ಬೆಂಗಳೂರು : 2024-25ನೇ ಸಾಲಿನಲ್ಲಿ ರಾಜ್ಯ ಸರಕಾರವು ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜಿಂ ಪ್ರೇಮ್‌ಜಿ ಫೌಂಡೇಶನ್, ಬೆಂಗಳೂರು ಇವರ ಅನುದಾನದ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಈಗಾಗಲೇ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರದ ಹೊರತಾಗಿ) ವಾರದ ಎಲ್ಲಾ ಆರು ದಿನಗಳಲ್ಲಿ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಸಂಬಂಧ ಮಾರ್ಗಸೂಚಿ ಪ್ರಕಟಿಸಲಾಗಿದೆ.
ರಾಜ್ಯ ಸರ್ಕಾರದ ಶೇಕಡಾ 100ರ ಆರ್ಥಿಕ ಅನುದಾನದ ನೆರವಿನಿಂದ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ
ವಿದ್ಯಾರ್ಥಿಗಳಿಗೆ ಅಪೌಷ್ಟಿಕತೆ ಮತ್ತು ರಕ್ತ ಹೀನತೆ ನಿವಾರಿಸಲು ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರಕ್ಕೆ 2 ದಿನಗಳಂದು ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ, ಮೊಟ್ಟೆಯನ್ನು ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿತರಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಉಲ್ಲೇಖ-1 ಮತ್ತು 2 ರ ಆದೇಶಗಳಂತೆ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ.
ಇದಕ್ಕೆ ಬೆಂಬಲವಾಗಿ ಹಾಗೂ ಪೂರಕವಾಗಿ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸದರಿ ಕಾರ್ಯಕ್ರಮವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ರಾಜ್ಯದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ವಲಯದಿಂದ ಅಜೀಂ ಪೇಮಜಿ ಫೌಂಡೇಶನ್ ಫಾರ್ ಡೆವೆಲಪ್‌ಮೆಂಟ್ (APF) ಸಂಸ್ಥೆ, ಇವರು ತಮ್ಮ ಅನುದಾನದ ನೆರವಿನೊಂದಿಗೆ ಸಹಭಾಗಿತ್ವ ನೀಡಲು ಮುಂದ ಬಂದಿರುತ್ತಾರೆ.
2024-25ನೇ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ 02 ದಿನಗಳಿಗೆ ನೀಡುತ್ತಿರುವ ಪೂರಕ ಪೌಷ್ಠಿಕ ಆಹಾರದ ಜೊತೆಗೆ ವಾರಕ್ಕೆ ಪ್ರತಿ ವಿದ್ಯಾರ್ಥಿಗೆ ಒಟ್ಟು 06 ದಿನಗಳ ಅವಧಿಗೆ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆಯನ್ನು, ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಇತರೆ ಪೂರಕ ಪೌಷ್ಠಿಕ ಆಹಾರವಾಗಿ ಬಾಳಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸುವ ಕುರಿತಂತೆ ಅಜೀಂ ಪೇಮಜಿ ಫೌಂಡೇಶನ್ ಫಾರ್ ಡೆವೆಲಪ್‌ಮೆಂಟ್ (APF) ಸಂಸ್ಥೆಯು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಉಲ್ಲೇಖ-3 ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಇವರ ಸಮ್ಮುಖದಲ್ಲಿ ದಿನಾಂಕ 20.07.2024 ರಂದು ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ಉಲ್ಲೇಖ-4 ರಲ್ಲಿ ರಾಜ್ಯದ ಅಂದಾಜು 55,64,394 ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್-2024 ರ ಮಾಹೆಯಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಆಗುವ ಒಟ್ಟು ಅಂದಾಜು ವೆಚ್ಚ ರೂ.1591,60,14,000/- ಆರ್ಥಿಕ ಅನುದಾನವನ್ನು ಭರಿಸಲು ಒಪ್ಪಿಗೆ ಸೂಚಿಸಿ Grant Agreement ನ್ನು ದಿನಾಂಕ 27.08.2024 ರಂದು ಅನುಷ್ಠಾನಕ್ಕಾಗಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
2. ಕಾರ್ಯಕ್ರಮದ ಉದ್ದೇಶಗಳು:
* ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸಿ ಶಾಲಾ ವಿದ್ಯಾರ್ಥಿಗಳ ನಿರಂತರ ಕಲಿಕೆಯನ್ನು ಮತ್ತು ಬೌದ್ಧಿಕ ವಿಕಾಸವನ್ನು ಪ್ರೋತ್ಸಾಹಿಸುವುದು.
ಶಾಲೆಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳ ದೈನಂದಿನ ತರಗತಿ ಹಾಜರಾತಿಯನ್ನು ವೃದ್ಧಿಸುವುದು.
