ಕಲಬುರ್ಗಿ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಎನ್ನುವಂತೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವಂತ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಅಳಂದ ತಾಲ್ಲೂಕಿನ ಖಾನಾಪುರದ ಬಳಿಯಲ್ಲಿ ಇಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾಗಿದ್ದಂತ ವಿಶ್ವನಾಥ ಜಮಾದಾರ್ (50) ಎಂಬುವರನ್ನು ಬೈಕ್ ನಲ್ಲಿ ಬಂದಂತ ಇಬ್ಬರು ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಮೂರು ಬಾರಿ ಗುಂಡಿನ ದಾಳಿಯಿಂದಾಗಿ ವಿಶ್ವನಾಥ ಅವರು ಸ್ಥಳದಲ್ಲೇ ತೀವ್ರ ರಕ್ತಸ್ತ್ರಾವದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪಡಸಾವಳಿಯಿಂದ ಅಳಂದ ಪಟ್ಟಣಕ್ಕೆ ವಿಶ್ವನಾಥ ತೆರಳುತ್ತಿದ್ದಾಗ ಈ ಹತ್ಯೆ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕೆ ಕಲಬುರ್ಗಿ ಎಸ್ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಸರ್ಕಾರದಿಂದ ‘ಗ್ರಾಮ ಪಂಚಾಯ್ತಿ ವಿದ್ಯುತ್ ಹೊರೆ’ ಕಡಿಮೆಗೆ ಮಹತ್ವದ ಕ್ರಮ: ಸೌರ ಬೀದಿ ದೀಪ ಅಳವಡಿಕೆ
BREAKING: ಶೀಘ್ರವೇ ನಂದಿನಿ ಹಾಲಿನ ದರ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ | Nandini Milk Price Hike