ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸುವಂತ ಘಟನೆ ಎನ್ನುವಂತೆ ವೃದ್ಧನೊಬ್ಬನನ್ನು ಪ್ರೀತಿಸುವುದಾಗಿ ಕರೆಸಿಕೊಂಡ ಯುವತಿಯೊಬ್ಬಳು, ಆತನ ಸ್ನೇಹಿತನನ್ನು ಕರೆಸಿ ಚಾಕುವಿನಿಂದ ಇರಿಸಿ ಕೊಲೆಗೆ ಯತ್ನಿಸಿದಂತ ಘಟನೆ ಬಿಟಿಎಂ ಲೇಔಟ್ ನ ಪಾರ್ಕ್ ಒಂದರಲ್ಲಿ ನಡೆದಿದೆ.
ಜಯನಗರದಲ್ಲಿ ಬಟ್ಟೆ ಅಂಗಡಿಯನ್ನು ಇಟ್ಟುಕೊಂಡು ಹಿತೇಂದ್ರ ಎಂಬ ವೃದ್ಧ ವ್ಯಾಪಾರ ನಡೆಸುತ್ತಿದ್ದರು. ಈ ಅಂಗಡಿಯಲ್ಲಿ ಕೆಲಸಕ್ಕೆ ಇದ್ದಂತ ಯುವತಿಯೊಬ್ಬಳು 2-3 ತಿಂಗಳು ಕೆಲಸ ಮಾಡಿ ಆ ಬಳಿಕ ಕೆಲಸ ಬಿಟ್ಟಿದ್ದಳು.
ಕಳೆದ ಸೆ.14ರಂದು ಯುವತಿಗೆ ಕರೆ ಮಾಡಿದ್ದಂತ ವೃದ್ಧ ಹಿತೇಂದ್ರ ಮಾತನಾಡುವುದಿದೆ, ಪಾರ್ಕ್ ಗೆ ಬರುವಂತೆ ತಿಳಿಸಿದ್ದನು. ಅದಕ್ಕೆ ಒಪ್ಪಿಕೊಂಡು ಯುವತಿ ಬಿಟಿಎಂ ಲೇಔಟ್ ನಲ್ಲಿರುವಂತ ಪಾರ್ಕ್ ಒಂದಕ್ಕೆ ಬಂದಿದ್ದರು.
ಪಾರ್ಕ್ ನಲ್ಲಿ ವೃದ್ಧ ಹಿತೇಂದ್ರ ಯುವತಿಗೆ ತನ್ನ ಪ್ರೀತಿಯ ನಿವೇಧನೆಯನ್ನು ತಿಳಿಸಿದ್ದನು. ಇದಕ್ಕೆ ಯುವತಿ ಕೂಡ ಒಪ್ಪಿಗೆ ಸೂಚಿಸಿದ್ದಳಂತೆ. ಈ ಬಳಿಕ ಮಾರನೇ ದಿನ ಅಂಕಲ್ ಮಾತನಾಡಬೇಕು ಬನ್ನಿ ಅಂತ ಹಿತೇಂದ್ರನನ್ನು ಪಾರ್ಕ್ ಗೆ ಯುವತಿ ಕರೆಸಿಕೊಂಡಿದ್ದಾಳೆ.
ಬಿಟಿಎಂ ಲೇಔಟ್ ನಲ್ಲಿನ ಪಾರ್ಕ್ ಗೆ ಬಂದಂತ ವೃದ್ಧ ಹಿತೇಂದ್ರ ಮೇಲೆ ಯುವತಿಯ ಸ್ನೇಹಿತ ಸಿದ್ಧು ಎಂಬುವರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅವರು ಸಮೀಪದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ಮೇಲೆ ಉದ್ದೇಶಪೂರ್ವಕವಾಗಿಯೇ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಎಂಬುದಾಗಿ ವೃದ್ಧ ಹಿತೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆದರಿಸಿ ಸಿದ್ದು ಹಾಗೂ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
LCA ತೇಜಸ್ ಯುದ್ಧ ವಿಮಾನದ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ‘ಮೋಹನಾ ಸಿಂಗ್’ ಪಾತ್ರ
ಮಂಕಿಪಾಕ್ಸ್ (Mpox) ಮತ್ತು ವೈರಲ್ ಸಾಂಕ್ರಾಮಿಕ ರೋಗಗಳ ಬಗ್ಗೆ ಆಯುರ್ವೇದ ಏನು ಹೇಳುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ
Mental Health: ಉತ್ತಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಈ ಐದು ಸಲಹೆ ಪಾಲಿಸಿ