ವಿದ್ಯಾರ್ಥಿಗಳ ಸಮಗ್ರ ದೈಹಿಕ ಆರೋಗ್ಯ ಮತ್ತು ಬೆಳವಣಿಗೆಯನ್ನು ಉತ್ತಮಗೊಳಿಸಿ ಅಭಿವೃದ್ಧಿಪಡಿಸುವುದು.
ವಿದ್ಯಾರ್ಥಿಗಳಲ್ಲಿರುವ ಅಪೌಷ್ಠಿಕತೆ ಮತ್ತು ರಕ್ತ ಹೀನತೆಯನ್ನು ನಿವಾರಿಸುವುದು.
* ರಾಜ್ಯ ಸರ್ಕಾರ ನೀಡುತ್ತಿರುವ ವಾರಕ್ಕೆ 2 ದಿನಗಳ ಪೂರಕ ಪೌಷ್ಠಿಕ ಆಹಾರವನ್ನು ವಾರದ ಎಲ್ಲಾ ದಿನಗಳಿಗೂ ವಿಸ್ತರಿಸಿ, ವಾರದಲ್ಲಿ ಹೆಚ್ಚುವರಿಯಾಗಿ 4 ದಿನಗಳಂದು ನೀಡಿ ವಿದ್ಯಾರ್ಥಿಗಳ ಪೌಷ್ಠಿಕತೆಯನ್ನು ಬೆಂಬಲಿಸುವುದು.
ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಮೊಟ್ಟೆಗೆ ಪರ್ಯಾಯವಾಗಿ ಸಮನಾದ ಬಹು ಪೋಷಕಾಂಶಗಳುಳ್ಳ ಇತರೆ ಪೂರಕ ಪೌಷ್ಠಿಕ ಆಹಾರವನ್ನು (Eggs / Other Healthy Nutritional Supplements) 2. 3. ಕಾರ್ಯಕ್ರಮದ ಸ್ವರೂಪ:
3.1 ಅಜೀಂ ಪ್ರೇಮ್‌ಜಿ ಪೌಂಡೇಶನ್ ಫಾರ್ ಡೆವೆಲಪ್‌ಮೆಂಟ್ (APF) ಸಂಸ್ಥೆಯು ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1-10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಪೂರ್ವಪ್ರಾಥಮಿಕ ಶಾಲೆಗಳ (LKG & UKG) ವಿದ್ಯಾರ್ಥಿಗಳಿಗೂ ಸಹ ಪ್ರಸ್ತುತ ವರ್ಷದಿಂದಲೇ ಆರಂಭಿಸಿ ವಾರದ ಎಲ್ಲಾ 4 ದಿನಗಳು ಸೇರಿದಂತೆ ಒಟ್ಟು ವಾರದ 6 ದಿನಗಳಂದು ಪೂರಕ ಪೌಷ್ಠಿಕ ಆಹಾರವನ್ನು (ಸರ್ಕಾರದಿಂದ ವಿತರಿಸುತ್ತಿರುವ 2 ದಿನಗಳ ಹೊರತಾಗಿ) ವಿತರಿಸುವ ಕ್ರಮ ವಹಿಸುವುದು. ಇದರಿಂದಾಗಿ ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ ಎಲ್ಲಾ ಒಟ್ಟು 06 ಶಾಲಾ ಕರ್ತವ್ಯದ ದಿನಗಳಂದು ವಿತರಣೆ ಮಾಡುವುದು.
3.2 APF ಸಂಸ್ಥೆಯು ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನದ ಪೂರಕ ಪೌಷ್ಠಿಕ ಆಹಾರದ ವಿತರಣೆಗೆ ಭರಿಸಬೇಕಾಗಿರುವ ಘಟಕ ವೆಚ್ಚವಾಗಿ ರೂ.6/-ರ ದರದಲ್ಲಿ ಮೊಟ್ಟೆ (Eggs), ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ * (Other Healthy Nutrititional Supplements) 2 ವಿದ್ಯಾರ್ಥಿಗಳ ದೈನಂದಿನ ಹಾಜರಾತಿಯಂತೆ ವಿತರಿಸಲು ಅಗತ್ಯ ಅರ್ಥಿಕ ನೆರವು ನೀಡಲು ಉಲ್ಲೇಖ-3 ಮತ್ತು ಉಲ್ಲೇಖ-4ರಲ್ಲಾಗಿರುವ ಒಡಂಬಡಿಕೆಯಂತೆ ಕ್ರಮವಹಿಸುವುದು.
3.3 ಸದರಿ ರೂ.6/- ರ ಘಟಕ ವೆಚ್ಚವು ಮುಂದಿನ ದಿನಗಳಲ್ಲಿ ಸರ್ಕಾರದ ನಿರ್ಧಾರದಂತೆ ಪರಿಷ್ಕರಣೆಯಾದಲ್ಲಿ ಪರಿಷ್ಕರಿಸಿದ ದರದಂತೆ ಆರ್ಥಿಕ ನೆರವನ್ನು ಒದಗಿಸಲು APF ಸಂಸ್ಥೆಯು ಒಪ್ಪಿ ಒಡಂಬಡಿಕೆ ಮಾಡಿಕೊಂಡಿರುತ್ತದೆ.
