ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಸೋಮವಾರದಂದು ವಿವಿಧೆಡೆ ಪ್ರತಿಷ್ಠಾಪಿಸಿದ್ದಂತ ಗಣೇಶ ಮೂರ್ತಿಯನ್ನು ಮೆರಣಿಗೆಯ ಮೂಲಕ ಕೊಂಡೊಯ್ದು ವಿಸರ್ಜಿಸಲಾಯಿತು. ಇದೇ ವೇಳೆ ಸಾಗರದ ವಿನೋಬಾ ಯುವಕ ಸಂಘದ 62ನೇ ಗಣೇಶೋತ್ಸವ ಸಮಾರೋಪ ಸಮಾರಂಭದ ವೇಳೆ ನಗರಸಭಾ ಸದಸ್ಯ ವಿ.ಶಂಕರ್ ಅವರಿಗೆ ಸನ್ಮಾನಿಸಲಾಯಿತು.
ಸಾಗರದ ವಿನೋಬಾ ಯುವಕ ಸಂಘ, ವಿನೋಬಾ ಕಲಾವಿದರು (ರಿ.) ಇವರ 62ನೇ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ನಗರಸಭಾ ಸದಸ್ಯರಾದ ವಿ. ಶಂಕರ್, ಕರಾಟೆ ಪಟು ಕೀರ್ತನಾ ಎ ಗೌಡರ್, ಶಿಕ್ಷಕರಾದ ಎಂ. ಸತ್ಯ ನಾರಾಯಣ ಸೇರಿದಂತೆ, ಹಿರಿಯ ಸದಸ್ಯರಾದ ಕೃಷ್ಣ ಮೂರ್ತಿ ಎನ್ ಶೇಟ್, ಹಿರಿಯ ಸದಸ್ಯರಾದ ಜಗನ್ನಾಥ ಎನ್ ಶೇಟ್ ರವರನ್ನು ಸನ್ಮಾನಿಸಲಾಯಿತು.
ನಿತ್ಯಾನಂದ ಶೆಟ್ಟಿ, ರವಿ ಉಡುಪ, ಉಮೇಶ್ ಚೌಟಗಿ, ಕೆ. ಶ್ರೀಧರ, ಗಣಪತಿ ಅಪ್ಪಾಚಾರ್, ವಿನಾಯಕ ಗುಡಿಗಾರ್, ಜನಾರ್ದನ ಆಚಾರಿ, ಎಂ. ಆರ್. ಮಹೇಶ್ ಮೊದಲಾದ ವರುಷ ಹಾಜರಿದ್ದರು.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಸ್ವಚ್ಛತಾ ಪಖ್ವಾಡಾ (ಪಾಕ್ಷಿಕ) ಅಭಿಯಾನ ಆರಂಭ