ಗಾಜಿಯಾಬಾದ್ : ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲಿ ಜ್ಯೂಸ್ ಮಾರುವವನು ಜನರಿಗೆ ಮೂತ್ರ ಮಿಶ್ರಿತ ಜ್ಯೂಸ್ ಕುಡಿಯುವಂತೆ ಮಾಡುತ್ತಿದ್ದ. ಪ್ರಸ್ತುತ, ದೂರಿನ ನಂತರ, ಆರೋಪಿ ಜ್ಯೂಸ್ ಮಾರಾಟಗಾರ ಮತ್ತು ಅವನ 15 ವರ್ಷದ ಮಗನನ್ನು ಬಂಧಿಸಲಾಗಿದೆ.
ಈ ಸಂಬಂಧ ಮಾಹಿತಿ ನೀಡಿದ ಪೊಲೀಸರು, ಜ್ಯೂಸ್ ಮಾರಾಟಗಾರನನ್ನು ಶುಕ್ರವಾರ ಬಂಧಿಸಲಾಗಿದ್ದು, ಆತನ 15 ವರ್ಷದ ಮಗನನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣವು ಗ್ರಾಹಕರಿಗೆ ಹಣ್ಣಿನ ರಸವನ್ನು ಮೂತ್ರದೊಂದಿಗೆ ಬೆರೆಸಿದ ಆರೋಪಕ್ಕೆ ಸಂಬಂಧಿಸಿದೆ. ಜ್ಯೂಸ್ ಮಾರಾಟಗಾರರು ಮಾನವ ಮೂತ್ರದೊಂದಿಗೆ ಹಣ್ಣಿನ ರಸವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ ಎಂದು ಜನರು ದೂರಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಅಮೀರ್ ಎಂದು ಗುರುತಿಸಲಾಗಿದೆ ಎಂದು ಎಸಿಪಿ ಅಂಕುರ್ ವಿಹಾರ್ ಭಾಸ್ಕರ್ ವರ್ಮಾ ಶುಕ್ರವಾರ ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆತನ ಜ್ಯೂಸ್ ಸ್ಟಾಲ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಮೂತ್ರ ತುಂಬಿದ ಪ್ಲಾಸ್ಟಿಕ್ ಡಬ್ಬವೂ ಪತ್ತೆಯಾಗಿದೆ. ಮೂತ್ರ ತುಂಬಿದ ಕಂಟೈನರ್ ಬಗ್ಗೆ ಮಾಲೀಕರನ್ನು ಪ್ರಶ್ನಿಸಲಾಗಿತ್ತಾದರೂ ಸಮಾಧಾನಕರ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಜ್ಯೂಸ್ ಮಾರಾಟಗಾರರ ಮಗನನ್ನೂ ಬಂಧಿಸಲಾಗಿದೆ ಎಂದು ವರ್ಮಾ ಹೇಳಿದ್ದಾರೆ. ಜ್ಯೂಸ್ ಮಾರಾಟಗಾರರ ವಿರುದ್ಧ ಗ್ರಾಹಕರು ಹಲವು ದಿನಗಳಿಂದ ದೂರು ನೀಡುತ್ತಿದ್ದರು. ಬಳಿಕ ಪೊಲೀಸ್ ತಂಡ ಈ ಕ್ರಮ ಕೈಗೊಂಡಿದೆ. ಸದ್ಯ ಈ ವಿಚಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.