ಫಿರೋಜಾಬಾದ್ : ಉತ್ತರ ಪ್ರದೇಶದ ಫಿರೋಜಾಬಾದ್‌ನ ಪಟಾಕಿ ಕಾರ್ಖಾನೆಯಲ್ಲಿ ತಡರಾತ್ರಿ ರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಅಪಘಾತದಲ್ಲಿ ಈವರೆಗೆ 4 ಮಂದಿ ಸಾವನ್ನಪ್ಪಿದ್ದು, 6 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಫೋಟದ ಸದ್ದು 15 ಕಿಲೋಮೀಟರ್ ದೂರದವರೆಗೂ ಕೇಳಿಸಿತು. ಸ್ಫೋಟದಿಂದಾಗಿ ಅಕ್ಕಪಕ್ಕದ ಹಲವು ಮನೆಗಳೂ ಕುಸಿದಿವೆ. ಎಸ್‌ಎಸ್‌ಪಿ ಸೌರಭ್ ದೀಕ್ಷಿತ್ ಅಪಘಾತವನ್ನು ಖಚಿತಪಡಿಸಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜೆಸಿಬಿ ಸಹಾಯದಿಂದ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಖಾನೆಯ ಮಾಲೀಕರು ತಲೆಮರೆಸಿಕೊಂಡಿದ್ದು, ಕಾರ್ಖಾನೆ ಅಕ್ರಮವಾಗಿ ನಡೆಯುತ್ತಿತ್ತು.
#WATCH | Deepak Kumar IG Agra Range says, " In Shikohabad PS area, firecrackers were stored at a house and a blast occurred there. Due to the impact of the blast, the roof of a nearby house collapsed. Police took out 10 people from the debris…6 people are undergoing treatment… https://t.co/hQ2S271Sto pic.twitter.com/1qGnxhIegR
— ANI (@ANI) September 16, 2024
ಶಿಕೋಹಾಬಾದ್ ಪಿಎಸ್ ವ್ಯಾಪ್ತಿಯ ಮನೆಯೊಂದರಲ್ಲಿ ಪಟಾಕಿ ತಯಾರಿಸಲಾಗಿದ್ದು, ಮತ್ತೊಂದು ಮನೆಯಲ್ಲಿ ಗೋದಾಮು ನಿರ್ಮಿಸಲಾಗಿದ್ದು, ಹಠಾತ್ ಸ್ಫೋಟ ಸಂಭವಿಸಿದೆ ಎಂದು ಆಗ್ರಾ ರೇಂಜ್ ಐಜಿ ದೀಪಕ್ ಕುಮಾರ್ ತಿಳಿಸಿದ್ದಾರೆ. ಸ್ಫೋಟದ ರಭಸಕ್ಕೆ ಮನೆಯೊಂದರ ಮೇಲ್ಛಾವಣಿ ಕುಸಿದಿದೆ. ಸ್ಫೋಟ ಸಂಭವಿಸಿದ ಮನೆ ಸುಟ್ಟು ಬೂದಿಯಾಗಿದೆ. ಮೇಲ್ಛಾವಣಿ ಕುಸಿತದಿಂದಾಗಿ, ಸುಮಾರು 10 ಜನರು ಅವಶೇಷಗಳಡಿಯಲ್ಲಿ ಹೂತುಹೋಗಿದ್ದರು, ಅವರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಲಾಯಿತು, ಆದರೆ ಅಷ್ಟರಲ್ಲಿ 4 ಜನರು ಸಾವನ್ನಪ್ಪಿದ್ದರು. ಮೃತರನ್ನು ಗೋದಾಮಿನ ಕಾವಲುಗಾರನ ಪತ್ನಿ ಮೀರಾದೇವಿ, 20 ವರ್ಷದ ಮಗ ಅಮನ್, 18 ವರ್ಷದ ಮಗ ಗೌತಮ್ ಮತ್ತು 3 ವರ್ಷದ ಬಾಲಕಿ ಇಚ್ಛಾ ಎಂದು ಗುರುತಿಸಲಾಗಿದೆ.