Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಇರಾನ್ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ದಿನಾಂಕ ಪ್ರಕಟ: ಜುಲೈ 4 ರಿಂದ ವಿಧಿವಿಧಾನ ಆರಂಭ, ಜುಲೈ 9 ರಂದು ದಫನ!

​ಒಮಾನ್ ಕರಾವಳಿ ಬಳಿ ಮತ್ತೊಂದು ಭಾರತೀಯ ಹಡಗಿನ ಮೇಲೆ ದಾಳಿ ನಡೆದಿದೆ ಎಂಬ ವರದಿಗಳು ‘ಸುಳ್ಳು’: ಕೇಂದ್ರ ಸರ್ಕಾರ ಸ್ಪಷ್ಟನೆ

NEET ಮರುಪರೀಕ್ಷೆ: ಅಕ್ರಮ ಎಸಗಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾದೀತು: ಕೇಂದ್ರ ಸರ್ಕಾರ ಎಚ್ಚರಿಕೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೂಕ್ಷ್ಮ ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ : ಈ ದಾಖಲೆಗಳು ಕಡ್ಡಾಯ
KARNATAKA

ಸೂಕ್ಷ್ಮ ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ : ಈ ದಾಖಲೆಗಳು ಕಡ್ಡಾಯ

By kannadanewsnow57

ಬೆಂಗಳೂರು : ಕೃಷಿ ಇಲಾಖೆ ವತಿಯಿಂದ ನೀರಿನ ಮಿತಿ ಬಳಕೆಯಿಂದ ಅಧಿಕ ಇಳುವರಿ ಪಡೆಯಲು ಹಾಗೂ ಜಿಲ್ಲೆಯಲ್ಲಿ ಲಘು ನೀರಾವರಿ ಪದ್ಧತಿಯನ್ನು ಜನಪ್ರಿಯಗೊಳಿಸಲು ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವಂತೆ ಸೂಕ್ಷ್ಮ ನೀರಾವರಿ (ಹನಿ ನೀರಾವರಿ ಮತ್ತು ತುಂತುರು ನೀರಾವರಿ) ಘಟಕಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ವರ್ಗದ ರೈತರಿಗೆ ಕೃಷಿ ಇಲಾಖೆಯಿಂದ ಶೇ.90ರ ರಿಯಾಯಿತಿಯಲ್ಲಿ ಸೌಲಭ್ಯ ಒದಗಿಸಲಾಗುತ್ತಿದ್ದು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೌಲಭ್ಯ ಪಡೆಯಲು ಷರತ್ತುಗಳು

ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಎಲ್ಲಾ ವರ್ಗದ ರೈತರಿಗೆ 5.0 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ. ಮೊದಲ ಎರಡು ಹೆಕ್ಟೇರ್ ಪ್ರದೇಶದವರೆಗೆ ಶೇ.90 ರಷ್ಟು ಸಹಾಯಧನ ಮತ್ತು ಎರಡು ಹೆಕ್ಟೇರ್ ಗಿಂತ ಮೇಲ್ಪಟ್ಟು 5.0 ಹೆಕ್ಟೇರ್ ವರೆಗೆ ಶೇ.45 ರಷ್ಟು ಸಹಾಯಧನವನ್ನು ಸಾಮಾನ್ಯ ವರ್ಗದ ರೈತರಿಗೆ ಮತ್ತು ಶೇ.55 ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ನೀಡಲು ಅವಕಾಶವಿದೆ.

ಸರ್ಕಾರದಿಂದ ಅನುಮೋದನೆಗೊಂಡಿರುವ ಸಂಸ್ಥೆಗಳಿಂದ ಘಟಕಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಸಹಾಯಧನ ದೊರೆಯುತ್ತದೆ.

ಸೂಕ್ಷ್ಮ ನೀರಾವರಿ ಘಟಕವನ್ನು ಸಹಾಯಧನದಡಿ ಪಡೆಯಲು ಸಾಮಾನ್ಯ ವರ್ಗದ ರೈತರಿಗೆ ಒಮ್ಮೆ ಮಾತ್ರ ಹಾಗೂ ಪರಿಶಿಷ್ಟ ಜಾತಿ ರೈತರಿಗೆ ಏಳು ವರ್ಷಗಳಿಗೊಮ್ಮೆ ಮಾತ್ರ ಅವಕಾಶವಿರುತ್ತದೆ. ಏಳು ವರ್ಷಗಳ ಹಿಂದೆ, ಸೂಕ್ಷ್ಮನೀರಾವರಿ ಸವಲತ್ತು ಪಡೆದ ಪರಿಶಿಷ್ಟ ಜಾತಿ ರೈತರಿಗೆ ಮತ್ತೊಮ್ಮೆ ಸವಲತ್ತು ಪಡೆಯಲು ರೈತರಿಗೆ ಆದ್ಯತೆ ಮೇಲೆ ನೀಡಲಾಗುವುದು.

