ಬೆಂಗಳೂರು : ನಾಗಮಂಗಲದಲ್ಲಿ ನಡೆದಿರುವುದು ಘಟನೆ ಕೋಮುಗಲಭೆ ಅಲ್ಲ. ಅದು ಸಣ್ಣ ಪ್ರಮಾಣದ ಗಲಾಟೆ, ಇದು ಪೂರ್ವ ನಿಯೋಜಿತ ಕೃತ್ಯವಲ್ಲ. ಆ ಕ್ಷಣದಲ್ಲಿ ನಡೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನಾಗಮಂಗಲದಲ್ಲಿ ನಿನ್ನೆ ನಡೆದಿರುವ ಘಟನೆ ಕೋಮುಗಲಭೆ ಅಲ್ಲ. ಗಲಾಟೆ ಆಗಬಾರದಾಗಿತ್ತು. ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ, ದೊಡ್ಡ ಪ್ರಮಾಣದಲ್ಲಿ ಹರಡಿದೆ. ಈಗ ಪರಿಸ್ಥಿತಿ ಶಾಂತವಾಗಿದೆ. ಯಾರಿಗೂ ಏನು ಗಾಯಗಳಾಗಿಲ್ಲ. ಪೊಲೀಸರು ಕಂಟ್ರೋಲಿಗೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬದರಿಕೊಪ್ಪಲದಲ್ಲಿ ಗಣಪತಿ ವಿಸರ್ಜನೆ ವೇಳೆ ಹಿಂದೂ ಮುಸ್ಲಿಂ ಗಲಾಟೆ ನಡೆದಿದ್ದು,ಗಣಪತಿ ಮೇಲೆ ಮುಸ್ಲಿಂರು ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಪೆಟ್ರೋಲ್ ಬಾಂಬ್ ಎಸೆದು ಮುಸ್ಲಿಮರ ಅಂಗಡಿಗಳಿಗೆ ಬೆಂಕಿ ಹಚ್ಚಿರುವ ವರದಿಯಾಗಿದೆ. ಸೆಪ್ಟಂಬರ್ 14ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗಲಾಟೆ ಸಂಬಂಧ ಪೊಲೀಸರು ಒಟ್ಟು 46 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.