ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮತ್ತೊಂದು ದಾಖಲೆ ಎನ್ನುವಂತೆ ಒಂದೇ ದಿನ ಬರೋಬ್ಬರಿ 503 ಅರ್ಜಿಗಳನ್ನು ವಿಚಾರಣೆ ನಡೆಸಿದ್ದಾರೆ.
ಹೌದು ಕ್ಷಿಪ್ರಗತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಹೆಸರುವಾಸಿಯಾಗಿರುವಂತ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಮಂಗಳವಾರದಂದು ಕಲಪದಲ್ಲಿ ಬರೋಬ್ಬರಿ 503 ಅರ್ಜಿಗಳನ್ನು ವಿಚಾರಣೆ ನಡೆಸಿದರು.
ಬೆಂಗಳೂರಿನ ಪ್ರಧಾನ ಪೀಠದಲ್ಲಿನ 17ನೇ ಕೋರ್ಟ್ ಹಾಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಮಂಗಳವಾರದಂದು ಕಲಾಪದಲ್ಲಿ ಪಟ್ಟಿ ಒಟ್ಟು 503 ಕ್ರಿಮಿನಲ್ ಹಾಗೂ ರಿಟ್ ಅರ್ಜಿ ವಿಚಾರಣೆಗೆ ನಿಗದಿಯಾಗಿದ್ದವು. ದಿನದ ಕಲಾಪದ ಅವಧಿ ಪೂರ್ಣಗೊಳ್ಳುವುದಕ್ಕೆ 45 ನಿಮಿಷ ಮುಂಚಿತವಾಗೇ ಅಷ್ಟೂ ಅರ್ಜಿಗಳನ್ನು ವಿಚಾರಣೆ ನಡೆಸಿ ಮುಕ್ತಾಗೊಳಿಸಿದರು.
ಇನ್ನೂ 187 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದರೇ, 125 ಪ್ರಕರಣಗಳಲ್ಲಿ ಮಧ್ಯಂತರ ಆದೇಶ ನೀಡಲಾಗಿದೆ. ಈ ಹಿಂದೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಒಂದೇ ದಿನ ಕಲಾಪದಲ್ಲಿ 600ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿ ದಾಖಲೆ ಬರೆದಿದ್ದರು.
Crime News: ಟೊಮೆಟೋ ಬೆಳೆನಷ್ಟದ ಸಾಲ ತೀರಿಸಲು ಕಳ್ಳತನಕ್ಕಿಳಿದ ಆರೋಪಿ ಅರೆಸ್ಟ್
ವಾಲ್ಮಿಕಿ ಹಗರಣದ ಪ್ರಮುಖ ಆರೋಪಿ, ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ‘ನೆಕ್ಕಂಟಿ ನಾಗರಾಜ್’ಗೆ ಜಾಮೀನು