3.4 ಉಲ್ಲೇಖ-1 ರಲ್ಲಿ ಹಿಂದಿನ ವರ್ಷಗಳಲ್ಲಿ ನಿರ್ವಹಿಸಿದಂತೆ ಪೂರಕ ಪೌಷ್ಠಿಕ ಆಹಾರವನ್ನು ಶಾಲಾ ಹಂತದಲ್ಲಿಯೇ ಖರೀದಿಸುವುದು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಉತ್ತಮ ಗುಣಮಟ್ಟದಲ್ಲಿ ನಿಗದಿತ ಪ್ರಮಾಣದಲ್ಲಿ ವಿತರಿಸಲು ಸೂಕ್ತ ವ್ಯವಸ್ಥೆ ಮಾಡುವುದು. ರಾಜ್ಯ ಸರ್ಕಾರದಿಂದ 02 ದಿನಗಳಿಗೆ ವಿತರಿಸಲು ಅನುದಾನ ಶಾಲೆಗಳಿಗೆ ಹಿಂದಿನ ವರ್ಷಗಳಂತೆ ಬಿಡುಗಡೆಯಾದರೆ, ವಾರದ ಉಳಿದ 04 ದಿನಗಳಿಗೆ ವಿತರಿಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್ ಫಾರ್ ಡೆವೆಲಪ್‌ಮೆಂಟ್ ಸಂಸ್ಥೆಯಿಂದ ಅನುದಾನ ಪ್ರತ್ಯೇಕವಾಗಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ತೆರೆಯಲಾಗಿರುವ ಪ್ರತ್ಯೇಕವಾದ ಕೆನರಾ ಬ್ಯಾಂಕ್ ಖಾತೆಗಳ ವ್ಯವಸ್ಥೆಯ ಮೂಲಕ ರಾಜ್ಯ, ಜಿಲ್ಲೆ, ತಾಲ್ಲೂಕು ಹಂತದಿಂದ ಶಾಲೆಗಳ ಪ್ರಸ್ತುತ MDM ಜಂಟಿ ಬ್ಯಾಂಕ್ ಖಾತೆಗಳಿಗೆ ಬೇಡಿಕೆಗೆ ಅನುಗುಣವಾಗಿ ದಿನಾಂಕ 16 ಸೆಪ್ಟೆಂಬರ್ 2024 ರಿಂದ ಅನುಷ್ಠಾನಾಧಿಕಾರಿಗಳು ಬಿಡುಗಡೆ ಮಾಡುವ ಕ್ರಮವಹಿಸುವುದು.
3.5 ರಾಜ್ಯ ಸರ್ಕಾರವು APF ಸಂಸ್ಥೆಯ ಸಹಭಾಗಿತ್ವದಲ್ಲಿ ಹೆಚ್ಚುವರಿಯಾಗಿ ವಾರದಲ್ಲಿ ನಾಲ್ಕು ದಿನ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಮೂಲಕ ಕರ್ನಾಟಕದ 55 ಲಕ್ಷ ಮಕ್ಕಳಿಗೆ ವಾರದ ಎಲ್ಲಾ 6 ದಿನಗಳಲ್ಲೂ ಮೊಟ್ಟೆ /ಬಾಳೆಹಣ್ಣು /ಶೇಂಗಾ ಚಿಕ್ಕಿ ವಿತರಿಸುವುದು.
3.6 ಸದರಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ (ಪೂರಕ ಪೌಷ್ಠಿಕ ಆಹಾರ ಖರೀದಿ, ಸಾಗಾಣಿಕೆ, ದಾಸ್ತಾನು, ಇಂದನ ವೆಚ್ಚ, ಮೊಟ್ಟೆ ಸಿಪ್ಪೆ ಸುಲಿಯುವಿಕೆ ಮತ್ತು ವಿತರಣೆಗಾಗಿ) ದಿನಾಂಕ 16.09.2024ರಿಂದ ದಿನಾಂಕ 15.09.2027ರವರೆಗೆ ಒಟ್ಟು ಮೂರು ವರ್ಷಗಳ ಅವಧಿಗೆ APF ಸಂಸ್ಥೆಯು ಅಗತ್ಯ ಅನುದಾನವಾಗಿ ರೂ.1591,60,14,000/- ಗಳನ್ನು ಒಟ್ಟು ಮೊತ್ತವಾಗಿ ಶಾಲಾ ಶಿಕ್ಷಣ ಇಲಾಖೆಗೆ ನೀಡುವುದು.