ಬೆಂಗಳೂರು: ಕ್ಷುಲ್ಲಕ ಕಾರಣಗಳಿಂದಾಗಿ ತಾಯಿಯೊಂದಿಗೆ ಜಗಳವಾಡಿದಂತ ಪುತ್ರಿಯೊಬ್ಬಳು, ಸ್ನೇಹಿತನ ಜೊತೆ ಸೇರಿ, ಉಸಿರುಗಟ್ಟಿಸಿ ಕೊಲೆ ಮಾಡಿರುವಂತ ಬೆಚ್ಚಿ ಬೀಳಿಸಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ದಿನಗಳ ಹಿಂದೆ ಸ್ನೇಹಿತ ನವನೀತ್ ಜೊತೆಗೆ ಸೇರಿಕೊಂಡು ಜಯಲಕ್ಷ್ಮೀ(46) ಎಂಬಾಕೆಯನ್ನು ಪುತ್ರಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಜಯಲಕ್ಷ್ಮೀ ಅವರು ದಿನಸಿ ಅಂಗಡಿಯನ್ನು ಇಟ್ಟುಕೊಂಡು ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೀವನ ನಡೆಸುತ್ತಿದ್ದರು. ಅವರೊಂದಿಗೆ ಆಗಾಗ ಪುತ್ರಿ ಜಗಳವಾಡುತ್ತಿದ್ದಳು. 2 ದಿನಗಳ ಹಿಂದೆ ಮನೆಯಲ್ಲಿ ಜಗಳ ತಾರಕಕ್ಕೇರಿದೆ. ಈ ವೇಳೆ ಸ್ನೇಹಿತನೊಂದಿಗೆ ಸೇರಿಕೊಂಡು ತಾಯಿಯನ್ನೇ ಪುತ್ರಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ.
ತಾಯಿ ಜಯಲಕ್ಷ್ಮೀ ಬಾತ್ ರೂಮ್ ನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂಬುದಾಗಿ ನಂಬಿಸಿದ್ದಳು. ಆದರೇ ಜಯಲಕ್ಷ್ಮೀ ಮೃತದೇಹವನ್ನು ಕಂಡಂತ ಬೊಮ್ಮನಹಳ್ಳಿ ಪೊಲೀಸರಿಗೆ ಅನುಮಾನ ಬಂದಿತ್ತು. ಹೀಗಾಗಿ ಜಯಲಕ್ಷ್ಮೀ ಪುತ್ರಿಯನ್ನು ವಶಕ್ಕೆ ಪಡೆದು ಪೊಲೀಸರ ವರಸೆಯಲ್ಲಿ ವಿಚಾರಿಸಿದಾಗ ತಾಯಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವಂತ ವಿಷಯ ಬೆಳಕಿಗೆ ಬಂದಿದೆ.
ಯಾರಿಗಾಗಿ ನೀವು ಸರಕಾರ ನಡೆಸುತ್ತಿದ್ದೀರಿ.? ಸಿದ್ಧರಾಮಯ್ಯನವರೇ ಉತ್ತರಿಸಿ: ಛಲವಾದಿ ನಾರಾಯಣಸ್ವಾಮಿ
ಕೆಲವು ದೇಶಗಳಲ್ಲಿ ಬಳಸಲು ‘ಎಂಪಾಕ್ಸ್’ ವಿರುದ್ಧ ವಿಶ್ವದ ಮೊದಲ ಲಸಿಕೆಗೆ ‘WHO’ ಅನುಮೋದನೆ | Mpox MVA-BN vaccine