ನವದೆಹಲಿ: ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (76) ಅವರನ್ನ ಮುಂಬೈ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಅಂದ್ಹಾಗೆ, ಈ ವರ್ಷದ ಜುಲೈನಲ್ಲಿ, ಯಾದವ್ ಅವರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದು, ನಂತ್ರ ಅವರನ್ನ ಡಿಸ್ಚಾರ್ಜ್ ಮಾಡಲಾಗಿತ್ತು.
2022ರಲ್ಲಿ, ಲಾಲು ಅವರಿಗೆ ಮೂತ್ರಪಿಂಡದ ಕಾಯಿಲೆ ಇರುವುದು ಪತ್ತೆಯಾಯಿತು, ಏಕೆಂದರೆ ಅವರ ಮೂತ್ರಪಿಂಡಗಳಲ್ಲಿ ಕೇವಲ 25 ಪ್ರತಿಶತದಷ್ಟು ಮಾತ್ರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಇನ್ನು ಸಿಂಗಾಪುರದಲ್ಲಿ ವಾಸಿಸುತ್ತಿರುವ ಅವರ ಮಗಳು ರಾಗಿಣಿ ಆಚಾರ್ಯ ಅವರು ತಮ್ಮ ಒಂದು ಮೂತ್ರಪಿಂಡವನ್ನ ತಂದೆಗಾಗಿ ದಾನ ಮಾಡಿದ್ದಾರೆ.