ಹುಬ್ಬಳ್ಳಿ: ಪುಣೆ-ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್ ನಿಂದ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ಇದು ಕರ್ನಾಟಕದ ಪಾಲಿನ 9ನೇ ವಂದೇ ಭಾರತ್ ರೈಲು ಆಗಿದ್ದು, ವಾರಕ್ಕೆ 3 ದಿನ ಸಂಚಾರ ನಡೆಸಲಿದೆ.
ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿ ಮತ್ತು ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಇಂದು ಮೋದಿ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್.18ರಿಂದ ವಾರಕ್ಕೆ ಮೂರು ದಿನಗಳು ಈ ರೈಲು ಸಂಚರಿಸಲಿದೆ.
ಪ್ರತಿ ಬುಧವಾರ, ಶುಕ್ರವಾರ ಮತ್ತು ಭಾನುವಾರ ಎಸ್ ಎಸ್ ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆಗೆ ಹೊರಟು 5.15ಕ್ಕೆ ಧಾರವಾಡ, 6.55ಕ್ಕೆ ಬೆಳಗಾವಿ, 9.15ಕ್ಕೆ ಮೀರಜ್, 9.30ಕ್ಕೆ ಸಾಂಗ್ಲಿ, 10.35ಕ್ಕೆ ಸತಾರಾ ಹಾಗೂ 1.30ಕ್ಕೆ ಪುಣೆಯನ್ನು ತಲುಪಲಿದೆ.
ಹೀಗಿದೆ ಟಿಕೆಟ್ ದರ
ಎಕ್ಸಿಕ್ಯೂಟಿವ್ ಕ್ಲಾಸ್ ಗೆ ರೂ.2,780 ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಕ್ಯಾಟರಿಂಗ್ ಇಲ್ಲದೇ ಚೇರ್ ಕಾರ್ ಗೆ ರೂ.1,185, ಎಕ್ಸಿಕ್ಯೂಟಿವ್ ಕ್ಲಾಸ್ ಗೆ ರೂ.2,385 ದರವನ್ನು ನಿಗದಿ ಪಡಿಸಲಾಗಿದೆ.
BIG NEWS: ‘PSI ಪರಶುರಾಂ’ ಸಾವಿಗೆ ಹೃದಯಾಘಾತ ಕಾರಣ: ‘ಮರಣೋತ್ತರ ಪರೀಕ್ಷೆ ವರದಿ’ಯಲ್ಲಿ ಬಹಿರಂಗ