಿರತ್ನ ಎ1 ಆರೋಪಿಯಾದ್ರೇ, ಎ2 ವಿಜಯ್ ಕುಮಾರ್, ಎ3 ಸುಧಾಕರ್, ಎ4 ಕಿರಣ್ ಹಾಗೂ ಎ.5 ಲೋಹಿತ್, ಎ6 ಮಂಜುನಾಥ್ ಎಂಬುವರಾಗಿದ್ದಾರೆ.
‘ಖಲಿಸ್ತಾನಿ ಭಯೋತ್ಪಾದಕ’ ಪನ್ನುನಿ ಹತ್ಯೆ ಯತ್ನ: ಭಾರತ ಸರ್ಕಾರಕ್ಕೆ ಸಮನ್ಸ್ ಜಾರಿ ಮಾಡಿದ ಅಮೆರಿಕ ಕೋರ್ಟ್