ರಾಯಚೂರು: ಜಿಲ್ಲೆಯಲ್ಲಿ ಹಳೆಯ ವೈಷಮ್ಯದ ಹಿನ್ನಲೆಯಲ್ಲಿ ಅಂತ್ಯಸಂಸ್ಕಾರದ ವೇಳೆಯಲ್ಲೇ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಕೈಕೈ ಮಿಲಾಯಿಸಿ ಎರಡು ಗುಂಪುಗಳು ಬಡಿದಾಡಿಕೊಂಡ ಪರಿಣಾಮ, ಓರ್ವ ಸಾವನ್ನಪ್ಪಿ, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಯಚೂರು ತಾಲ್ಲೂಕಿನ ಮಿರ್ಜಾಪುರ ಗ್ರಾಮದಲ್ಲಿ ಹಳೆಯ ವೈಷಮ್ಯದ ಹಿನ್ನಲೆಯಲ್ಲಿ 2 ಗುಂಪುಗಳ ನಡುವೆ ಗಲಾಟೆಯಾಗಿದೆ. ಭಾನುವಾರ ನಡೆದಂತ ಗಲಾಟೆಯಲ್ಲಿ ಭೀಮೇಶ ನಾಯಕ(38) ಎಂಬುವರು ಸಾವನ್ನಪ್ಪಿದ್ದಾರೆ.
ರಾಮಲಮ್ಮ, ಅಲಾರಿ ನಾಯಕ್, ದೋಳಯ್ಯ ಸೇರಿದಂತೆ 8 ಮಂದಿ ಹೊಡೆದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಂದಹಾಗೇ ಮಿರ್ಜಾಪುರ ಗ್ರಾಮದ ಕರಿಯಮ್ಮ ಎಂಬುವರು ಸಾವನ್ನಪ್ಪಿದ್ದರು. ಅವರ ಪಾರ್ಥೀವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ ಆಗಮಿಸಿದ್ದ ದೊಳಯ್ಯ ಹಾಗೂ ಗೋವಿಂದ ಎಂಬುವರು ಕುಟುಂಬಸ್ಥರ ಮಧ್ಯೆ ಜಗಳವಾಗಿದೆ. ಇದು ಗಲಾಟೆಗೆ ತಿರುಗಿ, ಕಟ್ಟಿಗೆ, ಕುಡುಗೋಲಿನಿಂದ ಹೊಡೆದಾಡಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಶೋಷಣೆ: ಇಂದು ತನಿಖೆಗೆ ಸಮಿತಿ ರಚನೆ ಸಂಬಂಧ ಮಹತ್ವದ ಸಭೆ
ಮದುವೆಯಾದ ’40 ದಿನ’ಗಳಲ್ಲೇ ವಿಚ್ಛೇದನ ಕೋರಿದ ಮಹಿಳೆ: ಕಾರಣ ಏನು ಗೊತ್ತಾ?