ಕಲಬುರ್ಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ, ಕಲಬುರಗಿಯಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರು ಹಾಗೂ ಅಧ್ಯಕ್ಷರು ಕ.ಕ.ರಾ.ಸಾ.ನಿಗಮ ರಾಮಲಿಂಗರೆಡ್ಡಿ ರವರು ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರವರಾದ ಎಂ.ರಾಚಪ್ಪರವರು ನಿಗಮದ ಆಂತರಿಕ ಗುಂಪು ವಿಮಾ ಯೋಜನೆ ಅಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನಗೊಂಡಿರುವ ಬೀದರ ವಿಭಾಗ-05, ವಿಜಯಪೂರ ವಿಭಾಗ-04, ಕಲಬುರಗಿ ವಿಭಾಗ-02 ಹಾಗೂ ರಾಯಚೂ ವಿಭಾಗ-03 ಒಟ್ಟು 14 ಮೃತ ನೌಕರರ ನಾಮನಿರ್ದೇಶಿತರಿಗೆ ತಲಾ ರೂ.10.00ಲಕ್ಷಗಳಂತೆ ಒಟ್ಟು 14 ಜನರಿಗೆ ರೂ.1.40 ಕೋಟಿಗಳ ಪರಿಹಾರ ಮೊತ್ತದ ಧನಾದೇಶಗಳನ್ನು ವಿತರಿಸಿದರು.
ಸದರಿ ಧನಾದೇಶಗಳನ್ನು ವಿತರಿಸಿ ಮಾತಾನಾಡಿದ ಸನ್ಮಾನ್ಯ ಸಾರಿಗೆ ಹಾಗೂ ಮುಜಾರಾಯಿ ಸಚಿವರು ಕ.ಕ.ರ.ಸಾ.ನಿಗಮವು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಂತರಿಕ ಗುಂಪು ವಿಮ ಯೋಜನೆ ಅಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನಗೊಂಡ ಸಿಬ್ಬಂದಿಯವರ ನಾಮನಿರ್ದೇಶಿತರಿಗೆ ರೂ.10.00 ಲಕ್ಷ ಪರಿಹಾರ ವಿತರಿಸುವ ಯೋಜನೆಯನ್ನು ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಹಾಗೂ ಪರಿಹಾರ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಉತ್ತಮ ಭವಿಷ್ಯಕ್ಕಾಗಿ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಕ.ಕ.ರ.ಸಾ ನಿಗಮದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ನಿಗಮದ ಆಂತರಿಕ ಗುಂಪು ವಿಮಾ ಯೋಜನೆಯಡಿ ಪ್ರತಿ ಸದಸ್ಯ ನೌಕರರಿಂದ ರೂ.200/- ಮತ್ತು ಆಡಳಿತ ವರ್ಗದಿಂದ ಪ್ರತಿ ನೌಕರರ ಪರವಾಗಿ ರೂ.210/- ಸೇರಿಸಿ, ಸೇವಾ ಅವಧಿಯಲ್ಲಿ ನಿಧನಗೊಂಡ ನೌಕರರ ನಾಮನಿರ್ದೇಶಿತರಿಗೆ ಪರಿಹಾರ ಮೊತ್ತ ರೂ.10.00 ಲಕ್ಷದೊಂದಿಗೆ ಇತರೇ ಅಂತಿಮ ಅರ್ಹ ಅಭ್ಯರ್ಥನ ಸೌಲಭ್ಯಗಳನ್ನು ನಾಮನಿರ್ದೇಶಿತರಿಗೆ ವಿತರಿಸಲಾಗುವುದೆಂದು ತಿಳಿಸಿದರು.
ಸದರಿ ಚೆಕ್‌ಗಳನ್ನು ಸ್ವೀಕರಿಸಿದ ಫಲಾನುಭವಿಗಳು ಮಾತಾನಾಡಿ ಆಂತರಿಕ ಗುಂಪು ವಿಮಾ ಯೋಜನೆಯ ರೂ.10.00 ಲಕ್ಷಗಳನ್ನು ವಿತರಿಸಿರುವುದಕ್ಕೆ ಆರ್ಥಿಕವಾಗಿ ನಮ್ಮ ಕುಟುಂಬಗಳಿಗೆ ಬಹಳ ಅನುಕೂಲವಾಗಿದೆ ಇದಕ್ಕೆ ಕಾರಣಕರ್ತರಾದ ಮಾನ್ಯ ಸಾರಿಗೆ ಸಚಿವರಿಗೆ ಹಾಗೂ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಹಬ್ಬಂದಿಯವರು ಉಪಸ್ಥಿತಿರಿದ್ದರು. ಕ.ಕ.ರ.ಸಾ.ನಿಗಮದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕೋಲ್ಕತಾ ನೂತನ ಪೊಲೀಸ್ ಆಯುಕ್ತರಾಗಿ ‘IPS ಅಧಿಕಾರಿ ಮನೋಜ್ ವರ್ಮಾ’ ನೇಮಕ | Manoj Kumar Verma IPS
BREAKING : ದೇಶಾದ್ಯಂತ ‘ಬುಲ್ಡೋಜರ್ ಕಾರ್ಯಚರಣೆ’ಗೆ ‘ಸುಪ್ರೀಂಕೋರ್ಟ್’ ತಡೆ