ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪರಾರಿಯಾಗಿರುವ ನೀರವ್ ಮೋದಿಗೆ ಸೇರಿದ 29 ಕೋಟಿ 75 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಬ್ಯಾಂಕ್ ಬ್ಯಾಲೆನ್ಸ್’ನ್ನ ಜಾರಿ ನಿರ್ದೇಶನಾಲಯ (ED) ಬುಧವಾರ ವಶಪಡಿಸಿಕೊಂಡಿದೆ. ಪಿಎನ್‌ಬಿ ಬ್ಯಾಂಕ್ ಹಗರಣ ಪ್ರಕರಣದಲ್ಲಿ ಪರಾರಿಯಾಗಿರುವ ನೀರವ್ ಮೋದಿ ವಿರುದ್ಧ ಇಡಿ ಈ ಕ್ರಮ ಕೈಗೊಂಡಿದೆ. 6498 ಕೋಟಿ ರೂ.ಗಳ ಈ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್’ನಲ್ಲಿ ಇಸಿಐಆರ್ ದಾಖಲಿಸಿಕೊಂಡು ಇಡಿ ತನಿಖೆ ಆರಂಭಿಸಿತ್ತು. ತನಿಖೆಯ ವೇಳೆ ನೀರವ್ ಮೋದಿ ಮತ್ತು ಅವರ ಗ್ರೂಪ್ ಕಂಪನಿಗಳ ಕೋಟ್ಯಂತರ ಮೌಲ್ಯದ ಭೂಮಿ ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಇಡಿ ತಿಳಿದು ಬಂದಿದೆ.
ಇದಕ್ಕೂ ಮೊದಲು ನೀರವ್ ಮೋದಿ ಮತ್ತು ಅವರ 2596 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ.
ಮುಂಬೈನ ಸಿಬಿಐ, ಬಿಎಸ್ ಮತ್ತು ಎಫ್‌ಸಿ ಬ್ರಾಂಚ್ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ 1860 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್‌ಗಳ ಅಡಿಯಲ್ಲಿ ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಇಡಿ ತನಿಖೆಯನ್ನು ಪ್ರಾರಂಭಿಸಿದೆ.
ಮುಂದಿನ 3-4 ತಿಂಗಳಲ್ಲಿ ‘ಸೆಮಿಕಾನ್ 2.0 ನೀತಿ’ ಜಾರಿ : ಸಚಿವ ಅಶ್ವಿನಿ ವೈಷ್ಣವ್
BREAKING: ರಾಜ್ಯ ಸರ್ಕಾರದಿಂದ ಈ ಜಿಲ್ಲೆಗಳಿಗೆ ‘ಮಕ್ಕಳ ಕಲ್ಯಾಣ ಸಮಿತಿ’ಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ಆದೇಶ
1 ಕೋಟಿಗೂ ಹೆಚ್ಚು ‘ಸಂಖ್ಯೆ’ಗಳು ಸ್ವಿಚ್ ಆಫ್, ‘ಸಿಮ್ ಕಾರ್ಡ್’ಗಳ ವಿರುದ್ಧ ಕೇಂದ್ರ ಸರ್ಕಾರ ಮಹತ್ವದ ಕ್ರಮ