ರೈತರು ಸಹಾಯಧನದಡಿ ಸವಲತ್ತನ್ನು ಪಡೆಯಲು ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ-ಪಹಣಿ/ಹಿಡುವಳಿ ಪತ್ರ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರೈತರಿಗೆ ಜಾತಿ ಪ್ರಮಾಣ ಪತ್ರ. ಮೊಬೈಲ್ ಸಂಖ್ಯೆ, ಚೆಕ್ಕುಬಂದಿ, ನೀರಿನ ಲಭ್ಯತೆ ಪ್ರಮಾಣ ಪತ್ರ ಆಧಾರ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ, ತೋಟಗಾರಿಕೆ/ರೇಷ್ಮೆ ಇಲಾಖೆಯಿಂದ ಸಹಾಯಧನ ಪಡೆದಿರುವುದಿಲ್ಲ ಎಂಬ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ, ಐ.ಎಫ್.ಎಸ್.ಸಿ.ಕೋಡ್ ಸಂಖ್ಯೆ, 100/- ರೂ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ ಸಲ್ಲಿಸುವುದು.

ಸೂಕ್ಷ್ಮ ನೀರಾವರಿ ಘಟಕಗಳನ್ನು ಕೃಷಿಗೆ ಮಾತ್ರ ಉಪಯೋಗಿಸಲಾಗುವುದು ಎಂದು ರೈತರು ಘೋಷಣಾ ಪತ್ರ ನೀಡಬೇಕು. ರೈತರು ಕಡ್ಡಾಯವಾಗಿ FID ಹೊಂದಿರತಕ್ಕದ್ದು.

ಇಲಾಖೆಯಿಂದ ಸೂಕ್ಷ್ಮ ನೀರಾವರಿ ಘಟಕಗಳನ್ನು ಪಡೆಯಲು ಹೆಚ್ಚಿನ ವಿವರಗಳಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

Applications invited from farmers for subsidy for setting up micro irrigation units: These documents are mandatory ಸೂಕ್ಷ್ಮ ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ : ಈ ದಾಖಲೆಗಳು ಕಡ್ಡಾಯ
Share. Facebook Twitter LinkedIn WhatsApp Email

Related Posts

ರಾಜ್ಯದಲಲ್ಲೂಂದು ಘೋರ ಘಟನೆ: ನಂಬಿಸಿ ಹಣ ಪಡೆದವ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್ ಆರೋಪ: ಬೆಂಗಳೂರಿನ ನಿವಾಸಿ ಸೇರಿದಂತೆ 7 ಆರೋಪಿಗಳ ವಿರುದ್ಧ FIR ದಾಖಲು

2 Mins Read

BIG NEWS: ಬೆಂಗಳೂರು ಅಭಿವೃದ್ಧಿ ಖಾತೆ ಸ್ವೀಕರಿಸಲು ಕೃಷ್ಣ ಬೈರೇಗೌಡ ಹಿಂದೇಟು: ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲೇ ಸಚಿವರ ಓಡಾಟ!

2 Mins Read
Recent News

​ಇರಾನ್ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ದಿನಾಂಕ ಪ್ರಕಟ: ಜುಲೈ 4 ರಿಂದ ವಿಧಿವಿಧಾನ ಆರಂಭ, ಜುಲೈ 9 ರಂದು ದಫನ!

​ಒಮಾನ್ ಕರಾವಳಿ ಬಳಿ ಮತ್ತೊಂದು ಭಾರತೀಯ ಹಡಗಿನ ಮೇಲೆ ದಾಳಿ ನಡೆದಿದೆ ಎಂಬ ವರದಿಗಳು ‘ಸುಳ್ಳು’: ಕೇಂದ್ರ ಸರ್ಕಾರ ಸ್ಪಷ್ಟನೆ

NEET ಮರುಪರೀಕ್ಷೆ: ಅಕ್ರಮ ಎಸಗಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾದೀತು: ಕೇಂದ್ರ ಸರ್ಕಾರ ಎಚ್ಚರಿಕೆ

ಜಿ-7 ಶೃಂಗಸಭೆ: ಫ್ರಾನ್ಸ್, ಸ್ಲೋವಾಕಿಯಾಗೆ ಪ್ರಧಾನಿ ಮೋದಿ ಐತಿಹಾಸಿಕ ಪ್ರವಾಸ ಆರಂಭ

State News
KARNATAKA

ರಾಜ್ಯದಲಲ್ಲೂಂದು ಘೋರ ಘಟನೆ: ನಂಬಿಸಿ ಹಣ ಪಡೆದವ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಕಾರವಾರ: ಕಾಲೇಜು ಶುಲ್ಕ ಪಾವತಿಸಲು ತಂದೆ ಕೊಟ್ಟಿದ್ದ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿ, ಆತ ಹಣವನ್ನು ಸಕಾಲದಲ್ಲಿ ಮರಳಿ ನೀಡದ…

ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್ ಆರೋಪ: ಬೆಂಗಳೂರಿನ ನಿವಾಸಿ ಸೇರಿದಂತೆ 7 ಆರೋಪಿಗಳ ವಿರುದ್ಧ FIR ದಾಖಲು

BIG NEWS: ಬೆಂಗಳೂರು ಅಭಿವೃದ್ಧಿ ಖಾತೆ ಸ್ವೀಕರಿಸಲು ಕೃಷ್ಣ ಬೈರೇಗೌಡ ಹಿಂದೇಟು: ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲೇ ಸಚಿವರ ಓಡಾಟ!

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.